Advertisement

ಪಂಚಭೂತಗಳಲ್ಲಿ ಲೀನರಾದ ಏಣಗಿ ಬಾಳಪ್ಪ

07:55 AM Aug 20, 2017 | |

ಬೆಳಗಾವಿ/ಸವದತ್ತಿ: ನಾಡೋಜ ಹಿರಿಯ ರಂಗಜೀವಿ, ನಾಟ್ಯಭೂಷಣ, ಕಲಾ ತಪಸ್ವಿ ಡಾ| ಏಣಗಿ ಬಾಳಪ್ಪ ಶನಿವಾರ
ಪಂಚಭೂತಗಳಲ್ಲಿ ಲೀನರಾದರು.

Advertisement

ಶುಕ್ರವಾರ ಬೆಳಗ್ಗೆ ವಿಧಿವಶರಾದ ಡಾ| ಏಣಗಿ ಬಾಳಪ್ಪನವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆಯಿಂದ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಕಲ ಸರಕಾರಿ ಗೌರವದೊಂದಿಗೆ ಜನ್ಮಸ್ಥಳ ಏಣಗಿ ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬಾಳಪ್ಪನವರ ನಿವಾಸದ ಆವರಣದಲ್ಲಿ ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಗ್ರಾಮದ ಸಮೀಪದಲ್ಲಿ ಇರುವ ಜಮೀನಿನಲ್ಲಿ ಪತ್ನಿ ಸಾವಿತ್ರಮ್ಮ ಅವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬದ ಸದಸ್ಯರು ವಿಧಿವಿಧಾನಗಳನ್ನು ನೆರವೇರಿಸಿದರು. ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಳಪ್ಪನವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.

ಡಾ| ಏಣಗಿ ಬಾಳಪ್ಪನವರ ಪಾರ್ಥಿವ ಶರೀರಕ್ಕೆ ಸಚಿವೆ ಉಮಾಶ್ರೀ ಅಂತಿಮ ನಮನ ಸಲ್ಲಿಸಿದರು. ಸಂಸದ ಸುರೇಶ
ಅಂಗಡಿ, ಶಾಸಕರಾದ ಆನಂದ ಮಾಮನಿ, ಡಾ| ವಿಶ್ವನಾಥ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಎನ್‌.ಆರ್‌. ವಿಶುಕುಮಾರ, ಜಿಲ್ಲಾಧಿಕಾರಿ ಜಿಯಾವುಲ್ಲಾ, ಎಸ್‌ಪಿ ಡಾ| ಬಿ.ಆರ್‌. ರವಿಕಾಂತೇಗೌಡ ಗೌರವ ಸಲ್ಲಿಸಿದರು. “ಬಾಳಪ್ಪನವರ ನಿಧನದಿಂದ ನಾಡಿನ
ಸಾಂಸ್ಕೃತಿಕ ಕೊಂಡಿ ಕಳಚಿದಂತಾಗಿದೆ.

ರಂಗಭೂಮಿಯ ಬಹುದೊಡ್ಡ ಕಲಾವಿದರಾದ ಅವರು ಶತಾಯುಷಿಯಾಗಿ ನಮ್ಮೊಂದಿಗೆ ಇದ್ದಿದ್ದು ನಮ್ಮೆಲ್ಲರ
ಭಾಗ್ಯ’ ಎಂದು ಸಚಿವೆ ಉಮಾಶ್ರೀ ಸ್ಮರಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next