Advertisement
ಗೋವಾ ರಾಜಧಾನಿ ಪಣಜಿ ಸಮೀಪದ ಬಾಂಬೋಲಿಂ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಸೋಮವಾರ (ನ 20) ಸಂಜೆ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಭಾರತದಲ್ಲಿ ನಿರ್ಮಾಣಗೊಳ್ಳುವ ವಿದೇಶಿ ಚಿತ್ರಗಳಿಗೆ ಅವುಗಳ ನಿರ್ಮಾಣ ವೆಚ್ಚದ ಶೇ.40 ರಷ್ಟನ್ನು ಪ್ರೋತ್ಸಾಹ ಧನವನ್ನಾಗಿ ನೀಡುವುದಾಗಿ ಅನುರಾಗ್ ಠಾಕೂರ್ ತಿಳಿಸಿದರು.ಈ ಹಿಂದೆ ಶೇ.30 ರಷ್ಟು ನೀಡಲಾಗುತ್ತಿತ್ತು. ಅದನ್ನು ಈಗ 40 ಕ್ಕೆ ಏರಿಸಲಾಗಿದೆ. ಸುಮಾರು 30 ಕೋಟಿ ರೂ.ವರೆಗೂ ಪ್ರೋತ್ಸಾಹ ಧನ ನೀಡಲಾಗುವುದು. ಇದಲ್ಲದೇ ಭಾರತೀಯ ಕಥಾವಸ್ತು ಬಳಸಿಕೊಂಡರೆ ಮತ್ತಷ್ಟು ನೆರವು ನೀಡಲಾಗುವುದು. ನಮ್ಮ ಉದ್ದೇಶ ಭಾರತದಲ್ಲಿ ಚಿತ್ರ ಮಾರುಕಟ್ಟೆಯಲ್ಲಿನ ಸಾಧ್ಯತೆ ಹೆಚ್ಚಿಸುವುದು ಹಾಗೂ ಭಾರತೀಯ ಕಥಾವಸ್ತುವಿಗೆ ಜಾಗತಿಕ ವೇದಿಕೆ ಕಲ್ಪಿಸುವುದು. ಈ ಎರಡೂ ಕೆಲಸ ಮಾಡುತ್ತಿದ್ದೇವೆ ಎಂದರು.
Related Articles
Advertisement
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಸಿಎಂ ಡಾ.ಪ್ರಮೋದ ಸಾವಂತ್ ಮಾತನಾಡಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾ ರಾಜ್ಯ ಖಾಯಂ ಸ್ಥಳವಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಹೊಸತನವನ್ನು ಕಾಣಬಹುದಾಗಿದೆ. 2004 ರಲ್ಲಿ ದಿ.ಮನೋಹರ್ ಪರೀಕರ್ ರವರು ಗೋವಾದಲ್ಲಿ ಆರಂಭಿಸಿದ ಚಲನಚಿತ್ರೋತ್ಸವ ಇಂದು ಜಗತ್ತಿನ ಚಲನಚಿತ್ರ ಕ್ಷೇತ್ರದ ವೇದಿಕೆಯಾಗಿ ನಿಂತಿದೆ. ಗೋವಾ ಸಿನಿಮಾ ವಲಯದಲ್ಲಿ ನಿಧಾನವಾಗಿ ಪ್ರಗತಿ ಸಾಧಿಸುತ್ತಿದೆ, ಗೋವಾ ಎಂಟರ್‍ಟೈನ್‍ಮೆಂಟ್ ಕಾರ್ಪೊರೇಷನ್ ರಾಜ್ಯದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಉತ್ಸುಕವಾಗಿದೆ. ಫಿಲ್ಮ್‍ಸಿಟಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜಗತ್ತಿನ ಎಲ್ಲ ಪ್ರತಿನಿಧಿಗಳಿಗೆ ಸ್ವಾಗತ ಕೋರುತ್ತೇನೆ ಎಂದರು.
ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರವರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್, ಕೇಂದ್ರ ಸಚಿವ ಶ್ರೀಪಾದ ನಾಯಕ್, ಶಾಹಿದ್ ಕಪೂರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಾಲಿವುಡ್‍ನ ಹಲವು ನಟರು ಭಾಗವಹಿಸಿದ್ದು, ಖುಷ್ಬೂ ಸುಂದರ್, ಕರಣ್ ಜೋಹರ್, ಸನ್ನಿ ಡಿಯೋಲ್, ಶ್ರಿಯಾ ಸರನ್, ನುಸ್ರತ್ ಭರುಚಾ, ಪಂಕಜ್ ತ್ರಿಪಾಠಿ ಮತ್ತು ಇತರ ತಾರೆಯರ ಜತೆಗೆ ಸಂಗೀತಗಾರರಾದ ಶಾಂತನು ಮೊಯಿತ್ರಾ, ಶ್ರೇಯಾ ಘೋಷಾಲ್ ಮತ್ತು ಸುಖವಿಂದರ್ ಸಿಂಗ್, ನಟ ಮತ್ತು ನಿರೂಪಕಿ ಅಪರಶಕ್ತಿ ಖುರಾನಾ ಮತ್ತು ಕರಿಷ್ಮಾ ತನ್ನಾ ಕೂಡ ಉಪಸ್ಥಿತರಿದ್ದರು.
ವಿವಿಧ ಭಾಷೆಯ ಅನೇಕ ಸಿನಿ ಕಲಾವಿದರು, ನಿರ್ದೇಶಕರು, ಬರಹಗಾರರು ಮತ್ತು ಚಲನಚಿತ್ರ ಪ್ರೇಮಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನವೆಂಬರ್ 20 ರಂದು ಉದ್ಘಾಟನೆಗೊಂಡಿರುವ ಚಲನಚಿತ್ರೋತ್ಸವ ನವೆಂಬರ್ 28 ರ ವರೆಗೆ ನಡೆಯಲಿದೆ.