Advertisement

ಯುವಕರು ಯಕ್ಷಕ್ಷೇತ್ರದಲ್ಲಿ ಉತ್ಸುಕರಾಗಬೇಕು: ಡಿ.ಕೆ. ಶೆಟ್ಟಿ

03:29 PM Nov 02, 2019 | Suhan S |

ಮುಂಬಯಿ, ನ. 1: ಕರ್ನಾಟಕದ ಗಂಡುಕಲೆ ಪ್ರಸಿದ್ಧಿಯ ಪರಶುರಾಮನ ಸೃಷ್ಟಿಯ ತುಳುನಾಡ ವಿಶ್ವಪ್ರಸಿದ್ಧ ಕಲೆಯಾದ ಯಕ್ಷಗಾನ ಕಲೆಯನ್ನು ಕಲಿಸಲು ಆರ್ಟ್ಸ್ ಆ್ಯಂಡ್‌ ಡ್ಯಾನ್ಸ್‌ ಸೆಂಟರ್‌ನಲ್ಲಿ ಅಭ್ಯಾಸದ ಕಾರ್ಯಗಾರ ನಡೆಸಲು ಅವಕಾಶ ಕಲ್ಪಿಸಿದ್ದು ಅಭಿನಂದನೀಯ. ಇಂತಹ ಅಭ್ಯಾಸದಲ್ಲಿ ನಮ್ಮ ಯುವ ಜನತೆ ಉತ್ಸಾಹದಿಂದ ಭಾಗವಹಿಸಬೇಕು.ಆವಾಗಲೇ ಯಕ್ಷಕ್ಷೇತ್ರದ ಸರ್ವೋನ್ನತಿ ಸಾಧ್ಯ ಎಂದು ಡಿ.ಕೆ ಶೆಟ್ಟಿ ಪೊವಾಯಿ ತಿಳಿಸಿದರು.

Advertisement

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಸಹಯೋಗದಲ್ಲಿ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಬಾಂಬೆ ಇನ್‌ಸ್ಟಿಟ್ಯೂಟ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್ ಮತ್ತು ಡ್ಯಾನ್ಸ್‌ ಸೆಂಟರ್‌ನಲ್ಲಿ ಅ. 26ರಂದು ಅಸ್ತಿತ್ವಕ್ಕೆ ತರಲಾದ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸರಳ ಕಾರ್ಯಕ್ರಮವನ್ನು ಉದ್ದೇಶಿಸಿ ಡಿ.ಕೆ. ಶೆಟ್ಟಿ ಅವರು ಮಾತನಾಡುತ್ತಿದ್ದರು. ಆರ್ಟ್ಸ್ ಆ್ಯಂಡ್‌ ಡ್ಯಾನ್ಸ್‌ ಸೆಂಟರ್‌ನ ಮೈಥಿಲಿ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ನ್ಯಾಯವಾದಿ ಮೋರ್ಲ ರತ್ನಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಚಿತ್ರ – ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next