Advertisement

ಮಹಿಳಾ ಅಂಚೆ ಕಚೇರಿ ಉದ್ಘಾಟನೆ

12:09 PM Mar 10, 2020 | Suhan S |

ಬೀದರ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭ ಸಂದರ್ಭದಲ್ಲಿ ಮಹಿಳೆಯರ ಸೌಕರ್ಯಕ್ಕಾಗಿ ಪ್ರಥಮ ಮಹಿಳಾ ಅಂಚೆ ಕಚೇರಿಯನ್ನು ಲೋಕಾರ್ಪಣೆ ಮಾಡಲಾಯಿತು.

Advertisement

ವೈದ್ಯಾಧಿಕಾರಿ ಡಾ| ಉಮಾ ದೇಶಮುಖ ಕಚೇರಿ ಉದ್ಘಾಟಿಸಿ ಮಾತನಾಡಿ, ಮಹಿಳಾ ಅಂಚೆ ಕಚೇರಿ ತೆರೆದು ಅಂಚೆ ಇಲಾಖೆ ಮಹಿಳೆಯರ ಪರ ತನ್ನ ಗೌರವವನ್ನು ವ್ಯಕ್ತಪಡಿಸಿದೆ. ಪರಿಪೂರ್ಣವಾಗಿ ಜನ್ಮ ತಳೆದ ಮಹಿಳೆ, ಏನನ್ನಾದರೂ ಸಾಧಿಸಬಲ್ಲಳು. ಅದೇ ಮಹಿಳೆಯರು ಜೊತೆಗೂಡಿದಲ್ಲಿ ಜಗತ್ತನ್ನೇ ಗೆಲ್ಲಬಲ್ಲರು ಎಂದರು.

ಡಾ| ವಿಜಯಕುಮಾರ ಅಂತಪ್ಪನವರ ಮಾತನಾಡಿ, ಅಂಚೆ ಇಲಾಖೆಯ ಈ ಪ್ರಗತಿಪರ ಸಂವೇದನೆಯನ್ನು ಶ್ಲಾಘಿಸಿದರು. ಅಂಚೆ ಅಧಿಧೀಕ್ಷಕ ವಿ.ಎಸ್‌.ಎಲ್‌. ನರಸಿಂಹರಾವ್‌ ಮಾತನಾಡಿ, ಜಿಲ್ಲೆಯ ಪ್ರಪ್ರಥಮ ಮಹಿಳಾ ಅಂಚೆ ಕಚೇರಿ ಇದಾಗಿದೆ. ಇಲ್ಲಿ ಕೇವಲ ಮಹಿಳಾ ಸಿಬ್ಬಂದಿಗಳೇ ಕೆಲಸ ನಿರ್ವಹಿಸುಹಿಸುತ್ತಾರೆ. ಮಹಿಳಾ ಗ್ರಾಹಕರು ಸಂಕೋಚವಿಲ್ಲದೇ ಇಲ್ಲಿ ತಮ್ಮ ವ್ಯವಹಾರಗಳನ್ನು ಮಾಡಿಕೊಳ್ಳಬಹುದು ಎಂದು ಹೇಳಿದರು.

ಅಂಚೆ ಇಲಾಖೆಯ ಎಲ್ಲ ಮಹಿಳಾ ಸಿಬ್ಬಂದಿಗಳ ಪ್ರತಿನಿಧಿಯಾಗಿ ಮಂಗಲಾ ಭಾಗವತ ಅವರನ್ನು ಸನ್ಮಾನಿಸಲಾಯಿತು. ಕಲ್ಲಪ್ಪ ಕೋಣಿ ಸ್ವಾಗತಿಸಿದರು. ಮಂಗಲಾ ಭಾಗವತ ವಂದಿಸಿದರು. ಉಪ ಅಂಚೆ ಅ ಧೀಕ್ಷಕರಾದ ರಾಜೀವಕುಮಾರ, ರವೀಂದ್ರ ಕುಮಾರ, ಗುಂಡಪ್ಪ ಕನಕ, ಮಿರ್ಜಾ ಬೇಗ್‌ ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next