Advertisement

ಪಿಯು ಕಾಲೇಜು ಕಟ್ಟಡ ಉದ್ಘಾಟನೆಗೆ ಗ್ರಹಣ

05:33 PM Sep 12, 2022 | Team Udayavani |

ಕುರುಗೋಡು: ಪಟ್ಟಣದಲ್ಲಿ 2018-19ನೇ ಸಾಲಿನಲ್ಲಿ ಎಚ್‌ಕೆಆರ್‌ಡಿಬಿ ಯೋಜನೆ ಅಡಿ ಬಾದನಹಟ್ಟಿ ರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ಸುಮಾರು 1.96 ಕೋಟಿ ರೂ. ವೆಚ್ಚದಲ್ಲಿ 18 ಕೊಠಡಿಗಳುಳ್ಳ ಬೃಹತ್‌ ಕಟ್ಟಡದಲ್ಲಿ ಸರಕಾರಿ ಎನ್‌ಎಂಎಂ ಪಪೂ ಕಾಲೇಜು ನಿರ್ಮಾಣಗೊಂಡು ವರ್ಷಗಳೇ ಗತಿಸಿದರೂ ಉದ್ಘಾಟನೆ ಭಾಗ್ಯ ಮಾತ್ರ ಇನ್ನೂ ದೊರೆತಿಲ್ಲ!

Advertisement

ಸರಕಾರಿ ಎನ್‌ಎಂಎಂ ಪಪೂ ಕಾಲೇಜು ತರಗತಿಗಳು, ನಾಡಗೌಡರ ಸರಕಾರಿ ಪ್ರೌಢಶಾಲೆ ಆವರಣದ ಹಿಂದುಗಡೆ ಇರುವ ಹಳೆ ಕಟ್ಟಡದಲ್ಲೇ ಮುಂದುವರಿದಿವೆ. ತುಂಬಾ ಹಳೆಯ ಕಟ್ಟಡ ಆಗಿರುವುದರಿಂದ ಸಾಕಷ್ಟು ಸಮಸ್ಯೆಗಳಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತೊಂದರೆ ಅನುಭವಿಸುವಂತಾಗಿದೆ.

ಈ ಕಟ್ಟಡಕ್ಕೆ ಸೀಟ್‌ ಹಾಕಲಾಗಿದ್ದು, ಗೋಡೆಗಳಿಗೆ ಸುಣ್ಣಬಣ್ಣ ಬಡೆಯಲಾಗಿದೆ. ಆದರೂ ಮಳೆ ಬಂದರೆ ಸೋರುವುದು ಮಾತ್ರ ನಿಲ್ಲಿಸುವುದಿಲ್ಲ. ಇನ್ನೂ ಕೊಠಡಿಗಳಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲ, ಉಪನ್ಯಾಸಕರ ಕೊರತೆ, ವಿದ್ಯಾರ್ಥಿಗಳಿಗೆ ಸರಿಯಾದ ಲ್ಯಾಬ್‌ ವ್ಯವಸ್ಥೆ ಇಲ್ಲ, ಪ್ರಿನ್ಸಿಪಾಲ್‌ ಆಫೀಸ್‌ಗೆ ಶಾಲೆ ಕೊಠಡಿ ಬಳಕೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಸರಕಾರಿ ಎನ್‌ಎಂಎಂ ಪಪೂ ಕಾಲೇಜ್‌ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಲಲುವಂತಾಗಿದೆ.

ಬಹಳ ವರ್ಷಗಳಿಂದ ಹಳೆಯ ಕಟ್ಟಡದಲ್ಲೇ ವಿದ್ಯಾರ್ಥಿಗಳು ನಿತ್ಯ ಬೋಧನೆ ಪಡೆಯಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಕಷ್ಟಕರವಾಗಿದೆ. ಮಳೆ, ಗಾಳಿ, ಸಿಡಿಲು ಬಂದರೆ ವಿದ್ಯಾರ್ಥಿಗಳಿಗೆ ರಕ್ಷಣೆ ಸಿಗದಂತಾಗಿದೆ. ಹಳೆಯ ಕಟ್ಟಡದಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಲ್ಯಾಬ್‌ ವ್ಯವಸ್ಥೆ ಇಲ್ಲದಂತಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ, ಎಜ್ಯುಕೇಶನ್‌, ವಿಜ್ಞಾನ ತರಗತಿಗಳು ಇದ್ದು ಒಟ್ಟು 570 ವಿದ್ಯಾರ್ಥಿಗಳು ಇದ್ದಾರೆ. 6 ಖಾಯಂ ಉಪನ್ಯಾಸಕರು, 6 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ, ಇಂಗ್ಲಿಷ್‌, ಇತಿಹಾಸ, ರಾಜಕೀಯ ಶಾಸ್ತ್ರ ವಿಷಯಗಳಿಗೆ ಸಮರ್ಪಕ ಉಪನ್ಯಾಸಕರು ಇಲ್ಲದಾಗಿದ್ದು, ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಹಳೆಯ ಕಟ್ಟಡದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ ಕೊಠಡಿಗಳ ಕೊರತೆ ಸಹ ಎದುರಾಗಿದೆ.

Advertisement

ಶುದ್ಧ ನೀರಿನ ವ್ಯವಸ್ಥೆ ಇಲ್ಲ: ಪಿಯುಸಿ ವಿದ್ಯಾರ್ಥಿಗಳು ಹಳೆಯ ಕಟ್ಟಡಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಮಕ್ಕಳಿಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲದಾಗಿದೆ. ನೀರು ಕುಡಿಯಲು ಪಕ್ಕದ ಪ್ರೌಢಶಾಲೆಗೆ ತೆರಳಬೇಕಾಗಿದೆ. ಇಲ್ಲಂದ್ರೆ ಬ್ರೇಕ್‌ ಫಾಸ್ಟ್‌ ಸಮಯದಲ್ಲಿ ಮುಖ್ಯ ರಸ್ತೆ ಬದಿಯಲ್ಲಿರುವ ಬೇಕರಿ, ಟೀ ಸ್ಟಾಲ್‌ಗ‌ಳಿಗೆ ತೆರಳಿ ನೀರು ಕುಡಿಯಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ.

ಶೌಚಾಲಯ ವ್ಯವಸ್ಥೆ ಇಲ್ಲ: ಪಿಯುಸಿ ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆ ಸೇರಿದಂತೆ ಶೌಚಾಲಯದ ವ್ಯವಸ್ಥೆ ಕೂಡ ಇಲ್ಲದಾಗಿದೆ. ವಿದ್ಯಾರ್ಥಿಗಳು ಶೌಚಾಲಯಕ್ಕೆ ಗುಡ್ಡದ ಕಡೆಗೆ ಬಯಲು ಬಹಿರ್ದೆಸೆ ಬಳಸಿದರೆ ಮಹಿಳೆಯರು ಪಕ್ಕದ ಪ್ರೌಢಶಾಲೆ ಮಕ್ಕಳ ಶೌಚಲಯ ಬಳಕೆ ಮಾಡಿಕೊಳ್ಳಬೇಕಾಗಿದೆ.

ನೂತನ ಪಿಯುಸಿ ಕಾಲೇಜ್‌ ಕಟ್ಟಡದ ಸಮಸ್ಯೆ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಮತ್ತು ಜಿಲ್ಲಾ ಧಿಕಾರಿಗಳ ಗಮನಕ್ಕೆ ಬಂದಿದೆ. ಪೈಪ್‌ಲೈನ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ರಸ್ತೆ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ.
ಜೆ.ಎನ್‌. ಗಣೇಶ್‌,
ಶಾಸಕರು ಕಂಪ್ಲಿ ಕ್ಷೇತ್ರ.

ಅತಿ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಸರಿಯಾದ ಕಟ್ಟಡಗಳು, ಲ್ಯಾಬ್‌ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿವೆ. ನೂತನ ಕಟ್ಟಡ ಉದ್ಘಾಟನೆ ಮಾಡಿಕೊಟ್ಟರೇ ಎಲ್ಲದಕ್ಕೂ ಅನುಕೂಲವಾಗುತ್ತದೆ.
ಎನ್‌.ಎಸ್‌. ವೇಣುಗೋಪಾಲ್‌,
ಪ್ರಾಚಾರ್ಯರು ಪಿಯು ಕಾಲೇಜ್‌

*ಸುಧಾಕರ್‌ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next