ಮಲ್ಪೆ: ಉಡುಪಿ ವಿಧಾನಸಭಾ ಕ್ಷೇತ್ರದ ಕಡೆಕಾರ್ ಗ್ರಾ.ಪಂ. ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಕಾಮಗಾರಿಗಳಿಗೆ ಭೂಮಿ ಪೂಜೆ ರವಿವಾರ ನಡೆಯಿತು.
ಶಾಸಕ ಕೆ. ರಘುಪತಿ ಭಟ್ ಆಗಿರುವ ಕಾಮಗಾರಿಗಳ ಉದ್ಘಾಟನೆ ಮತ್ತು ಆಗಲಿರುವ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಕಡೆಕಾರು ಬಬ್ಬು ದೈವಸ್ಥಾನದ ಬಳಿಯಿಂದ ಮೂಡುಬೈಲಿಗಾಗಿ ಕನ್ನರ್ಪಾಡಿ ರಸ್ತೆಯನ್ನು ಸಂಪರ್ಕಿಸುವ ರಸ್ತೆ ಹಾಗೂ ಪರಿಸರದ ಕೆಲವು ರಸ್ತೆಗಳು ಸೇರಿ 45 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಕಾಮಗಾರಿಗೆ ಭೂಮಿ ಪೂಜೆ ನಡೆಯಿತು.
25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕನ್ನರ್ಪಾಡಿ ಡಿಲಿಮಾ ಲೇಔಟ್ ರಸ್ತೆಯ ಕಾಂಕ್ರೀಟ್ ಕಾಮಗಾರಿ, 20 ಲಕ್ಷ ರೂ. ವೆಚ್ಚದಲ್ಲಿ ಕುತ್ಪಾಡಿ ಗರಡಿ ರಸ್ತೆಯಲ್ಲಿ ದಿ| ವೆಂಕಟಾಚಲ ಭಟ್ ಮನೆ ಬಳಿಯ ಪರಿಸರಕ್ಕೆ ಸಂಪರ್ಕಿಸುವ ರಸ್ತೆಯ ಕಾಂಕ್ರೀಟ್ ಕಾಮಗಾರಿ, ಅನಂತಕೃಷ್ಣ ನಗರದ 3ನೇ ಹಾಗೂ 4ನೇ ಅಡ್ಡ ರಸ್ತೆ ಮತ್ತು ಡಾ| ವಿ.ಎಸ್. ಆಚಾರ್ಯ ರಸ್ತೆಯ 20 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಕಾಮಗಾರಿ ಹಾಗೂ 40 ಲಕ್ಷ ರೂ. ವೆಚ್ಚದಲ್ಲಿ ಕುತ್ಪಾಡಿ ಕೋಟಿ ಚೆನ್ನಯ ರಸ್ತೆಯ ಮರು ಡಾಮರು ಕಾಮಗಾರಿ ಮತ್ತು ಆಯ್ದ ಭಾಗಗಳ ಕಾಂಕ್ರೀಟ್ ಕಾಮಗಾರಿ ಮತ್ತು 25 ಲಕ್ಷ ರೂ. ವೆಚ್ಚದ ಕಡೆಕಾರು ಲಯನ್ಸ್ ಕಾಲನಿ ಬಳಿಯ ರಸ್ತೆಯ ಕಾಂಕ್ರೀಟ್ ಕಾಮಗಾರಿ ಯನ್ನು ಶಾಸಕರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭ ಜಿ. ಪಂ. ಅಧ್ಯಕ್ಷ ದಿನಕರ್ ಬಾಬು, ತಾ.ಪಂ. ಸದಸ್ಯೆ ಶಿಲ್ಪಾ ಕೋಟ್ಯಾನ್, ಕಡೆಕಾರ್ ಗ್ರಾ.ಪಂ. ಅಧ್ಯಕ್ಷೆ ರಘುನಾಥ್ ಕೋಟ್ಯಾನ್, ಪಂಚಾಯತ್ ಸದಸ್ಯ ರಾದ ಪ್ರದೀಪ್ ಚಂದ್ರ ಕಡೆಕಾರ್, ರಾಘವೇಂದ್ರ ಕುತ್ಪಾಡಿ, ವಿನೋದಿನಿ, ಸುಶೀಲಾ, ಶಾಂತರಾಜ್, ವೇದಾವತಿ, ಗೀತಾ, ಆಶಾ ಶೆಟ್ಟಿ, ನವೀನ್ ಶೆಟ್ಟಿ, ಜಯಕರ ಶೆರಿಗಾರ್, ಅರುಣ್ ಶೆಟ್ಟಿ, ಗೀತಾ ಪ್ರಕಾಶ್, ಮಾಲತಿ ಶೆಟ್ಟಿ, ವಿನಯ ಪ್ರಕಾಶ್, ರೇಣುಕಾ ವಿ. ಸುವರ್ಣ, ಅಂಬಲಪಾಡಿ ಕಡೆಕಾರ್ ಮಹಾಶಕ್ತಿ ಕೇಂದ್ರದ ಸಹ ಸಂಚಾಲಕ ಉಮೇಶ್, ಬೂತ್ ಅಧ್ಯಕ್ಷರಾದ ಶಿವಾನಂದ, ರಾಕೇಶ್ ಜತ್ತನ್, ಹರೀಶ್ ಕಡೆಕಾರ್ ಮಹೇಶ್ ಶೆಟ್ಟಿ ಮತ್ತು ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.