Advertisement

ಸಿಬಿಐ ನೂತನ ಮುಖ್ಯಸ್ಥ  ಪದಗ್ರಹಣ

12:30 AM Feb 05, 2019 | Team Udayavani |

ಹೊಸದಿಲ್ಲಿ: ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನೂತನ ನಿರ್ದೇಶಕರಾಗಿ ನೇಮಕ ಗೊಂಡಿರುವ ರಿಷಿ ಕುಮಾರ್‌ ಶುಕ್ಲಾ ಅವರು, ಸೋಮವಾರ ಅಧಿಕಾರ ವಹಿಸಿಕೊಂಡರು. ಕೋಲ್ಕತಾದಲ್ಲಿ ಸಿಬಿಐ ಅಧಿಕಾರಿಗಳ ಬಂಧನ ಹಾಗೂ ಅಲ್ಲಿನ ಮಮತಾ ಬ್ಯಾನರ್ಜಿ ಸರಕಾರ ಹಾಗೂ ಕೇಂದ್ರ ಸರಕಾರಗಳ ನಡುವೆ ಭುಗಿಲೆದ್ದಿರುವ ರಾಜಕೀಯ ಜ್ವಾಲಾಮುಖೀಯ ಸಂದರ್ಭದಲ್ಲೇ ಅವರು ಪದಗ್ರಹಣ ಮಾಡಿರುವುದು ಕುತೂಹಲ ಮೂಡಿಸಿದೆ.

Advertisement

ಕೋಲ್ಕತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ವಿಚಾರಣೆಗೊಳಪಡಿಸಲು ಪಶ್ಚಿಮ ಬಂಗಾಲ ಸಿಎಂ ಮಮತಾ ಅಡ್ಡಿಪಡಿಸಿ ಧರಣಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಿಬಿಐ, ಈಗಾಗಲೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ, ಶುಕ್ಲಾ ಅವರು ಕೆಲವು ಆದೇಶಗಳನ್ನು ಜಾರಿಗೊಳಿಸಬಹುದೆಂದು ನಿರೀಕ್ಷಿಸಲಾಗಿದೆ. 

ಜೇಟ್ಲಿಗೆ ಖರ್ಗೆ ಪ್ರತ್ಯುತ್ತರ: ಸಿಬಿಐ ನಿರ್ದೇಶಕರನ್ನಾಗಿ ರಿಷಿ ಕುಮಾರ್‌ ಶುಕ್ಲಾ ಅವರನ್ನು ನೇಮಿಸಿದ ಹಿನ್ನೆಲೆಯಲ್ಲಿ ಪ್ರಧಾನಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ತಮ್ಮ ವಿರುದ್ಧ ಬ್ಲಾಗ್‌ನಲ್ಲಿ ಟೀಕೆ ಮಾಡಿದ್ದ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರಿಗೆ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತ್ಯುತ್ತರ ನೀಡಿದ್ದಾರೆ. ಜೇಟಿÉಯವರಿಗೆ 2 ಪುಟಗಳಲ್ಲಿ ತಮ್ಮ ಉತ್ತರ ರವಾನಿಸಿರುವ ಅವರು, “ಸಿಬಿಐ ನಿರ್ದೇಶಕರ ಆಯ್ಕೆ ವಿಚಾರದಲ್ಲಿ ಔಪಚಾರಿಕತೆಯನ್ನು ನಿರ್ಲಕ್ಷಿಸಿದ್ದಕ್ಕೆ ತಮ್ಮ ವಿರೋಧವೇ ಹೊರತು, ಅಧಿಕಾರಿಯ ಸಮಗ್ರತೆಯ ವಿರುದ್ಧವಾಗಿ ಅಲ್ಲ’ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next