ಬಂಟ್ವಾಳ: ಪಾಣೆಮಂಗಳೂರು ಸಮೀಪದ ಗೂಡಿನಬಳಿಯಲ್ಲಿ ನೇತ್ರಾವತಿ ಹಳೆ ಸೇತುವೆಯಿಂದ ವ್ಯಕ್ತಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ನರಿಕೊಂಬು ಗ್ರಾಮದ ನಾಟಿ ನಿವಾಸಿ ಮೋನಪ್ಪ(65) ಆತ್ಮಹತ್ಯೆ ಮಾಡಿಕೊಂಡವರು.
ಅವರು ನರಿಕೊಂಬು ಗ್ರಾ.ಪಂ.ನಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಪಂಪ್ ಆಪರೇಟರ್ ಆಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಗುರುವಾರ ಬೆಳಗ್ಗೆ ಅವರು ನೀರಿಗೆ ಹಾರಿರುವುದನ್ನು ಕಂಡ ಸ್ಥಳೀಯ ಈಜುಗಾರರಾದ ಸಿದ್ದೀಕ್ ಎಂ.ಕೆ, ತಂಶೀರ್, ಸತ್ಯ, ಇಜ್ಜು ರಿಝ್ವಾನ್, ಅಮೀನ್, ಇನಾಯತ್, ಇಸ್ಮಾಯಿಲ್ ಅರಬಿ ಅವರು ತತ್ಕ್ಷಣ ನೀರಿಗೆ ಹಾರಿ ಅವರ ರಕ್ಷಣೆಗೆ ಮುಂದಾಗಿದ್ದು, ಆದರೆ ಅದಾಗಲೇ ಅವರು ಮೃತಪಟ್ಟಿದ್ದರು.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.