Advertisement

Sandalwood; ಖಡಕ್ ಎಂಟ್ರಿಗೆ ‘ಇನಾಮ್ದಾರ್’ ರೆಡಿ

06:04 PM Oct 27, 2023 | Team Udayavani |

ಈಗಾಗಲೇ ತನ್ನ ಟೈಟಲ್‌, ಪೋಸ್ಟರ್‌, ಟೀಸರ್‌, ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸೌಂಡ್‌ ಮಾಡುತ್ತಿರುವ “ಇನಾಮ್ದಾರ್‌’ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ “ಇನಾಮ್ದಾರ್‌’ ಸಿನಿಮಾವನ್ನು ಏಕಕಾಲಕ್ಕೆ ಎಲ್ಲ ಭಾಷೆಗಳಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

“ಇನಾಮ್ದಾರ್‌’ ಸಿನಿಮಾದ ಮೂಲಕ ನವ ನಟ ರಂಜನ್‌ ಛತ್ರಪತಿ ಆ್ಯಕ್ಷನ್‌ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಚಿರಶ್ರೀ ಅಂಚನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಎಸ್ತಾರ್‌ ನೊರೋನ್ಹಾ, ಪ್ರಮೋದ್‌ ಶೆಟ್ಟಿ, ಎಂ. ಕೆ. ಮಠ, ಥ್ರಿಲ್ಲರ್‌ ಮಂಜು, ಶರತ್‌ ಲೋಹಿತಾಶ್ವ, ಅವಿನಾಶ್‌, ರಘು ಪಾಂಡೇಶ್ವರ್‌, ಕರಣ್‌ ಕುಂದರ್‌, ಯಶ್‌ ಆಚಾರ್ಯ, ನಾಗರಾಜ ಬೈಂದೂರು, ಪ್ರಶಾಂತ್‌ ಸಿದ್ಧಿ, ಸಂಜು ಬಸಯ್ಯ, ಮಹಾಬಲೇಶ್ವರ ಕ್ಯಾದಿಕೆ, ಲಕ್ಷ್ಮೀ ಪ್ರಿಯ, ಚಿತ್ರಕಲಾ ರಾಜೇಶ್‌, ರಕ್ಷಿತ್‌ ರಾಮಚಂದ್ರ ಶೆಟ್ಟಿ ಹೀಗೆ ದೊಡ್ಡ ಕಲಾವಿದರ ತಾರಾಬಳಗವೇ “ಇನಾಮಾªರ್‌’ ಸಿನಿಮಾದಲ್ಲಿದೆ.

“ತಸ್ನೈ ಪ್ರೊಡಕ್ಷನ್ಸ್‌’ ಮತ್ತು “ಶ್ರೀಕುಂತಿಯಮ್ಮ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಇನಾಮ್ದಾರ್‌’ ಚಿತ್ರವನ್ನು ನಿರಂಜನ್‌ ಶೆಟ್ಟಿ ತಲ್ಲೂರು ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸಂದೇಶ್‌ ಶೆಟ್ಟಿ ಆಜ್ರಿ ಆ್ಯಕ್ಷನ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ “ಇನಾಮ್ದಾರ್‌’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

“ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದಲ್ಲಿ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್’ ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವಿನ ವರ್ಣಸಂಘರ್ಷದ ಕಥೆಯನ್ನು ಹೇಳಲಾಗಿದೆ. ಸಸ್ಪೆನ್ಸ್‌-ಥ್ರಿಲ್ಲರ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಎಲ್ಲವೂ “ಇನಾಮ್ದಾರ್‌’ ಸಿನಿಮಾದಲ್ಲಿದೆ. ಮಾಸ್‌ ಮತ್ತು ಕ್ಲಾಸ್‌ ಆಡಿಯನ್ಸ್‌ಗೆ ಇಷ್ಟವಾಗುವಂತೆ ಸಿನಿಮಾ ಮಾಡಿದ್ದೇವೆ’ ಎಂಬುದು “ಇನಾಮ್ದಾರ್‌’ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ಮಾತು.

“90ರ ದಶಕದಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಸ್ಫೂರ್ತಿ. 2 ವರ್ಷ ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲಾಗಿದ್ದು, ಬುಡಕಟ್ಟು ಜನಗಾಗು ತ್ತಿರುವ ಅನ್ಯಾಯ ತೋರಿಸುವ ಪ್ರಯತ್ನ ಮಾಡಿದ್ದೇವೆ. ಡಬ್ಬಲ್‌ ಸ್ಕ್ರೀನ್‌ ಪ್ಲೇ ನಡುವೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ನಮ್ಮ ನಿರೀಕ್ಷೆಗೂ ಮೀರಿ “ಇನಾಮ್ದಾರ್’ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಕೂಡ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬುದು ನಿರ್ಮಾಪಕ ನಿರಂಜನ್‌ ಶೆಟ್ಟಿ ತಲ್ಲೂರು ವಿಶ್ವಾಸದ ಮಾತು.

Advertisement

ನಟನಾಗಬೇಕೆಂಬ ಏಳೆಂಟು ವರ್ಷಗಳ ಹಿಂದಿನ ಕನಸು “ಇನಾಮ್ದಾರ್‌’ ಮೂಲಕ ನನಸಾಗುತ್ತಿದೆ. ಸಿನಿಮಾದಲ್ಲಿ ಡಬಲ್‌ ಶೇಡ್‌ ಪಾತ್ರಗಳಿದ್ದು, ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಇದೀಗ ನಮ್ಮ ಸಿನಿಮಾ, ನನ್ನ ಪಾತ್ರಕ್ಕೆ ಪ್ರೇಕ್ಷಕರು ಫ‌ುಲ್‌ ಮಾರ್ಕ್ಸ್ ಕೊಟ್ಟಿದ್ದಾರೆ’ ಎನ್ನುತ್ತಾರೆ ನಾಯಕ ರಂಜನ್‌ ಛತ್ರಪತಿ.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next