ಹೆಬ್ರಿ:ರಾಜ್ಯಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕ ಸಂಘ ಪೆರ್ಡೂರಿನಲ್ಲಿ ಪ್ರಧಾನ ಕಚೇರಿ ಹಾಗೂ ಶಾಖೆಯನ್ನು ಹೊಂದಿ ಉಡುಪಿ,ಬ್ರಹ್ಮಾವರ,ಕುಂದಾಪುರ,ಶಿರ್ವ-ಮಂಚಕಲ್ ಶಾಖೆಯನ್ನು ತೆರದು ಇದೀಗ ತನ್ನ 7ನೇ ಶಾಖೆ ಮಾ.5 ರಂದು ಹೆಬ್ರಿ ಬಸ್ಸುತಂಗುದಾಣದ ಎದುರಿರುವ ರಾಮನಾಥ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಶಾಖಾ ಕಚೇರಿಯನ್ನು ಸಚಿವ ವಿ ಸುನಿಲ್ ಕಮಾರ್ ಉದ್ಘಾಟಿಸಲಿದ್ದು ದೀಪ ಪ್ರಜ್ವಲನೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೆರವೇರಿಸಲಿದ್ದಾರೆ.
ಭದ್ರತಾ ಕೊಠಡಿಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿದ್ದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ., ಪೆರ್ಡೂರು ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಉದ್ಯಮಿಗಳಾದ ಸತೀಶ್ ಪೈ, ಹೆೆಬ್ರಿ ಪ್ರವೀಣ್ ಬಲ್ಲಾಳ್, ಭಾಸ್ಕರ ಜೋಯಿಸ್, ಗುರುರಕ್ಷ ಸೌಹಾರ್ದ ಸಹಕಾರ ಸಂಘ ನಿ., ಮುದ್ರಾಡಿ ಇದರ ಅಧ್ಯಕ್ಷ ಮಂಜುನಾಥ್ ಪೂಜಾರಿ, ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ್ ಜಿ.ಎನ್, ಕುಲಾಲ ಸಂಘ ಪೆರ್ಡೂರು ಗೌರವಾಧ್ಯಕ್ಷ ಐತು ಕುಲಾಲ್ ಕನ್ಯಾನ, ಹೆಬ್ರಿ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ಕುಲಾಲ ಸೇವಾ ಸಮಾಜ ಸುಧಾರಕ ಸಂಘ ಕಾರ್ಕಳ ಅಧ್ಯಕ್ಷ ಭೋಜ ಕುಲಾಲ್, ಕಟ್ಟಡ ಮಾಲಕ ಎಚ್.ಅನಂತ ನಾಯಕ್, ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಅಧ್ಯಕ್ಷ ಸುರೇಂದ್ರ ಕುಲಾಲ್ ವರಂಗ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.