Advertisement
ಎಂಐಟಿ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಶೋಧನ ಪ್ರವೃತ್ತಿ ಬೆಳೆಯುತ್ತದೆ ಎಂದರು. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ, ಶೋಧನ ಪ್ರವೃತ್ತಿಯನ್ನು ಹೊರಗೆ ಎಳೆಯುವುದು ಇದರ ಉದ್ದೇಶ. ತಂತ್ರಜ್ಞಾನ ಗ್ರಾಮೀಣ ಜನಜೀವನದ ಮತ್ತು ಮಹಿಳಾ ಸಶಕ್ತೀಕರಣಕ್ಕೆ ಕಾರಣವಾಗಬೇಕಾದರೆ ಹೊಸ ಹೊಸ ಸಂಶೋಧನೆಗಳು ನಡೆಯಬೇಕಾಗಿದೆ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು. ಎಂಐಟಿ ಜಂಟಿ ನಿರ್ದೇಶಕ ಡಾ| ಬಿ.ಎಚ್.ವಿ. ಪೈ ಉಪಸ್ಥಿತರಿದ್ದರು.
ಮಣಿಪಾಲ ಹ್ಯಾಕಥಾನ್ ಸಾಫ್ಟ್ವೇರ್ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಕಾರ್ಯಕ್ರಮವಾಗಿದೆ. ಇದು ಮೇಯಲ್ಲಿ ಆರಂಭಗೊಂಡಿತ್ತು. ಸ್ಮಾರ್ಟ್ ಇಂಡಿಯ ಹ್ಯಾಕತಾನ್‌ನಿಂದ ಪ್ರೇರಣೆಗೊಂಡ ಮಣಿಪಾಲ ಹ್ಯಾಕಥಾನ್ ಹೊಸ ಹೊಸ ಸಾಫ್ಟ್ ವೇರ್ ಪ್ರೋಗ್ರಾಮಿಂಗ್‌ಗಳನ್ನು ಅಳವಡಿಸುವ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದೆ. ದೇಶಾದ್ಯಂತ 1,500 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ 30 ತಂಡಗಳ 125 ಮಂದಿ ಮಣಿಪಾಲದಲ್ಲಿ 36 ಗಂಟೆಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಹೈದರಾಬಾದ್‌ನ ಬಿಟ್ಸ್, ವೆಲ್ಲೂರಿನ ವಿಐಟಿ, ಚೆನ್ನೈ ವಿಐಟಿ, ಪುಣೆಯ ಪಿಕ್ಟ್ ಮೊದಲಾದ ಕಡೆಗಳಿಂದ ಬಂದ ತಂಡಗಳಿವೆ. ಮಣಿಪಾಲ ಹ್ಯಾಕಥಾನ್ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಜಿಲ್ಲಾಧಿಕಾರಿ
ಜಿ. ಜಗದೀಶ್, ಡಾ| ಎಚ್.ಎಸ್. ಬಲ್ಲಾಳ್, ಡಾ| ಬಿ.ಎಚ್.ವಿ. ಪೈ ಉಪಸ್ಥಿತರಿದ್ದರು.