Advertisement

ಬಂಟ್ವಾಳ: ಕಾಲೇಜು ಯುವತಿಗೆ ಚಿಕ್ಕಪ್ಪನಿಂದಲೇ ನಿರಂತರ ದೈಹಿಕ ಅತ್ಯಾಚಾರ

04:22 PM Jun 14, 2021 | Team Udayavani |

ಬಂಟ್ವಾಳ: ಚಿಕ್ಕಪ್ಪನಿಂದಲೇ ನಿರಂತರವಾಗಿ ದೈಹಿಕ ಅತ್ಯಾಚಾರಗೊಳಗಾದ ಯುವತಿಯ ದೂರಿನ ಮೇರೆಗೆ   ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದಿದೆ.

Advertisement

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪ.ವ್ಯಾಪ್ತಿಯ ಆಲಾಡಿ ನಿವಾಸಿ ಪುರುಷೋತ್ತಮ ಎಂಬಾತ ಆತನ ಪತ್ನಿಯ ಅಕ್ಕ‌ನ ಮಗಳ ಮೇಲೆಯೇ ನಿರಂತರವಾಗಿ ಬೆದರಿಕೆ ಹಾಕಿ ಬಲಾತ್ಕಾರ ಮಾಡಿ ಅತ್ಯಾಚಾರ ಮಾಡಿದ್ದಾನೆ ಎಂದು ಕಾಲೇಜು ವಿದ್ಯಾರ್ಥಿನಿ ದೂರು ನೀಡಿದ್ದಾಳೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಬರುತ್ತದಾ? ಉಡುಪಿಯ ವೈರಲ್ ವಿಡಿಯೋಗೆ DC ಸ್ಪಷ್ಟನೆ

ಕಳೆದ ಒಂದು ವರ್ಷದಿಂದ ಯುವತಿ ಬಿಸಿರೋಡು ಸಂಬಂಧಿಕರ ಮನೆಯಿಂದ ಕಾಲೇಜು ಹೋಗುತ್ತಿದ್ದು ಅಲ್ಲೇ ಆರೋಪಿ ಪುರುಷೋತ್ತಮ ಕೂಡ ವಾಸವಾಗಿದ್ದ, ಅವಾಗಿಂದಲೇ ಆರೋಪಿ ವಿದ್ಯಾರ್ಥಿ ನಿಗೆ ಬೆದರಿಕೆ ಹಾಕಿ ಅವಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಲೇ ಬಂದಿದ್ದ ಎಂದು ಆರೋಪಿಸಲಾಗಿದೆ.ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಈತನ  ಟಾರ್ಚ್ ರ್ ತಡೆಯಲಾಗದೆ  ಸಂತೃಸ್ತೆ ಮನೆಯವರಿಗೆ ತಿಳಿಸಿ ಠಾಣೆಗೆ ದೂರು ನೀಡಿದ್ದಾಳೆ.

ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ  ಯುವತಿ ದೂರಿನಂತೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next