ಭಟ್ಕಳ: ಅಪಾಯಕಾರಿ ರೀತಿಯಲ್ಲಿ ಶಿಲೆ ಕಲ್ಲುಗಳನ್ನು ತುಂಬಿಕೊಂಡು ಕುಂದಾಪುರ ಕಡೆಯಿಂದ ಬರುತ್ತಿದ್ದಟಿಪ್ಪರ್ ಲಾರಿಗಳನ್ನು ಸಾರ್ವಜನಿಕರು ಅಡ್ಡಹಾಕಿಪೊಲೀಸರಿಗೊಪ್ಪಿಸಿದ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮಣ್ಕುಳಿಯಲ್ಲಿ ನಡೆದಿದೆ.
ಇಲ್ಲಿನ ಅಳ್ವೇಕೋಡಿಯಲ್ಲಿ ನಡೆಯುತ್ತಿರುವ ಸಮುದ್ರದಲ್ಲಿನ ಬ್ರೇಕ್‌ವಾಟರ್ ನಿರ್ಮಾಣ ಕಾರ್ಯಕ್ಕೆ ಕುಂದಾಪುರ ಕಡೆಯಿಂದ ಶಿಲೆಕಲ್ಲುಗಳನ್ನು ಟಿಪ್ಪರ್‌ಗಳ ಮೇಲೆ ಸಾಗಿಸಲಾಗುತ್ತಿದೆ.ಇವು ಸಾಮರ್ಥ್ಯಕ್ಕಿಂತ ಹೆಚ್ಚು ಕಲ್ಲುಗಳನ್ನು ಅಪಾಯಕಾರಿ ರೀತಿಯಲ್ಲಿ ತುಂಬಿಕೊಂಡುಬರುತ್ತಿವೆ. ಇದರಿಂದ ಸಣ್ಣಪುಟ್ಟ ವಾಹನಗಳಿಗೆಭಯದ ವಾತಾವರಣ ಉಂಟಾಗುತ್ತಿದೆ. ಅಲ್ಲದೇ,ಒಂದು ವೇಳೆ ಟಿಪ್ಪರ್ ಲಾರಿಯ ಚಾಲಕ ತುರ್ತು ಬ್ರೇಕ್ ಹಾಕುವ ಪ್ರಸಂಗ ಎದುರಾದಲ್ಲಿ ಬಂಡೆ ಕಲ್ಲುಟಿಪ್ಪರ್ ಲಾರಿಯಿಂದ ಕೆಳಕ್ಕುರುಳುವ ಸಾಧ್ಯತೆಯೇ ಹೆಚ್ಚು ಇದ್ದು ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿಹಾನಿಯಾಗುವುದಲ್ಲದೇ ಜೀವ ಹಾನಿಯೂ ಆಗುವಸಂಭವ ಹೆಚ್ಚಿದೆ. ಇದರಿಂದ ಎಚ್ಚೆತ್ತ ಸಾರ್ವಜನಿಕರುಅತ್ಯಂತ ಅಪಾಯಕಾರಿ ರೀತಿಯಲ್ಲಿ ಕಲ್ಲುಗಳನ್ನತುಂಬಿಕೊಂಡು ಬರುತ್ತಿದ್ದ ಎರಡು ಲಾರಿಗಳನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ.
ಅಳ್ವೆಕೋಡಿ-ತೆಂಗಿನಗುಂಡಿ ಬಂದರಿಗೆ ಕಲ್ಲು: ಅಳ್ವೇಕೋಡಿ ಹಾಗೂ ತೆಂಗಿನಗುಂಡಿ ಬಂದರು ಕಾಮಗಾರಿ ನಡೆಯುತ್ತಿದ್ದು ಇಲ್ಲಿನ ಬ್ರೇಕ್‌ವಾಟರ್ ನಿಮಾಣ, ಬಂದರು ನಿರ್ಮಾಣ ಇತ್ಯಾದಿಕೋಟ್ಯಂತರ ರೂ. ಕಾಮಗಾರಿ ಟೆಂಡರ್ ಆಗಿದ್ದುಕಾಮಗಾರಿಯು ಆರಂಭವಾಗಿ ಎರಡು ವರ್ಷಗಳೇಕಳೆದಿದೆ. ಕೊರೊನಾದಿಂದಾಗಿ ಕಾಮಗಾರಿವಿಳಂಬವಾಗಿದ್ದು ಕಳೆದ ಕೆಲವು ತಿಂಗಳುಗಳಿಂದನಿರಂತರವಾಗಿ ಕುಂದಾಪುರ ಕಡೆಯಿಂದ ಟಿಪ್ಪರ್ ಗಳಲ್ಲಿ ಕಲ್ಲು ಬಂಡೆಗಳನ್ನು ಸಾಗಿಸಲಾಗುತ್ತಿದೆ.
ಅಳ್ವೇಕೋಡಿ -ತೆಂಗಿನಕುಗಂಡಿ ಬಂದರು ಕಾಮಗಾರಿ ತ್ವರಿತವಾಗಿ ಆಗಬೇಕಾಗಿರುವುದುನಿಜವಾದರೂ ಇಲ್ಲಿ ಜನರ ಪ್ರಾಣವನ್ನು ಪಣಕ್ಕಿಟ್ಟುಅಪಾಯಕಾರಿ ರೀತಿಯಲ್ಲಿ ಬಂಡೆಗಳನ್ನು ಸಾಗಿಸುವುದು ಎಷ್ಟು ಸರಿ ಎನ್ನುವುದು ನಾಗರಿಕರಪ್ರಶ್ನೆಯಾಗಿದೆ.
ಇಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಕಡೆ,ಪೊಲೀಸ್ ಇಲಾಖೆ ಸಾರಿಗೆ ಇಲಾಖೆಯಕಡೆಗೆ ಬೊಟ್ಟು ಮಾಡುತ್ತಾ ಮೂರೂಇಲಾಖೆಗಳು ಜವಾಬ್ದಾರಿಯಿಂದತಪ್ಪಸಿಕೊಳ್ಳುತ್ತಿದ್ದುದು ಸರಿಯಲ್ಲ. ಜನರಜೀವದ ಜೊತೆ ಚೆಲ್ಲಾಟವಾಡುವವರನ್ನು ನಿಯಂತ್ರಿಸಬೇಕಾಗಿದೆ.
– ಶ್ರೀಕಾಂತ ನಾಯ್ಕ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ