Advertisement
ಕಾಸರಗೋಡಿನಲ್ಲಿ ಜರಗಿದ ಜಿಲ್ಲಾ ಸ್ಟೂಡೆಂಟ್ ಟ್ರಾವೆಲ್ ಫೆಸಿಲಿಟಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Related Articles
Advertisement
ಜೂನ್ 15ರ ವರೆಗೆ ಈಗಿರುವ ಪಾಸ್ ಬಳಸಿಕೊಂಡು ಬಸ್‌ಗಳಲ್ಲಿ ಮಕ್ಕಳಿಗೆ ಉಚಿತ ಪ್ರಯಾಣ ಮಂಜೂರುಗೊಳಿಸಲು ಸಭೆಯಲ್ಲಿ ಮಹತ್ವದ ನಿಧಾರಕ್ಕೆ ಬರಲಾಯಿತು.
ಖಾಸಗಿ ಸಂಸ್ಥೆಗಳು, ಪ್ಯಾರಲಲ್ ಕಾಲೇಜುಗಳು, ಅಂಗೀಕೃತ ಖಾಸಗಿ ಶಿಕ್ಷಣ ಸಂಸ್ಥೆಗಳು ಮೊದಲಾದವುಗಳನ್ನು ಹೊರತುಪಡಿಸಿ ಎಲ್ಲಾ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರು ನೀಡುವ ಉಚಿತ ಪ್ರಯಾಣ ಕಾರ್ಡ್, ಐಡೆಂಟಿಂಟಿ ಕಾರ್ಡ್ ಬಳಸಿಕೊಂಡು ಬಸ್‌ಗಳಲ್ಲಿ ಪ್ರಯಾಣ ವ್ಯವಸ್ಥೆ ಮಾಡಿಕೊಡಲು ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಡ್ಮಿಶನ್ ಪೂರ್ಣಗೊಂಡ ಬಳಿಕ 15 ದಿನಗಳೊಳಗೆ ನೂತನ ಪಾಸ್‌ಗಳನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಜಾದಿನ ಉಚಿತ ಪ್ರಯಾಣಶೈಕ್ಷಣಿಕ ಅಗತ್ಯಗಳಿಗಾಗಿ ರಜಾದಿನಗಳಂದು ಕೂಡ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಮಂಜೂರುಗೊಳಿಸಲಾಗುವುದು. ಬಸ್‌ಗೆ ಹತ್ತಲು ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಸರತಿ ಸಾಲಿನಲ್ಲಿ ನಿಲ್ಲಿಸಿ ತೊಂದರೆ ಕೊಡಬಾರ ದೆಂದು ನಿರ್ದೇಶಿಸಲಾಗಿದೆ. ಯಾವುದೇ ದೂರುಗಳಿದ್ದಲ್ಲಿ ಆರ್‌ಟಿಓ ಅವರ ಮೊಬೈಲ್ ನಂಬರ್ (8547639014) ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾ ಸ್ಟೂಡೆಂಟ್ಸ್ ಟ್ರಾವೆಲ್ ಫೆಸಿಲಿಟಿ ಸಮಿತಿಯ ಅಧ್ಯಕ್ಷ ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ತಿಳಿಸಿದ್ದಾರೆ. ಶಾಲೆಗಳಲ್ಲಿ ಮಾದಕವಸ್ತುಗಳ ಬಳಕೆ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಬಲವಾಗಿ ಪ್ರತಿಭಟಿಸಬೇಕು ಎಂದು ಜಿಲ್ಲಾ ಕಲೆಕ್ಟರ್ ಇದೇ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು