Advertisement
ಸೋದೇವನಹಳ್ಳಿಯ ಗುಣಿ ಅಗ್ರಹಾರ ಗ್ರಾಮದ ನಿವಾಸಿ ಜೋಸೆಫ್ ಗ್ರೇಸ್ (76) ಬಂಧಿತ ವೃದ್ಧೆ. ರಾಜಣ್ಣ, ನಾಗಣ್ಣ, ಪ್ರಕಾಶ್, ಗಂಗಮ್ಮ, ಕೃಷ್ಣ, ಶ್ರೀರಾಮ, ಮದನ್ ಎಂಬುವರಿಗೆ ಸೇರಿದ 9 ಹಸುಗಳಿಗೆ ಗಾಯಗಳಾಗಿವೆ.
Related Articles
Advertisement
ವೃದ್ಧೆ ಸಿಕ್ಕಿ ಬಿದ್ದಿದ್ದು ಹೇಗೆ?:
ಭಾನುವಾರ ಸಂಜೆ ಜೋಸೆಫ್ ಗ್ರೇಸ್ ಮನೆ ಮುಂದಿನ ಖಾಲಿ ಜಾಗದಲ್ಲಿದ್ದ ಹುಲ್ಲುಗಳಿಗೆ ಯಾವುದೋ ರಾಸಾಯನಿಕ ಸಿಂಪಡಿಸಿದ್ದರು. ಆ ವೇಳೆ ಹುಲ್ಲು ಸುಟ್ಟು ಹೋಗಿತ್ತು. ಇದನ್ನು ಸ್ಥಳೀಯ ನಿವಾಸಿಗಳು ಗಮನಿಸಿದ್ದರು. ಈ ಬಗ್ಗೆ ವೃದ್ಧೆಯ ಬಳಿ ಹೋಗಿ ವಿಚಾರಿಸಿದಾಗ ಇಲ್ಲಿಗೆ ಪ್ರತಿದಿನ ಹಸುಗಳು ಹುಲ್ಲು ಮೇಯಲು ಬರುತ್ತವೆ. ಹೀಗಾಗಿ ಹುಲ್ಲಿಗೆ ಆ್ಯಸಿಡ್ ಹಾಕಿದ್ದೇನೆ. 15 ದಿನಗಳ ಹಿಂದೆ ಹಸುಗಳ ಮೇಲೂ ಆ್ಯಸಿಡ್ ಎರಚಿದ್ದೆ ಎಂದು ಹೇಳಿದ್ದರು. ಈ ಸಂಗತಿಯನ್ನು ಸ್ಥಳೀಯರು ಹಸುಗಳ ಮಾಲೀಕರ ಗಮನಕ್ಕೆ ತಂದಿದ್ದರು. ತಮ್ಮ ಹಸುಗಳ ಮೈಗೆ ಹೇಗೆ ಗಾಯವಾಗಿದೆ ಎಂಬ ಚಿಂತೆಯಲ್ಲಿದ್ದ ಮಾಲೀಕರಿಗೆ ಇದು ಜೋಸೆಫ್ ಗ್ರೇಸ್ ಕೃತ್ಯ ಎಂಬುದು ದೃಢಪಟ್ಟಿತ್ತು. ಕೂಡಲೇ ಸೋಲದೇವನಹಳ್ಳಿ ಠಾಣೆಗೆ ಬಂದು ವೃದ್ಧೆಯ ಕೃತ್ಯ ವಿವರಿಸಿ ಆಕೆಯ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ಜೋಸೆಫ್ ಗ್ರೇಸ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಹಸುಗಳ ಆಕ್ರಂದನ ಕೇಳ್ಳೋರ್ಯಾರು?:
ಗಾಯಗೊಂಡ ಹಸುಗಳು ನೋವಿನಿಂದ ನರಳಾಡುತ್ತಿವೆ. ಮೈ ಮೇಲಿನ ಗಾಯಕ್ಕೆ ಸರಿಯಾಗಿ ಮೇಯಲೂ ಆಗದೇ, ಆಹಾರ ತಿನ್ನಲು ಆಗದೇ ಒದ್ದಾಡುತ್ತಿದೆ. ಇವುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಅಗತ್ಯವಿದೆ. ಕೆಲವು ಹಸುಗಳಿಗೆ ಗಂಭೀರವಾಗಿ ಗಾಯವಾಗಿದ್ದು, ಕ್ರಿಮಿ, ಕೀಟಗಳು ಗಾಯಗಳ ಮೇಲೆ ತಾಗಿ ಇನ್ನಷ್ಟು ಸ್ಥಂದಿಗª ಪರಿಸ್ಥಿತಿಯಲ್ಲಿದೆ. ಮತ್ತೂಂದೆಡೆ ಈ ವಿಚಾರ ತಿಳಿದ ಸ್ಥಳೀಯರು, ಸಾರ್ವಜನಿಕರು ವೃದ್ಧೆಯ ಅಮಾನವೀಯ ಕೃತ್ಯದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಹಸುಗಳು ಮೇಯಲು ಬಂದಾಗ ಅವುಗಳ ಮೇಲೆ ಇಂತಹ ಪೈಶಾಚಿಕ ಕೃತ್ಯ ಎಸಗಿರುವುದು ತಪ್ಪು ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬಂದಿವೆ.