Advertisement

ಗ್ರಾಮ ಸಮೃದ್ಧಿ, ಸ್ವಚ್ಚತಾ ಪ್ರಾತ್ಯಕ್ಷಿಕೆ ಉದ್ಘಾಟನೆ

01:15 PM Oct 06, 2017 | |

ಮೂಲ್ಕಿ: ಗಾಮೀಣ ಪ್ರದೇಶಗಳ ಪರಿಸರವನ್ನು ಹಾಳುಗೆಡವಲು ಬಿಡದೆ ಹಸಿರಿನಿಂದ ಕೂಡಿದ ಸಮೃದ್ಧ ಶುದ್ಧ ಗಾಳಿಯ ವಾತಾವರಣದಲ್ಲಿ ಉಳಿಸುವ ಕೆಲಸ ನಮ್ಮ ಗ್ರಾಮದಲ್ಲಿ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದು ಕಿಲ್ಪಾಡಿ ಪಂಚಾಯತ್‌ ಅಧ್ಯಕ್ಷ ಶ್ರೀಕಾಂತ್‌ ರಾವ್‌ ಹೇಳಿದರು.

Advertisement

ಅವರು ಕಿಲ್ಪಾಡಿ ಪಂಚಾಯತ್‌ ಆಶ್ರಯದಲ್ಲಿ ಕಿಲ್ಪಾಡಿಯ ಮೆಡಲಿನ್‌ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಗ್ರಾಮ ಸಮೃದ್ಧಿ ಮತ್ತು ಸ್ವಚ್ಚತಾ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಂಚಾಯತ್‌ ಸದಸ್ಯರು, ಸಿಬಂದಿ ಹಾಗೂ ವಿದ್ಯಾರ್ಥಿಗಳು ವಿವಿಧ ಘೋಷಣ ಫಲಕಗಳನ್ನು ಹೊತ್ತು ಕಿಲ್ಪಾಡಿ ಪಂಚಾಯತ್‌ನಿಂದ ಪಂಚಾಯತ್‌ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಯವರೆಗೆ ಜಾಥಾ ನಡೆಸಿದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಸಿ| ಜೆಸ್ಸಿ ಕ್ರಾಸ್ತ, ಸದಸ್ಯರಾದ ಗೋಪಿನಾಥ ಪಡಂಗ, ನಾಗರಾಜ, ಶಾಂತಾ, ಅಬ್ದುಲ್‌ ಷರೀಫ್‌, ಸಿಬಂದಿ ರಮೇಶ್‌ ಬಂಗೇರ,ಸುರೇಶ್‌ ಕೊಲಕಾಡಿ, ಸಬಿತಾ ಶೆಟ್ಟಿ,ಚೇತನ್‌, ಯತೀಶ್‌, ತಾರಾನಾಥ ಶೆಟ್ಟಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next