ಬೆಂಗಳೂರು: ಯಡಿಯೂರು ವಾರ್ಡ್‌ನ ಲಕ್ಷ್ಮಣ್ ರಾವ್ ಬುಲೇವಾಡ್ ಉದ್ಯಾನದಲ್ಲಿ ಪಾಲಿಕೆ ವತಿಯಿಂದ ನಿರ್ಮಾಣವಾಗಿರುವ ಎರೆಹುಳು ಘಟಕವನ್ನು ಕಂದಾಯ ಸಚಿವ ಆರ್.ಅಶೋಕ್ ಹಾಗೂ ಮೇಯರ್ ಎಂ.ಗೌತಮ್‌ಕುಮಾರ್ ಬುಧವಾರ ಉದ್ಘಾಟನೆ ಮಾಡಿದರು.
ಯಡಿಯೂರು ವಾರ್ಡ್‌ನ ಜಯನಗರದ 6ನೇ ಬಡವಾಣೆಯ ಲಕ್ಷ್ಮಣ್ ರಾವ್ ಬುಲೇವಾಡ್ ಉದ್ಯಾನದಲ್ಲಿ ಪಾಲಿಕೆ ವತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ಎರೆಹುಳು ಘಟಕ ನಿರ್ಮಾಣ ಮಾಡಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಎಂ. ಗೌತಮ್‌ಕುಮಾರ್, ಎರೆಹುಳು ಘಟಕದಿಂದ 774 ಉದ್ಯಾನಗಳಿಗೆ ಗೊಬ್ಬರ ಪೂರೈಕೆ ಗುರಿ ಇದೆ.
ಅಲ್ಲದೆ, ಎರೆಹುಳು ಗೊಬ್ಬರವನ್ನು ರೈತರಿಗೆ ಪ್ರತಿ ಕೆ.ಜಿಗೆ 2 ರೂ.ಗೆ ಮಾರಾಟ ಮಾಡಲಾಗುವುದೆಂದರು. ಯಡಿಯೂರು ವಾರ್ಡ್‌ನಲ್ಲಿ ನಿರ್ಮಾಣ ಮಾಡಿರುವ ಎರೆಹುಳು ಗೊಬ್ಬರ ಘಟಕ ಮಾದರಿಯಲ್ಲೇ ವಿವಿಧ ವಾರ್ಡ್‌ಗಳಲ್ಲಿ ಎರೆಹುಳು ಘಟಕ ಅಭಿವೃದ್ಧಿ ಮಾಡುವ ಚಿಂತನೆ ಇದೆ. ಎರೆಹುಳು ಘಟಕಗಳ ಅಭಿವೃದ್ಧಿಯಿಂ ದಾಗಿ ರಾಸಾಯನಿಕ ಗೊಬ್ಬರ ಬಳಕೆ ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾತನಾಡಿ, ಯಡಿಯೂರು ವಾರ್ಡ್‌ನ ರಸ್ತೆ ಬದಿ ಹಾಗೂ 17 ಉದ್ಯಾನಗಳಲ್ಲಿನ ಮರಗಳಿಂದ ಉದುರುವ ಎಲೆಗಳನ್ನು ಈ ಎರೆಹುಳು ಘಟಕದಲ್ಲಿ ನಿರ್ಮಿಸಲಾಗಿರುವ 17 ಸಾವಿರ ಲೀ. ಸಾರ್ಮಥ್ಯದ 2 ತೊಟ್ಟಿಗಳಲ್ಲಿ ತಲಾ ಹತ್ತು ಕೆ.ಜಿ.ತೂಕದ ಎರೆಹುಳುಗಳನ್ನು ಬಿಡಲಾಗುವುದು.
ಇದರೊಂದಿಗೆ ಸಗಣಿ ಹಾಗೂ ನೀರನ್ನು ಬೆರೆಸಲಾಗುವುದು 20ರಿಂದ 25 ದಿನಗಳ ಅಂತರದಲ್ಲಿ ಇದು ಗೊಬ್ಬರವಾಗಿ ಬದಲಾಗಲಿದೆ ಎಂದು ವಿವರಿಸಿದರು. ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಇದ್ದರು.