Advertisement

Gruha Jyothi  ಹೆಸರಿನಲ್ಲಿ ರಾಜ್ಯವನ್ನು ಕತ್ತಲಿನಲ್ಲಿಡಲಾಗಿದೆ: ನಳಿನ್‌

12:06 AM Sep 01, 2023 | Team Udayavani |

ಮಂಗಳೂರು: ಕಾಂಗ್ರೆಸ್‌ ಪಕ್ಷವು ಚುನಾವಣೆ ಪೂರ್ವದಲ್ಲಿ ಮಾನದಂಡವಿಲ್ಲದ ಗ್ಯಾರಂಟಿಯನ್ನು ಘೋಷಿಸಿತ್ತು. ಇದೀಗ ಹಲವು ಮಾನದಂಡ ವಿಧಿಸಲಾಗಿದೆ. ಗೃಹಜ್ಯೋತಿ ಹೆಸರಿನಲ್ಲಿ ಇಡೀ ರಾಜ್ಯವನ್ನು ಕತ್ತಲಿನಲ್ಲಿಡಲಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಟೀಕಿಸಿದರು.

Advertisement

ಮಂಗಳೂರಿನಲ್ಲಿ ಗುರುವಾರ ಮಾಧ್ಯಮದ ಜತೆ ಮಾತನಾಡಿದ ಅವರು, ಝೀರೋ ಬಿಲ್‌ ಜತೆ ಇದೀಗ ಝೀರೋ ಕರೆಂಟ್‌ ಆಗಿದೆ ಎಂದ ಅವರು, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಜಾಗ ಇಲ್ಲ. ಸಾಮಾಜಿಕ ಜಾಲತಾಣದವರ ಮೇಲೂ ಪ್ರಕರಣ ದಾಖಲಿಸಲಾಗುತ್ತಿದೆ. ಭ್ರಷ್ಟಾಚಾರ ಆರೋಪ ಮಾಡಿದ ಅಧಿಕಾರಿಗಳ ಮೇಲೂ ಕೇಸ್‌ ಹಾಕಲಾಗುತ್ತಿದೆ ಎಂದರು.

ಇಂದಿರಾಗಾಂಧಿ ಅವರ ಕಾಲದ ಗತವೈಭವ ಮರುಕಳಿಸುತ್ತಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆ ಗತವೈಭವದಲ್ಲಿ ತುರ್ತು ಪರಿಸ್ಥಿತಿಯನ್ನೂ ಹೇರಲಾಗಿತ್ತು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸರಕಾರದಿಂದ ರೈತರಿಗೆ ಅನ್ಯಾಯ
ತಮಿಳುನಾಡಿಗೆ ನೀರು ಬಿಟ್ಟಿರುವದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗಿದೆ. ರಾಜ್ಯ ಸರಕಾರ ನಮ್ಮ ನಾಡಿನ ರೈತರಿಗೆ ನ್ಯಾಯ ಕೊಡುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಸದ್ಯ ಬರ ಪರಿಸ್ಥಿತಿ ಉಂಟಾಗಿದೆ. ರೈತರ ಪಂಪ್‌ಸೆಟ್‌ಗಳಿಗೂ ಸಮರ್ಪಕ ವಿದ್ಯುತ್‌ ನೀಡುತ್ತಿಲ್ಲ. ರಾಜ್ಯ ಸರಕಾರದ ಈ ನಡೆಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next