ಎಡನೀರು: ಕಲ್ಲುಗದ್ದೆ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಧರ್ಮ ಕಾರ್ಯಗಳಲ್ಲಿ ಊರಿನ ಎಲ್ಲ ಜನರು ಜಾತಿ, ಮತ, ಧರ್ಮ ಭೇದವಿಲ್ಲದೆ ಒಟ್ಟು ಗೂಡುವುದರಿಂದ ಸಮಾಜದಲ್ಲಿ ಸಮೃ ದ್ಧಿಯ ಬೆಳಕು ಕಾಣಲು ಸಾಧ್ಯ. ದೇಶದಲ್ಲಿ ವರ್ತಮಾನದ ಬೆಳವಣಿಗೆಗಳಿಗೆ ಇದೊಂದು ಆದರ್ಶವಾಗಬಹುದೆಂದು ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಫರಿತಾ ಸಕೀರ್ ಅಹ್ಮದ್ ಅಭಿಪ್ರಾಯಪಟ್ಟರು.
ಅವರು ಕರಿಂಗಪಳ್ಳ ಕಲ್ಲುಗದ್ದೆ ಕ್ಷೇತ್ರದ ನೂತನ ಡಾಮರೀಕರಿಸಿದ ರಸ್ತೆಯನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರವು ಉತ್ತಮ ಜೀವನಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದ್ದು ಜನರು ಈ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ಚೆಂಗಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾಂತ ಕುಮಾರಿ ಟೀಚರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಮುಳಿಯಾರು ಚೆಂಗಳ ಸೇರುವ ಈ ರಸ್ತೆಯನ್ನು ಜಿಲ್ಲಾ ಪಂಚಾಯತ್ ಯೋಜನೆಯ ಮುಖಾಂತರ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಡಾಮರೀಕರಿಸುವ ಕಾರ್ಯವನ್ನು ಪೂರ್ತಿ ಗೊಳಿಸಲಾಯಿತೆಂದು ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಂಚಾಲಕರಾದ ಶೆರೀಫ್ ಕೊಡವಂಜಿ ಯೋಜನೆಯ ಬಗ್ಗೆ ಪ್ರಸ್ತಾವನೆ ಮಾಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕರ್ತರಾದ ಬಿ.ಸಿ.ಕುಮಾರನ್, ಶಾಫಿ ಚೂರಿಪಳ್ಳ, ಕೆ.ಸಿ. ರಫೀಕ್, ಬಿ.ಎ.ಹಮೀದ್ ಹಾಜಿ, ಕೃಷ್ಣ ಚೇಡಿಕಲ್, ಹನೀಫ್ ಕರಿಂಗಪಳ್ಳ, ಬಿ.ಕೆ. ಮಾಧವನ್ ನಂಬ್ಯಾರ್, ಬಶೀರ್ ಪೈಕ, ಅಬ್ದುಲ್ಲ ಕುಂಞಿ ಮುಂಡ ಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಕಮಲಾಕ್ಷ ಕಲ್ಲುಗದ್ದೆ ಅಭಿನಂದಿಸಿದರು. ಕಲ್ಲುಗದ್ದೆ ಕ್ಷೇತ್ರ ಸಮಿತಿ ಗೌರವ ಅಧ್ಯಕ್ಷ ಭಾಸ್ಕರ ಕಲ್ಲುಗದ್ದೆ ಅವರು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ಮುಳಿಯಾರು ಗ್ರಾಮ ಪಂಚಾಯತ್ ಸದಸ್ಯೆ ಅನೀಶಾ ಮನ್ಸೂರ್ ಮಲ್ಲತ್ ಸ್ವಾಗತಿಸಿದರು.