ಹುಣಸೂರು: ಮೆಮೂಲ್‌ವತಿಯಿಂದ ನೂತನವಾಗಿ 9.20 ಕೋಟಿ ರೂ ವೆಚ್ಚದಡಿ ನಿರ್ಮಿಸಿರುವ ಹಾಲು ಶೀಥಿಲೀಕರಣ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಹುಣಸೂರು ನಗರಕ್ಕೆ ಸಮೀಪದ ಮೂಕನಹಳ್ಳಿ ಬಳಿಯ 2 ಎಕರೆ ವಿಸ್ತೀಣದಲ್ಲಿ ಮೆಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ 9.20 ಕೋಟಿ ರೂ ವೆಚ್ಚ ದಡಿಯಲ್ಲಿ ನಿರ್ಮಿಸಿರುವ ಹಾಲು ಶೀಥಿಲೀಕರಣ ಘಟಕದ ಮುಖ್ಯದ್ವಾರದ ಬಳಿ ಟೇಪ್ ಕತ್ತರಿಸುವ ಮೂಲಕ ಹಾಗೂ ಘಟಕದಲ್ಲಿ ವಿದ್ಯುತ್ ಗುಂಡಿ ಒತ್ತಿ ಯಂತ್ರಗಳಿಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ಉಸ್ತುವಾರಿ, ಸಚಿವ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬಹತ್ ಮತ್ತು ಮಾಧ್ಯಮ ನೀರಾವರಿ ಇಲಾಖೆ ಸಚಿವ ಎಂ.ಬಿ.ಪಾಟೀಲ್, ಶಾಸಕ ಎಚ್.ಪಿ.ಮಂಜುನಾಥ್ ಸಾಥ್ ನೀಡಿದರು. ನಂತರ ಶೀಥಿಲೀಕರಣ ಕೇಂದ್ರ ವೀಕ್ಷಿಸಿ, ಮಹಿಳಾ ಡೇರಿ ಸದಸ್ಯರುಗಳ ಬಳಿಗೆ ತೆರಳಿದ ಮುಖ್ಯಮಂತ್ರಿಗಳು ಹೈನೋದ್ಯಮದ ಬಗ್ಗೆ ಚರ್ಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವದ್ವಯರು, ಶಾಸಕರನ್ನು ಮಂಗಳವಾದ್ಯದೊಂದಿಗೆ ಮಹಿಳಾ ಡೇರಿ ಸದಸ್ಯರುಗಳು ಪೂರ್ಣ ಕುಂಭಸ್ವಾಗತ ನೀಡಿದರು.
ಪಿರಿಯಾಪಟ್ಟಣ ಕಾರ್ಯಕ್ರಮ ಮುಗಿದ ನಂತರ ರಸ್ತೆ ಮಾರ್ಗವಾಗಿ ಹುಣಸೂರು ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ ಡೇರಿ ಶೀಥಿಲೀಕರಣ ಘಟಕಕ್ಕೆ ಆಗಮಿಸಿದರು.
ಮೆಮೂಲ್ ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗೇಗೌಡ, ಉಪ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಅಧ್ಯಕ್ಷ ಕೆ.ಜಿ.ಮಹೇಶ್, ನಿರ್ದೇಶಕರಾದ ಕೆ.ಎಸ್.ಕುಮಾರ್, ಶಿವಗಾಮಿ, ಎ.ಟಿ.ಸೋಮಶೇಖರ್, ಕೆ.ಸಿ.ಬಲರಾಂ, ಈರೇಗೌಡ, ಸಿದ್ದೇಗೌಡ, ನಾಗರಾಜ್, ದ್ರಾûಾಯಿಣಿ ಸೇರಿದಂತೆ ಹಾಲು ಉತ್ಪಾ$ದಕರು, ಡೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.