Advertisement
ಉತ್ಸವದಲ್ಲಿ ನೂರಾರು ಭಕ್ತರು ಭಾಗಿ: ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ನೀಡಿದ ಪರಿಷ್ಕೃತ ಆದೇಶದಂತೆ ದೇವಾಲಯದ ಹೊರ ಪ್ರಾಕಾರದಲ್ಲಿ ದಿವ್ಯಪ್ರಬಂಧ ಪಾರಾಯಣದೊಂದಿಗೆ ನಡೆದ ರಾಜಮುಡಿ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ನೇತೃತ್ವದಲ್ಲಿ ಜಿಲ್ಲಾ ಖಜಾನೆಯಿಂದ ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ತಂದು ಸಂಜೆ 6.30ರ ವೇಳೆಗೆ ಪರಿಶೀಲನೆ ಮಾಡಿ ಸ್ಥಾನೀಕರು ಅರ್ಚಕ, ಪರಿಚಾರಕ, ಕಾವಲುಗಾರರ ವಶಕ್ಕೆ ನೀಡಲಾಯಿತು.
Related Articles
Advertisement
ಅಷ ತೀಥೋತ್ಸವಕ್ಕೆ ಜಿಲ್ಲಾಧಿಕಾರಿ ಅನುಮತಿ
ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ನೀಡಿದ ಆದೇಶದಂತೆ ನ.14ರಂದು ಅಷ್ಟ ತೀಥೋìತ್ಸವ ಪ್ರತಿ ವರ್ಷದಂತೆ ನಡೆಯಲಿದೆ. ಗೋ ಪೂಜೆಗೆ ಬಂದಿದ್ದ ಶಾಸಕ ಸಿ.ಎಸ್. ಪುಟ್ಟರಾಜು ಸಂಪ್ರದಾಯದಂತೆ ಅಷ್ಟ ತೀಥೋìತ್ಸವ ಹಾಗೂ ತೊಟ್ಟಿಲಮಡು ಜಾತ್ರೆಯನ್ನು ನಡೆಸುವುದರ ಜತೆಗೆ ಚೆಲುವನಾರಾಯಣ ಸ್ವಾಮಿಯ ಎಲ್ಲ ಉತ್ಸವಗಳು ಎಂದಿನಂತೆ ನಡೆಯಬೇಕು ಎಂದು ಸೂಚನೆ ನೀಡಿದ್ದರು.
ಅದರಂತೆ ಇದೀಗ ಜಿಲ್ಲಾಧಿಕಾರಿ ನೀಡಿದ ಪರಿಷ್ಕೃತ ಆದೇಶದ ಪ್ರಕಾರ ಚೆಲುವ ನಾರಾಯಣಸ್ವಾಮಿಯ ಎಲ್ಲ ಉತ್ಸವಗಳೂ ಸಹ ಸಂಪ್ರದಾಯ ಬದ್ಧವಾಗಿ ಎಂದಿನಂತೆ ಹೊರ ಭಾಗದಲ್ಲೇ ನಡೆಯಲಿದೆ.
ಅಷ್ಟ ತೀರ್ಥೋತ್ಸವದ ಕಾರ್ಯಕ್ರಮಗಳು: ಅಷ್ಟ ತೀಥೋìತ್ಸವದ ದಿನವಾದ ಭಾನುವಾರ ದೇವಾಲಯ 5.30ಕ್ಕೆ ಆರಂಭವಾಗಿ 7 ಗಂಟೆಗೆ ದೇಶಿಕರ ಸನ್ನಿಧಿಗೆ ಸ್ವಾಮಿಯ ಪಾದುಕೆ ಉತ್ಸವ ನಡೆಯಲಿದೆ. ನಂತರ ಬೆಳಗ್ಗೆ 8ಕ್ಕೆ ರಾಜಮುಡಿ ಕಿರೀಟಧಾರಣೆಯೊಂದಿಗೆ ಸ್ವಾಮಿಯ ಉತ್ಸವ ಕಲ್ಯಾಣಿಗೆ ನಡೆದು ಅಲ್ಲಿ ವೇದ ಮಂತ್ರದೊಂದಿಗೆ ಅಭಿಷೇಕ ನಡೆಯಲಿದೆ.
ಬೆಳಗ್ಗೆ 10 ಗಂಟೆಯಿಂದ ಅಷ್ಟ ತೀರ್ಥೋತ್ಸವ ಆರಂಭವಾಗಿ 8 ತೀರ್ಥಗಳಲ್ಲಿ ಅಭಿಷೇಕ ನಡೆದ ನಂತರ ಸಂಜೆ 5ಕ್ಕೆ ವೈಕುಂಠ ಗಂಗೆಯಲ್ಲಿ ಕೊನೆಯ ಅಭಿಷೇಕ ನಡೆಯಲಿದೆ. ಯೋಗಾ ನರಸಿಂಹಸ್ವಾಮಿಯ ಗಿರಿ ಪ್ರದಕ್ಷಿಣೆಯೊಂದಿಗೆ ರಾತ್ರಿ 8 ಗಂಟೆಗೆ ಉತ್ಸವ ಮುಕ್ತಾಯವಾಗಲಿದೆ. ಪುತ್ರ ಭಾಗ್ಯ ಪೇಕ್ಷಿಸಿ ಹರಕೆ ಯೊಂದಿಗೆ 8 ಗಂಟೆಗೆ ಕಲ್ಯಾಣಿಯಲ್ಲಿ ಭಾಗವಹಿಸಬಹುದು ಎಂದು ದೇವಾಲಯದ ಮೂಲಗಳು ತಿಳಿಸಿವೆ.