Advertisement

ಬೆಳ್ಳಿಹಬ್ಬ ಪ್ರವೇಶ ದ್ವ್ವಾರ ಉದ್ಘಾಟನೆ

10:55 PM Jun 19, 2019 | Sriram |

ಕಾಸರಗೋಡು: ಬೇಕಲ ಸರಕಾರಿ ಫಿಶರೀಸ್‌ ಹೈಯರ್‌ ಸೆಕೆಂಡರಿ ಶಾಲೆಯ 1992-93ನೇ ವರ್ಷದ ಎಸ್‌ಎಸ್‌ಎಲ್ಸಿ ಬ್ಯಾಚ್ ಆದ ಸತೀರ್ಥ್ಯರ್‌ ಎಂಬ ಸಂಘಟನೆ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಶಾಲೆಯಲ್ಲಿ ನಿರ್ಮಿಸಿ ನೀಡಿದ ಪ್ರವೇಶ ದ್ವಾರವನ್ನು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಉದ್ಘಾಟಿಸಿದರು.

Advertisement

ಪ್ರವೇಶ ರಸ್ತೆಯಲ್ಲಿ ಇಂಟರ್‌ಲಾಕ್‌ ಅಳವಡಿಸಿ ಸುಮಾರು 3 ಲಕ್ಷದಷ್ಟು ರೂ. ವೆಚ್ಚದಲ್ಲಿ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಶಾಲೆಯಿಂದ ಈ ವರ್ಷ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎಪ್ಲಸ್‌ ಗ್ರೇಡ್‌ ಪಡೆದ ಅನೌಶಿಕ, ಅಜಿಶ, ನಂದನ, ಲಿಯ ಮೋಹನ್‌, ಪ್ರಿಯೇಶ್‌ ಹಾಗೂ ಯುಎಸ್‌ಎಸ್‌ ಸ್ಕಾಲರ್‌ಶಿಪ್‌ ಪಡೆದ ಕಾರ್ತಿಕ ಅವರನ್ನು ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಸ್ಮರಣಿಕೆ ನೀಡಿ ಅಭಿನಂದಿಸಿದರು.

ಹಳೆಯ ಎಸ್‌ಎಸ್‌ಎಲ್ಸಿ ಬ್ಯಾಚ್‌ಗಳಲ್ಲಿ ಬೆಳ್ಳಿಹಬ್ಬ ಆಚರಿಸಿ ಶಾಲೆಯ ಭೌತಿಕ ಸೌಕರ್ಯಗಳ ಅಭಿವೃದ್ಧಿಗೆ ಮುನ್ನುಗ್ಗಿದ ಮೊದಲ ಸಂಘಟನೆಯಾಗಿದೆ ಸತೀರ್ಥ್ಯರ್‌. ಇಂತಹ ಕಾರ್ಯಾಚರಣೆ ನಡೆಸಿ ಇತರ ಎಸೆಸ್ಸೆಲ್ಸಿ ಬ್ಯಾಚ್‌ಗಳಿಗೆ ಸತೀರ್ಥ್ಯರ್‌ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಸತೀರ್ಥ್ಯರ್‌ನ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಪರಿಸರದಲ್ಲಿ ಜಿಲ್ಲಾಧಿಕಾರಿ ಮಾವಿನ ಸಸಿ, ಉದುಮ ಪಂಚಾಯತ್‌ ಅಧ್ಯಕ್ಷರು ಚಾಯಾ ಮನ್ಸ ಎಂಬ ಔಷಧೀಯ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ಉದುಮ ಪಂ. ಅಧ್ಯಕ್ಷ ಕೆ.ಎ. ಮುಹಮ್ಮ ದಲಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್‌, ಜಿಲ್ಲಾ ಶಿಶು ಕಲ್ಯಾಣ ಸಮಿತಿ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ವಿ.ಆರ್‌. ವಿದ್ಯಾಸಾಗರ್‌, ಶಾಲಾ ಮುಖ್ಯೋಪಾಧ್ಯಾಯ ಕೆ. ಜಯಪ್ರಕಾಶ್‌, ವಾರ್ಡ್‌ ಸದಸ್ಯೆ ಶ್ಯಾಮಲಾ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರನ್‌, ಕೆ.ವಿ. ಶಂಭು ಬೇಕಲ, ಎ. ಕುಞಿರಾಮನ್‌, ಪ್ರಜಿತ್‌ ಮಾಲಾಕುನ್ನು, ವಿಶ್ವಂಭರನ್‌ ಕಡಂಬಜಾಲ್, ಸುರೇಶನ್‌ ಕರಿಪ್ಪೊಡಿ, ಖಲೀಲ್ ಪೆರಿಯಾಟಡ್ಕ, ಫೌಸಿಯ ಫಾರೂಖ್‌ ಮಾತನಾಡಿದರು.

ಸತೀರ್ಥ್ಯರ್‌ ಅಧ್ಯಕ್ಷ ದಿನೇಶನ್‌ ಪಳ್ಳಿಕ್ಕೆರೆ ಸ್ವಾಗತಿಸಿ, ಅಧ್ಯಕ್ಷ ರಾಜೇಂದ್ರನ್‌ ಮುದಿಯಕ್ಕಾಲ್ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next