Advertisement

ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆ

11:19 AM Jul 16, 2022 | Team Udayavani |

ಆಳಂದ: ಬಯಲು ಪ್ರದೇಶ ಈ ಭಾಗದಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಕೈಗೊಂಡ ವೃಕ್ಷೊàಧ್ಯಾನವನದಲ್ಲಿ ಪ್ರಾಣಿ ಸಂಗ್ರಾಲಯ ಅವಶ್ಯಕವಾಗಿದೆ. ಅಧಿಕಾರಿಗಳು ಸಂಗ್ರಹಾಲಯ ಕೈಗೊಳ್ಳಲು ಮುಂದಾದರೆ ಅಗತ್ಯ ನೆರವು ಒದಗಿಸಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಭರವಸೆ ನೀಡಿದರು.

Advertisement

ಪಟ್ಟಣದ ಕೊರಳ್ಳಿ ರಸ್ತೆಯಲ್ಲಿ ನಿರ್ಮಾಗೊಂಡ ಸಾಲು ಮರದ ತಿಮ್ಮಕ್ಕನ ವೃಕ್ಷೊàದಾನ್ಯವನ್ನು ಶುಕ್ರವಾರ ಲೋಕಾರ್ಪಣೆ ಕೈಗೊಂಡು ಅವರು ಮಾತನಾಡಿದರು.

ವಾತಾವರಣದಲ್ಲಿ ಹೆಚ್ಚಾಗಿ ಕೈಗಾರಿಕೆ, ವಾಹನ ಸೇರಿ ಹಲವು ವಿಧಗಳಿಂದ ಪರಿಸರ ಮಾಲಿನ್ಯ ಹೆಚ್ಚತೊಡಗಿದ್ದು, ಶುದ್ಧ ಗಾಳಿಗಾಗಿ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಗಿಡ, ಮರಗಳು ಬೆಳೆಸುವುದು ತೀರಾ ಅಗತ್ಯವಾಗಿದೆ. ಸಾಲುಮರದ ತಿಮ್ಮಕ್ಕನವರು ಗಿಡ, ಮರಗಳನ್ನು ಮಕ್ಕಳಂತೆ ಬೆಳೆಸಿ ಸಾಧನೆ ಮಾಡಿದ್ದರಿಂದ ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ದಕ್ಕಿವೆ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ವೃಕ್ಷೊàದ್ಯಾನ ಸ್ಥಾಪಿಸಿ ಪರಸರ ಪ್ರಜ್ಞೆ ಮೂಡಿಸುತ್ತಿದೆ ಎಂದರು.

ಇಲ್ಲಿನ ವೃಕ್ಷೋದ್ಯಾನದಲ್ಲಿ ವಿವಿಧ ಗಿಡ, ಮರಗಳನ್ನು ಬೆಳೆಸಬೇಕು. ಮಕ್ಕಳು, ಸಾರ್ವಜನಿಕ ರನ್ನು ಕೈಬಿಸಿ ಕರೆಯುವಂತ ವಾತಾವರಣ ಇಲ್ಲಿದೆ. ಇದರ ಜತೆಗೆ ಪಕ್ಷಿ ಸಂಕುಲಕ್ಕೆ ಮತ್ತು ಪ್ರಾಣಿಗಳ ಪರಿಚಯ, ಸಂರಕ್ಷಣೆಗೆ ಪ್ರಾಣಿ ಸಂಗ್ರಾಲಯವೂ ಇಲ್ಲಿ ಆಗಬೇಕು. ಇದಕ್ಕಾಗಿ ಅಗತ್ಯ ನೆರವು ನೀಡಲು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.

ಕೇವಲ ಅರಣ್ಯ ಇಲಾಖೆ ಮಾತ್ರ ಅರಣ್ಯ ಕೃಷಿ ಮಾಡಿದರೆ ಸಾಲದು. ರೈತರು ಸಹ ಅರಣ್ಯ ಇಲಾಖೆ ಸೌಲಭ್ಯಗಳನ್ನು ಪಡೆದು ಅರಣ್ಯ ಕೃಷಿಯ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.

Advertisement

ಕಲಬುರಗಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ| ಎಸ್‌.ವೆಂಕಟೇಶನ್‌ (ಐಎಫ್‌ಎಸ್‌) ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾಗಿದೆ. ಹೆಚ್ಚು ಗಿಡ, ಮರಗಳನ್ನು ಬೆಳೆಸಿದರೆ ಪರಿಸರದಲ್ಲಿ ಶುದ್ಧ ಗಾಳಿ, ಮಳೆ ಬರಲು ಅನುಕೂಲವಾಗುತ್ತದೆ ಎಂದರು.

ಕಲಬುರಗಿ ವೃತ್ತ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನ ವರ ಪ್ರಸ್ತಾವಿಕವಾಗಿ ಮಾತನಾಡಿದರು. ಡಿವೈಎಸ್‌ಪಿ ರವಿಂದ್ರ ಶಿರೂರ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ, ಅಮರ್ಜಾ ಎಇಇ ಗೌತಮ ಕಾಂಬಳೆ, ರೈತರಾದ ನಾಗರಾಜ ಶೇಗಜಿ, ಶರಣು ಪಾಟೀಲ ದೇವಂತಗಿ, ಸಾಮಾಜಿಕ ವಲಯ ಕಲಬುರಗಿ ಉಪ ಅರಣ್ಯಾಧಿಕಾರಿ ಎಂ.ಎಲ್‌. ಭಾವಿಕಟ್ಟಿ, ಚಂದ್ರಶೇಖರ ಹೆಮ್ಮಾ ಹಾಗೂ ನೆರೆಯ ಕಿತ್ತೂರುರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ, ಅರಣ್ಯ ಇಲಾಖೆಯ ಸಂಜು ಚವ್ಹಾಣ, ರಾಘವೇಂದ್ರ ಗಾಯಕವಾಡ, ವಿಜಯಕುಮಾರ, ಸಂತೋಷ, ಕಾಶಿನಾಥ ಕಲಶೆಟ್ಟಿ, ತುಕ್ಕಪ್ಪ ಹಾಗೂ ಮತ್ತಿತರರು ಇದ್ದರು.

ಇದೇ ವೇಳೆ ಅರಣ್ಯ ಕೃಷಿ ಕೈಗೊಂಡ ರೈತರಿಗೆ ತಲಾ 25ಸಾವಿರ ರೂ. ಪ್ರೋತ್ಸಾಹಧನದ ಚೆಕ್‌ನ್ನು ಶಾಸಕರು ವಿತರಿಸಿದರು. ಕಲಬುರಗಿ ಪ್ರಾದೇಶಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಸಂತೋಷ ಕುಮಾರ ನಿರೂಪಿಸಿದರು. ಆರ್‌ಎಫ್‌ಒ ಜಗನಾಥ ಕೋರಳ್ಳಿ ವಂದಿಸಿದರು. ಕಲಾವಿದ ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ ಸಂಗೀತ ನಡೆಸಿಕೊಟ್ಟರು. ಪಿಟಿಲು ವಾದಕ ಭದ್ರಿನಾಥ ಮುಡಬಿ ಸಂಗೀತ ತಂಡದಿಂದ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ನಾಡಗೀತೆ ಸಾದರಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next