Advertisement

ಕಾಲೇಶ್ವರಂ ಏತ ನೀರಾವರಿ ಯೋಜನೆಗೆ ಚಾಲನೆ

01:33 AM Jun 22, 2019 | mahesh |

ಹೈದರಾಬಾದ್‌: ವಿಶ್ವದಲ್ಲಿಯೇ ಅತ್ಯಂತ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಲೇಶ್ವರಂ ಏತ ನಿರಾವರಿ ಯೋಜನೆಯನ್ನು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಶುಕ್ರವಾರ ಉದ್ಘಾಟಿಸಿದ್ದಾರೆ. ಜಯಶಂಕರ ಭೂಪಾಲಪಲ್ಲಿ ಜಿಲ್ಲೆಯ ಮೆಡಿಗಡ್ಡ ಗ್ರಾಮದಲ್ಲಿ ಗೋದಾವರಿ ನದಿಗೆ ಅಡ್ಡಲಾಗಿ ಈ ಯೋಜನೆ ನಿರ್ಮಿಸಲಾಗಿದೆ.

Advertisement

ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌, ಗುಜರಾತ್‌ ಸಿಎಂ ವಿಜಯ್‌ ರೂಪಾಣಿ, ಆಂಧ್ರ ಮುಖ್ಯ ಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಪಾಲ ಇ.ಎಸ್‌.ಎಲ್. ನರಸಿಂಹನ್‌ ಹಾಜರಿದ್ದರು.

ಗೋದಾವರಿ ನದಿಗೆ ಅಡ್ಡಲಾಗಿ 80 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ನಿರ್ಮಿಸಲಾಗಿದೆ. 45 ಲಕ್ಷ ಎಕರೆ ಪ್ರದೇಶದಲ್ಲಿ ಬೆಳಯಲಾ ಗುವ ಎರಡು ಅವಧಿಯ ಬೆಳೆಗಳಿಗೆ ಅದರಿಂದ ನೀರುಣಿಸಲಾಗುತ್ತದೆ. ಇದರ ಜತೆಗೆ ‘ಮಿಷನ್‌ ಭಗೀರಥ’ ಯೋಜನೆಯಲ್ಲಿ ಕುಡಿಯಲು ನೀರನ್ನೂ ಪೂರೈಕೆ ಮಾಡಲಾಗುತ್ತದೆ. ಗ್ರೇಟರ್‌ ಹೈದರಾಬಾದ್‌ನ ಒಂದು ಕೋಟಿ ಜನರಿಗೆ ನೀರೊದಗಿಸಲಾಗುತ್ತದೆ. ಪ್ರತಿ ದಿನ 2 ಟಿಎಂಸಿ ನೀರು ಪಡೆಯುವ ಗುರಿ ಹಾಕಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next