Advertisement

ಕಾನೂನು ಸಾಕ್ಷರತಾ ಶಿಬಿರ ಉದ್ಘಾಟನೆ

02:25 PM Nov 04, 2019 | Team Udayavani |

ಗೋಕಾಕ: ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಇರುವ ಅನೇಕ ಸೌಲಭ್ಯಗಳ ಹೊರತಾಗಿಯೂ ವಿಶೇಷವಾಗಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯ ಒದಗಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗಳ ಕ್ರಮ ಶ್ಲಾಘನೀಯ ಎಂದು ಇಲ್ಲಿಯ 2ನೇ ಹೆಚ್ಚುವರಿ ಜೆ.ಎಂ.ಎಫ್‌.ಸಿ. ನ್ಯಾಯಾಧೀಶ ಮೋಹನ ಪೋಳ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಮತ್ತು ಇತರೆ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಗೆಳತಿ ವಿಶೇಷ ಚಿಕಿತ್ಸಾ ಘಟಕ ಮೂಲಕ ವಿವಿಧ ಸೌಲಭ್ಯಗಳು ಎಂಬ ವಿಷಯ ಕುರಿತ ಕಾನೂನು ಸಾಕ್ಷರತಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಅಗತ್ಯ ಸಹಾಯ ಒದಗಿಸುವುದು ಮಾನವೀಯತೆಯಾಗಿದೆ ಎಂದರು.

Advertisement

ಶಿಬಿರಾರ್ಥಿಗಳಿಗೆ ವಕೀಲೆ ಸಂಗೀತಾ ಬನ್ನೂರ ಮತ್ತು ಸರ್ಕಾರಿ ಆಸ್ಪತ್ರೆ ಸಾಂಕ್ರಾಮಿಕ ರೋಗಗಳ ವಿಭಾಗಗಳ ವೈದ್ಯಾಧಿ ಕಾರಿ ಡಾ| ಶ್ರೀದೇವಿ ಪೂಜೇರಿ ಮಹಿಳೆಯರಿಗೆ ಸಂಬಂಧಿ ಸಿದ ವಿವಿಧ ವಿಷಯ ಕುರಿತು ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಯು.ಬಿ. ಸಿಂಪಿ, ತಾಲೂಕು ಆರೋಗ್ಯ ವೈದ್ಯಾಧಿ ಕಾರಿ ಡಾ| ರವೀಂದ್ರ ಅಂಟಿನ, ಡಾ| ಜಗದೀಶ ಜಿಂಗಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಬಿ.ಬಿ. ಈಶ್ವರಪ್ಪಗೋಳ, ಸಹಾಯಕ ಸಿಡಿಪಿಒ ನಸರೀನ ಕೊಣ್ಣೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next