Advertisement

ಶಿರ್ವ ಗ್ರಾ.ಪಂ: ಶ್ರೀ ಸಿದ್ಧಿ ವಿನಾಯಕ ಬಸ್ಸು ತಂಗುದಾಣ ಉದ್ಘಾಟನೆ

02:40 PM Nov 01, 2021 | Team Udayavani |

ಶಿರ್ವ: ಗ್ರಾಮ ಪಂಚಾಯತ್‌ ಅನುದಾನ ಬಳಸಿಕೊಂಡು ಗ್ರಾಮದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲು ಅಸಾಧ್ಯವಾಗಿದ್ದು, ದಾನಿಗಳ ಸಹಕಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ .ವಾಟ್ಸಪ್‌ ಸಂದೇಶಕ್ಕೆ ಸ್ಪಂದಿಸಿದ ಗ್ರಾಮದ ಜನತೆ ವಿವಿಧ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸಿದ್ದು ಗ್ರಾಮಾಭಿವೃದ್ಧಿಗೆ ಪೂರಕವಾಗಿದೆ ಎಂದು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಹೇಳಿದರು.

Advertisement

ಅವರು ನ.1 ರಂದು ಶಿರ್ವ ಗ್ರಾ.ಪಂ. ಸಭಾ ಭವನದಲ್ಲಿ ಕನ್ನಡಾಂಬೆಗೆ ನಮನ ಮತ್ತು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕೆಲಸಗಳ ದಾನಿಗಳಿಗೆ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿರ್ವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಕ್ರೈಸ್ತ ಉದ್ಯಮಿ ಗ್ರಾಬ್ರಿಯಲ್‌ ಫೇಬಿಯನ್‌ ನಜರತ್‌ ನಿರ್ಮಿಸಿ  ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿದ ನೂತನ ಸಿದ್ಧಿವಿನಾಯಕ ಬಸ್ಸು ತಂಗುದಾಣ ಮತ್ತು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿ ದಿ| ಬೆನೆಡಿಕ್ಟ್ ತಾವ್ರೋ ಸ್ಮರಣಾರ್ಥ ಪತ್ನಿ  ಲಿಲ್ಲಿ ತಾವ್ರೋ ಮತ್ತು ಮಕ್ಕಳು ನಿರ್ಮಿಸಿ ಗ್ರಾ.ಪಂ.ಗೆ ಕೊಡುಗೆಯಾಗಿ ನೀಡಿದ ಹೈಮಾಸ್ಟ್‌ ದೀಪವನ್ನು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಉದ್ಘಾಟಿಸಿದರು. ಶಿರ್ವ ಗ್ರಾ.ಪಂ.ಬಳಿ ಗ್ರಾ.ಪಂ. ಸಿಬಂದಿಗಳ ವಾಹನ ನಿಲುಗಡೆ ಸ್ಥಳವನ್ನು ಉದ್ಘಾಟನೆ ಮಾಡಲಾಯಿತು.

ಗ್ರಾ.ಪಂ. ಅಭಿವೃದ್ಧಿಯಲ್ಲಿ ಸಹಕರಿಸಿದ ದಾನಿಗಳಾದ ಕ್ರೈಸ್ತ ಉದ್ಯಮಿ ಗ್ರಾಬ್ರಿಯಲ್‌ ಫೇಬಿಯನ್‌ ನಜರತ್‌ ಮತ್ತು ಲಿಲ್ಲಿ ತಾವ್ರೋ ಅವರನ್ನು ಶಿರ್ವ ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು.

Advertisement

ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾಡೋìಜಾ ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಾಸ್ತುಶಿಲ್ಪಿ ಎಂ.ಶ್ರೀನಾಗೇಶ್‌ ಹೆಗ್ಡೆ, ಸತೀಶ್‌ ಶೆಟ್ಟಿ ಮಲ್ಲಾರ್‌,ರತ್ನಾಕರ ಕುಕ್ಯಾನ್‌,ಮುಂಬೈ ಉದ್ಯಮಿ ಕಲಾಧರ ಶೆಟ್ಟಿ,ಗ್ರಾ.ಪಂ. ಸದಸ್ಯರು, ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ, ಅಶಾ ಕಾರ್ಯಕರ್ತೆಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂ. ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್‌ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next