Advertisement

Ram Mandir ಉದ್ಘಾಟನೆ;ಮನೆ ಮನೆಗೆ ತೆರಳಿ ಆಹ್ವಾನ ನೀಡುತ್ತಿರುವ ಮೋದಿ ಖ್ಯಾತಿಯ ವೆಂಕಾರೆಡ್ಡಿ

01:13 PM Jan 01, 2024 | Team Udayavani |

ಗಂಗಾವತಿ: ಸಾವಿರಾರು ವರ್ಷಗಳ ದೇಶದ ಜನರ ಕನಸಾಗಿದ್ದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಇದೀಗ ಮುಕ್ತಾಯ ಹಂತದಲ್ಲಿದ್ದು, ಜನವರಿ 22ರಂದು ದೇವಸ್ಥಾನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

Advertisement

ಈ ಸಂದರ್ಭದಲ್ಲಿ ದೇಶದಾದ್ಯಂತ ಈಗಾಗಲೇ ರಾಮಮಂದಿರ ಉದ್ಘಾಟನೆಗಾಗಿ ಭಕ್ತರನ್ನು ಆಹ್ವಾನಿಸುವ ಕಾರ್ಯವನ್ನು ಶ್ರೀರಾಮ ಮಂದಿರ ಟ್ರಸ್ಟ್ ಹಾಗೂ ಹಿಂದುಪರ ಸಂಘಟನೆಗಳ ಮುಖಂಡರು, ಸಂಘ ಸಂಸ್ಥೆಯವರು ಮಾಡುತ್ತಿದ್ದಾರೆ.

ತಾಲೂಕಿನ ಹೇರೂರು ಗ್ರಾಮದ ನರೇಂದ್ರ ಮೋದಿ ಎಂದೇ ಖ್ಯಾತರಾಗಿರುವ ಬಿಜೆಪಿ ಕಾರ್ಯಕರ್ತ ವೆಂಕಾರೆಡ್ಡಿ ವಗರನಾಳ ಗಂಗಾವತಿ ಪ್ರತಿ ಗ್ರಾಮಕ್ಕೂ ತಮ್ಮ ಸ್ಕೂಟರ್ ನಲ್ಲೇ ತೆರಳಿ ರಾಮಭಕ್ತರನ್ನು ರಾಮಮಂದಿರ ಉದ್ಘಾಟನೆಗಾಗಿ ಆಹ್ವಾನಿಸುವುದರೊಂದಿಗೆ ಅಂದು ಮನೆ-ಮನೆಗಳಲ್ಲಿ ದೀಪ ಹಚ್ಚಿ ಶ್ರೀ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರುತ್ತಿದ್ದಾರೆ.

ಅಪ್ಪಟ ಮೋದಿಭಕ್ತರಾಗಿರುವ ವೆಂಕಾರೆಡ್ಡಿ ವಗರನಾಳ, ಶ್ರೀ ರಾಮಚಂದ್ರ ದೇವರ ಭಾವಚಿತ್ರದ ಕೇಸರಿ ಧ್ವಜ ಕಟ್ಟಿಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಸುತ್ತಾಡುತ್ತ ಜ.22ರಂದು ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮಭಕ್ತರು, ಹಿಂದುಗಳು ಮನೆ ಮತ್ತು ದೇಗುಲಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕೆಂದು ಈ ರಾಮಭಕ್ತ ಸಾರುತ್ತಿದ್ದಾರೆ.  ಸಾಧ್ಯವಾದವರು ಅಯೋಧ್ಯೆಗೆ ತೆರಳಿ ರಾಮಮಂದಿರ ಉದ್ಘಾಟನೆಗೆ ಶಕ್ತಿ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.

Advertisement

ಪ್ರತಿ ಹಬ್ಬ-ಹರಿದಿನಗಳಲ್ಲಿ ಹಿಂದೂ ಸಂಪ್ರದಾಯಗಳ ಮಾಹಿತಿ ಹೇಳುವ ಇವರು, ಶ್ರೀರಾಮ, ಜೈ ಹನುಮಾನ ಎಂಬ ಭಿತ್ತಿಪತ್ರವನ್ನು ನೀಡುತ್ತಾರೆ. ಶ್ರೀ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ತಮ್ಮ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಗೂ ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಬರಹಗಳನ್ನು ಬರೆಯಿಸಿದ್ದಾರೆ. ಶ್ರೀರಾಮಚಂದ್ರ, ದಿನನಿತ್ಯ ಆಂಜನೇಯ ಸ್ತೋತ್ರಗಳನ್ನು ಪಠಿಸುತ್ತಾರೆ.

ಸಾವಿರಾರು ವರ್ಷದ ಹಿಂದೂಗಳ ಕನಸು ಶ್ರೀ ರಾಮಮಂದಿರ ನಿರ್ಮಿಸಬೇಕೆನ್ನುವುದನ್ನು ಪ್ರಧಾನಿ ಮೋದಿ ನೆರವೇರಿಸಿ ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಮಂದಿರ ಉದ್ಘಾಟನೆಗೊಳ್ಳುತ್ತಿದ್ದು, ರಾಮಭಕ್ತರು, ಹಿಂದೂಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಶೀಘ್ರವೇ ರಾಮರಾಜ್ಯ ಸ್ಥಾಪನೆಯಾಗಲಿದೆ. –ವೆಂಕಾರೆಡ್ಡಿ ವಗರನಾಳ ಹೇರೂರಿನ ರಾಮಭಕ್ತ.

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next