Advertisement
ನಾಸಿಕ್ ಬಂಟರ ಸಂಘದ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಾಸಿಕ್ ಪತ್ರಾಡಿ ಪಾಟಾದ, ಸೇಲ್ಸ್ ಟ್ಯಾಕ್ಸ್ ಕಚೇರಿ, ದಾಮೋದರ್ ನಗರದ, ಫಸ್ಟ್ ಫ್ಲೋರ್ ಸಾಕಾರ್ ಪ್ಲಾಜಾದ ಮೊದಲ ಮಹಡಿಯ ಎಫ್-12, 13, 14ರಲ್ಲಿ ನಡೆದ ನಾಸಿಕ್ ಬಂಟರ ಸಂಘದ ನೂತನ ಕಚೇರಿ ಉದ್ಘಾಟನೆ ಮತ್ತು 17ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಂಘಟನೆಯ ಮೂಲಕ ತಮ್ಮವರನ್ನು ಒಗ್ಗೂಡಿಸಲು ಪ್ರಯತ್ನಿಸಬೇಕು. ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಕಣ್ಣೀರೊರೆಸುವ ಕಾಯಕದಲ್ಲಿ ಸಂಘಟನೆಗಳು ಮುಂದಾಗಬೇಕು. ಕಳೆದ 17 ವರ್ಷಗಳಿಂದ ನಾಸಿಕ್ ಬಂಟರ ಸಂಘವು ಮಾಡುತ್ತಿರುವ ಸಮಾಜಪರ ಕಾರ್ಯಕ್ರಮಗಳನ್ನು ಕಂಡು ಸಂತೋಷವಾಗುತ್ತಿದೆ. ಮಕ್ಕಳಿಗೆ ನಾಡು-ನುಡಿ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ತಿಳಿಯಪಡಿಸುವ ಕಾರ್ಯವು ಸಂಘದ ಮುಖಾಂತರ ನಿರಂತರವಾಗಿ ನಡೆಯುತ್ತಿರಲಿ ಎಂದು ತಿಳಿಸಿ ಶುಭಹಾರೈಸಿದರು.
Related Articles
Advertisement
ಬಳಿಕ ಸಂಘದ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಮುಂಡ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶಿತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಾಧನೆಗಳನ್ನು ವಿವರಿಸಿದರು. ಸಂಘದ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಅತಿಥಿಗಳಾದ ಎಂ. ಮೋಹನ್ ಆಳ್ವ, ಕೆ. ಕೆ. ಶೆಟ್ಟಿ ಉಪಾಧ್ಯಕ್ಷ ವಿಜಯ ಎಂ. ಶೆಟ್ಟಿ, ಕಟ್ಟಡ ಸಮಿತಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಸಂಸ್ಥಾಪಕ ಅಧ್ಯಕ್ಷ ಲಿಂಗಪ್ಪ ಎ. ಶೆಟ್ಟಿ, ಕಾರ್ಯದರ್ಶಿ ದಿನೇಶ್ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರಕಾಶ್ ಎಸ್. ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ಕೆ. ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದಿವ್ಯಾ ಆರ್. ಶೆಟ್ಟಿ, ಸುಗಂಧಿ ಪಿ. ಶೆಟ್ಟಿ, ಸ್ವರ್ಣಲತಾ ಎ. ಶೆಟ್ಟಿ ಪ್ರಾರ್ಥಿಸಿದರು. ದಿನೇಶ್ ಆರ್. ಶೆಟ್ಟಿ ಸ್ವಾಗತಿಸಿದರು. ರವೀಂದ್ರ ಕೆ. ಶೆಟ್ಟಿ ಮತ್ತು ರತ್ನಾಕರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕೋಶಾಧಿಕಾರಿ ಪ್ರಕಾಶ್ ಎಸ್. ಶೆಟ್ಟಿ ಸಂಘದ ವಾರ್ಷಿಕ ಲೆಕ್ಕ ಪತ್ರ ಮಂಡಿಸಿ ಅನುಮೋದಿಸಿಕೊಂಡರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಇಂದಿರಾನಗರ ಶಾಂಭವಿ ತಂಡದ ಸದಸ್ಯೆಯರಿಂದ ಮಾಮಿಗಾವಂದಿ ಮರ್ಮಾಲ್ ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ರûಾ ಆರ್. ಶೆಟ್ಟಿ, ಹರ್ಷಿತಾ ಎಚ್. ಆಳ್ವ, ಪಿಯುಷ್ ಶೆಟ್ಟಿ ಮತ್ತು ಪ್ರತ್ಯುಷ್ ಶೆಟ್ಟಿ ಅವರಿಂದ ವಿವಿಧ ನೃತ್ಯ ಪ್ರದರ್ಶನಗೊಂಡಿತು. ಆಶಿತ್ ಶೆಟ್ಟಿ ಮತ್ತು ಪ್ರದೀಪ್ ಕೆ. ರೈ ಕಾರ್ಯಕ್ರಮ ನಿರ್ವಹಿಸಿದರು. ದಿನೇಶ್ ಆರ್. ಶೆಟ್ಟಿ ವಂದಿಸಿದರು.
ಪೂಜಾ ಸೇವಾಕರ್ತರಾಗಿ ರವೀಂದ್ರ ಕೆ. ಶೆಟ್ಟಿ, ಉಟೋಪಚಾರ ಮತ್ತು ಉಪಾಹಾರದ ಸೇವಾಕರ್ತರಾಗಿ ಚಂದ್ರಶೇಖರ್ ಶೆಟ್ಟಿ, ರಾಜಗೋಪಾಲ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ವಿಜಯ ಶೆಟ್ಟಿ, ರವೀಂದ್ರ ಎಸ್. ಶೆಟ್ಟಿ, ಪ್ರದೀಪ್ ಶೆಟ್ಟಿ, ಹರೀಶ್ ಶೆಟ್ಟಿ ಸಿ.ಎ., ಪ್ರಕಾಶ್ ಶೆಟ್ಟಿ, ಹೊಟೇಲ್ ಗಾವರ್ ಗ್ರೂಪ್, ನಿತ್ಯಾನಂದ ಶೆಟ್ಟಿ, ರವೀಂದ್ರ ಕೆ. ಶೆಟ್ಟಿ ಸಹಕರಿಸಿದರು.
ಪ್ರದೀಪ್ ಶೆಟ್ಟಿ, ಹರೀಶ್ ಆಳ್ವ, ಅಮಿತ್ ಶೆಟ್ಟಿ, ಮನೋಜ್ ಶೆಟ್ಟಿ, ಸತೀಶ್ ಕೆ. ಶೆಟ್ಟಿ ಕುಂಟಿಬೈಲ…, ಉದಯ ಶೆಟ್ಟಿ, ರವಿ ಬಿ. ಶೆಟ್ಟಿ, ಹರೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಸುರೇಶ್ ಎಸ್. ಶೆಟ್ಟಿ, ಪ್ರವೀಣ್ ಶೆಟ್ಟಿ, ದಿನೇಶ್ ಶೆಟ್ಟಿ, ಪ್ರವೀಣ್ ಎಚ್. ಶೆಟ್ಟಿ, ಉದಯ ಮಾರ್ಲ, ಕಿಶೋರ್ ಶೆಟ್ಟಿ, ಅರುಣ್ ಶೆಟ್ಟಿ, ವಿಲಾಸಿನಿ ಪಿ. ಶೆಟ್ಟಿ, ಲಲಿತಾ ಕೆ. ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನಾಸಿಕ್‌ನಲ್ಲಿ ನೆಲೆಸಿರುವ ಎಲ್ಲ ಬಂಟ ಬಾಂಧವರನ್ನು ಒಂದೇ ವೇದಿಕೆಯಡಿಗೆ ತರುವ ಉದ್ದೇಶದಿಂದ ಸ್ಥಾಪನೆಗೊಂಡ ನಾಸಿಕ್ ಬಂಟರ ಸಂಘವು ಪ್ರಸ್ತುತ ಸಮಾಜಪರ ಕಾರ್ಯಗಳೊಂದಿಗೆ ಸಮಾಜ ಬಾಂಧವರ ಮನೆ ಮಾತಾಗಿದೆ. ಸಂಘವು ನೂತನ ಕಚೇರಿಯನ್ನು ಹೊಂದಿ ಉದ್ಘಾಟನೆಗೊಂಡ ಈ ಸಂತೋಷಕ್ಕೆ ತಾವೆಲ್ಲರೂ ಕಾರಣೀಭೂತರಾಗಿದ್ದೀರಿ. ನಿಮ್ಮ ಸಹಕಾರದಿಂದಾಗಿ ನಮಗೆ ಗುರಿ ಮುಟ್ಟಲು ಸಾಧ್ಯವಾಯಿತು. ಸಂಘವು ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಯೋಜನೆಯ ರೂಪುರೇಷೆ ಪೂರ್ಣಗೊಂಡ ಬಳಿಕ ಆ ಕಾರ್ಯಕ್ಕೆ ಮುಂದಡಿ ಇಡಲಾಗುವುದು.–ಶಶಿಕಾಂತ್ ಶೆಟ್ಟಿ ಮುಂಡ್ಕೂರು ಅಧ್ಯಕ್ಷರು, ಬಂಟರ ಸಂಘ ನಾಸಿಕ್