Advertisement

ಜನಪ್ರತಿನಿಧಿಗಳ ಕಚೇರಿಗಳು ಜನಸಂಪರ್ಕ ಕೇಂದ್ರಗಳಾಗಲಿ: ಸಿಎಂ

11:39 AM Oct 15, 2018 | Team Udayavani |

ಮಹಾನಗರ: ಜನಪ್ರತಿನಿಧಿಗಳ ಕಚೇರಿಗಳು ಜನಸಂಪರ್ಕ ಕೇಂದ್ರಗಳಾಗಿ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಹ ತಾಣಗಳಾಗ ಬೇಕು ಎಂದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರು ಹೇಳಿದರು. ರವಿವಾರ ಕದ್ರಿಯಲ್ಲಿ ಮಹಾನಗರ ಪಾಲಿಕೆ ಕಟ್ಟಡದಲ್ಲಿ ವಿಧಾನ ಪರಿಷತ್‌ ಸದಸ್ಯ (ಶಿಕ್ಷಕರ ಕ್ಷೇತ್ರ) ಎಸ್‌.ಎಲ್‌. ಭೋಜೇ ಗೌಡ ಅವರ ಕಚೇರಿಯನ್ನು ಹಾಗೂ ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ. ಎಂ. ಫಾರೂಕ್‌ ಅವರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಈ ಸಂದರ್ಭ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ವಿವಿಧ ಮನವಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಎಸ್‌. ಎಲ್‌. ಭೋಜೇಗೌಡ, ಬಿ.ಎಂ. ಫಾರೂಕ್‌, ಮೇಯರ್‌ ಭಾಸ್ಕರ್‌ ಕೆ., ಉಪ ಮೇಯರ್‌ ಮಹಮದ್‌, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಪೊಲೀಸ್‌ ಅಯುಕ್ತ ಟಿ.ಆರ್‌. ಸುರೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ, ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ಬಿ.ಎ. ಮೊಯಿದಿನ್‌ ಬಾವಾ, ಎನ್‌. ಯೋಗೀಶ್‌ ಭಟ್‌, ಕೆ. ಅಮರ ನಾಥ ಶೆಟ್ಟಿ, ನಿಂಗಯ್ಯ ಮತ್ತಿತರರಿದ್ದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಮಹಮದ್‌ ಕುಂಞಿ, ಮುಖಂಡರಾದ ಎಂ.ಬಿ. ಸದಾಶಿವ, ವಸಂತ ಪೂಜಾರಿ, ಸುಶೀಲ್‌ ನೊರೋನ್ಹಾ, ರಾಂ ಗಣೇಶ್‌, ಎ.ಎ. ಹೈದರ್‌ ಪರ್ತಿಪಾಡಿ, ಅಕ್ಷಿತ್‌ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

38 ರೋಗಿಗಳಿಗೆ ನೆರವು ವಿತರಣೆ
ಇದೇ ಸಂದರ್ಭ ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಅವರು ತಮಗೆ ಸರಕಾರದಿಂದ ಬರುವ ಗೌರವ ವೇತನವನ್ನು ಬಡ ಕ್ಯಾನ್ಸರ್‌, ಕಿಡ್ನಿ ಮತ್ತು ಹೃದಯದ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ನೀಡುವ ನಿರ್ಧಾರದಂತೆ ಸುಮಾರು 38 ಮಂದಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅವರು ವಿತರಿಸಿದರು.

ಈ ಸಂದರ್ಭ ಮುಖ್ಯಮಂತ್ರಿ ಎಚ್‌ . ಡಿ. ಕುಮಾರ ಸ್ವಾಮಿ ಮಾತನಾಡಿ ಬಿ.ಎಂ ಫಾರೂಕ್‌ ಅವರು ತಮಗೆ ಸರಕಾರದಿಂದ ಬರುವ ಗೌರವ ಧನವನ್ನು ಬನ ಜನರಿಗೆ ಹಂಚುವ ಔದಾರ್ಯ ತೋರಿದ್ದಾರೆ 
ಅದಕ್ಕಾಗಿ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಜನಪ್ರತಿನಿಧಿಗಳು ಬಡ ಜನರಿಗೆ, ಅಶಕ್ತರಿಗೆ, ರೋಗಿಗಳಿಗೆ, ಅಂಗವಿಕಲರಿಗೆ ಇದೇ ರೀತಿ ನೆರವು ಒದಗಿಸುವುದು ಸೂಕ್ತ ಎಂದು ಸಲಹೆ ಮಾಡಿದರು.

ಬಿ.ಎಂ. ಫಾರೂಕ್‌ ಅವರು ಎರಡು ತಿಂಗಳ ವೇತನವನ್ನು 38 ಬಡ ರೋಗಿಗಳಿಗೆ ವಿತರಿಸಿದ್ದು 3ನೇ ತಿಂಗಳ ವೇತನವನ್ನು ಸದ್ಯದಲ್ಲಿಯೇ ಫಲಾನುಭವಿಗಳನ್ನು ಗುರುತಿಸಿ ವಿತರಿಸಲಿದ್ದಾರೆ ಎಂದು ಕಾರ್ಯಕ್ರಮ ನಿರ್ವಹಿಸಿದ ಜೆಡಿಎಸ್‌ ನಾಯಕ ಎಂ.ಬಿ. ಸದಾಶಿವ ಅವರು ಕಾರ್ಯಕ್ರಮದಲ್ಲಿ ತಿಳಿಸಿದರು. 

Advertisement

ವಿಮಾನ ನಿಲ್ದಾಣದಲ್ಲಿ ಸ್ವಾಗತ 
ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಅವರು ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next