Advertisement

‘ಭಕ್ತಿಯ ಹರಕೆಯಾಗಿ ಸಾಂಸ್ಕೃತಿಕ ಸೇವಾ ಪದ್ಧತಿ ಸ್ವಾಗತಾರ್ಹ ‘

02:20 PM Jul 01, 2018 | |

ಉಳ್ಳಾಲ: ನಮ್ಮ ಸನಾತನ ಸಾಂಸ್ಕೃತಿಕ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ದೇವಸ್ಥಾನಗಳಲ್ಲಿ ಭಕ್ತಿಯ ಹರಕೆಯಾಗಿ ಸಾಂಸ್ಕೃತಿಕ ಸೇವಾ ಪದ್ಧತಿಯನ್ನು ಜಾರಿಗೊಳಿಸುವುದು ಸ್ವಾಗತಾರ್ಹ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್‌ ಅಭಿಪ್ರಾಯಪಟ್ಟರು. ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ರಮಾನಂದ ಸ್ವಾಮಿ ಸಂಪೂಜ್ಯೆ ಕಲ್ಯಾಣ ಪ್ರಾಪ್ತಿ ಹರಿಕಥಾ ಸೇವೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ದೇವಸ್ಥಾನದ ಸೇವಾ ಟ್ರಸ್ಟ್‌ ಅಧ್ಯಕ್ಷ ಮಹಾಬಲ ಶೆಟ್ಟಿ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶಾಂತಲಾ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್‌ ಕುಮಾರ್‌ ಉಪಸ್ಥಿತರಿದ್ದರು. ಪ್ರಥಮ ಸಾಂಸ್ಕೃತಿಕ ಸೇವೆಯಾಗಿ ಹರಿದಾಸ ದೇವಕೀತನಯ ಕೂಡ್ಲು ‘ಸೀತಾ ಕಲ್ಯಾಣ’ ಹರಿಕಥೆ ನಡೆಸಿಕೊಟ್ಟರು. ಗುಣವತಿ ಟೀಚರ್‌ ಹಾಗೂ ಸತೀಶ್‌ ಆಚಾರ್‌ ಹಿಮ್ಮೇಳದಲ್ಲಿ ಸಹಕರಿಸಿದರು. ಪ್ರತೀ ಶುಕ್ರವಾರ ಮಧ್ಯಾಹ್ನ ಮಹಾಪೂಜೆಯ ಮೊದಲು 11 ಗಂಟೆಯಿಂದ 12.30ರ ತನಕ ವಿವಿಧ ಹರಿದಾಸರುಗಳಿಂದ ಹರಿಕಥಾ ಸತ್ಸಂಗವು ಮಂಗಳೂರು ಹರಿಕಥಾ ಪರಿಷತ್‌ ಸಹಯೋಗದಲ್ಲಿ ನಡೆಯಲಿದೆ.

ಹರಿಕಥಾ ಪರಿಷತ್‌ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ದೇವಸ್ಥಾನದ ಟ್ರಸ್ಟಿ
ಮಧುಸೂದನ ಆಯಾರ್‌ ವಂದಿಸಿದರು.

ಮುಂದಿನ ದಿನಗಳಲ್ಲಿ ಲಭ್ಯ 
ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಭಕ್ತರಿಗಾಗಿ ಆರೋಗ್ಯ, ಸಂಪತ್ತು, ವಿವಾಹ, ಸಂತಾನ ಭಾಗ್ಯ, ಗೃಹಶಾಂತಿ ಹಾಗೂ ಕುಟುಂಬದ ಸರ್ವ ಕ್ಷೇಮಕ್ಕಾಗಿ ಈ ‘ಕಲ್ಯಾಣ ಪ್ರಾಪ್ತಿ ಹರಿಕಥಾ ಸೇವೆ’ ಕೂಡ ಲಭ್ಯವಿದೆ ಎಂದು ಮಹಾಬಲ ಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next