Advertisement

ಮೈಸೂರು ದಸರಾಗೆ ಚಾಲನೆ ನೀಡಿದ ಸಾಹಿತಿ ಡಾ. ಎಸ್ ಎಲ್ ಭೈರಪ್ಪ

10:00 AM Sep 30, 2019 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ರವಿವಾರ ವಿದ್ಯುಕ್ತ ಚಾಲನೆ ದೊರಕಿತು. ಸಾಹಿತಿ ಡಾ. ಎಸ್ ಎಲ್ ಭೈರಪ್ಪ ಮತ್ತು  ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ದೀಪ ಬೆಳಗಿಸಿ, ಚಾಮುಂಡಿ ದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚಾನೆ ಮಾಡುವ ಮೂಲಕ ನಾಡಹಬ್ಬವನ್ನು ಉದ್ಘಾಟನೆ  ಮಾಡಿದರು.

Advertisement

ಚಾಮುಂಡಿ ಬೆಟ್ಟದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ, ಸಿ ಟಿ ರವಿ, ಸಂಸದ ಪ್ರತಾಪ ಸಿಂಹ, ಶಾಸಕ ರಾಮದಾಸ್, ಜಿ ಟಿ ದೇವೇಗೌಡ, ತನ್ವೀರ್ ಸೇಠ್ ಮುಂತಾದವರು ಭಾಗವಹಿಸಿದರು.

ದೇವರನ್ನು ಏಕಾಂತದಲ್ಲಿ ಪ್ರಾರ್ಥಿಸಿ ಮನಶಾಂತಿ ಪಡೆಯಲು ದೇವಸ್ಥಾನಕ್ಕೆ ಬರುತ್ತೇವೆ. ಚಾಮುಂಡಿ ಬೆಟ್ಟದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಹೆಸರಲ್ಲಿ ಜಾತ್ರಾ ಸ್ಥಳವಾದರೆ ಏಕಾಂತತೆ ಹಾಳಾಗುತ್ತೆ. ಚಾಮುಂಡಿ ಬೆಟ್ಟದಲ್ಲಿ ಶೌಚಾಲಯ, ಊಟದ ವ್ಯವಸ್ಥೆ ಬಿಟ್ಟು ಬೇರೇನು ಇರಬಾರದು. ಚಾಮುಂಡಿ ಬೆಟ್ಟ ಯಾತ್ರಾ ಸ್ಥಳವೋ, ಪ್ರವಾಸಿ ತಾಣವೋ ಎಂಬುದನ್ನು ಸರ್ಕಾರ ತೀರ್ಮಾನಿಸಬೇಕು ಎಂದು ಭೈರಪ್ಪನವರು ತಮ್ಮ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next