Advertisement
ಹಲಸು ಹೆಚ್ಚಿಗೆ ಖರ್ಚಿಲ್ಲದೆ ದೊರೆಯುವ ಉತ್ಪನ್ನ. ಪ್ರತಿಯೊಬ್ಬ ರೈತರು ಬೆಳೆಸಬಹುದು. ಒಂದು ಕಾಲದಲ್ಲಿ ಅದರಷ್ಟಕ್ಕೆ ಬಿದ್ದು ಹುಟ್ಟಿ ಫಲ ನೀಡು ತ್ತಿದ್ದ ಹಲಸಿಗೆ ಈಗ ಬಹುವಿಧ ಮಾರುಕಟ್ಟೆ ಇದೆ. ಆದರೂ ಹಿಂದೆ ಇದ್ದಷ್ಟು ಮರಗಳು ಈಗ ಕಾಣುತ್ತಿಲ್ಲ. ಮಾರುಕಟ್ಟೆ ಅಬಿವೃದ್ಧಿಪಡಿಸಲು ಹಲಸಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. ತೂಬುಗೆರೆ, ಸಖರಾಯಪಟ್ಟಣ, ಚೇಳೂರು ಹಾಗೂ ಖಾನಾಪುರ ಹಲಸಿನ ಬೆಳೆಯ ಪ್ರಸಿದ್ಧ ತಾಣ ವಾಗಿದೆ. ಸ್ಥಳೀಯವಾಗಿ ರೈತರಿಂದಲೇ ಹೆಸ ರಿಸಲ್ಪಡುವ ತಳಿಗಳು ಪ್ರಚಲಿತವಾಗಿರುತ್ತವೆ. ಸ್ವರ್ಣ ಎಂಬ ಹಲಸು ತಳಿಯನ್ನು ಬೆಂಗಳೂರು ಕೃಷಿ ವಿ.ವಿ. ಬಿಡುಗಡೆ ಮಾಡಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು ದಕ್ಷಿಣ ಭಾರತದ ಸ್ಥಳೀಯ ಹೆಸರಿನ 69 ಹಲಸಿನ ತಳಿ ಸಂಗ್ರಹ ತೋಪು ನಿರ್ಮಾಣ ಮಾಡಿದೆ. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 6 ತಳಿಗಳನ್ನು ಗುರುತಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳಲ್ಲಿ ಬಹಳಷ್ಟು ಪ್ರಯೋಗಗಳು ನಡೆಯುತ್ತಿದ್ದು ಬಹುತೇಕ ಜನ ಮನ್ನಣೆ ಗಳಿಸುತ್ತಿವೆ. ಸಾಕಷ್ಟು ಸಣ್ಣ ಮಟ್ಟದ ಉದ್ದಿಮೆ ಗಳೂ ಕೂಡ ಇದ್ದು ತೋಟಗಾರಿಕೆ ಇಲಾಖೆಯ ಸಹಕಾರ ಪಡೆದು ಸ್ಥಾಪನೆಯಾಗುತ್ತಿವೆ. ದಕ್ಷಿಣ ಕನ್ನಡದಲ್ಲಿ ತೋಟಗಾರಿಕೆ ಇಲಾಖೆಯ ಪ್ರಾಯೋ ಜಿತ ಪಿಂಗಾರ ಎನ್ನುವ ರೈತ ಉತ್ಪಾದಕ ಕಂಪೆನಿಯು ಹಲಸಿನ ಹಪ್ಪಳ, ಹಲ್ವಾ, ಚಿಪ್ಸ್, ಹಲಸಿನ ಬೆರಟ್ಟಿ ಯಂತಹ ಉತ್ಪನ್ನಗಳನ್ನು ತಯಾರಿಸುತ್ತಿದೆ.
Related Articles
Advertisement