Advertisement

ಮಂಗಳೂರು ವ್ಯಾಪ್ತಿ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಗಿಂತ ಜಾಸ್ತಿ ಮತದಾನ

09:01 PM Apr 19, 2019 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ದಾಖಲೆಯ ಶೇ.77.90ರಷ್ಟು ಮತದಾನವಾಗಿದ್ದರೂ ಜಿಲ್ಲೆಯ ಉಳಿದ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಮಂಗಳೂರು ನಗರ ಪ್ರದೇಶವೇ ಹಿಂದೆ ಇದೆ. ಆದರೂ ಕಳೆದ ಮೂರು ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲಿ ಸ್ವಲ್ಪ ಸುಧಾರಿಸಿದೆ.

Advertisement

ಮಂಗಳೂರು ಉತ್ತರದಲ್ಲಿ 2009ರಲ್ಲಿ ಶೇ.73.23 ಮತದಾನವಾದರೆ, 2014ಕ್ಕೆ ಶೇ. 74.74ಕ್ಕೆ ಹೆಚ್ಚಳವಾಗಿತ್ತು. ಇನ್ನು, 2019ರ ಲೋಕಸಭಾ ಚುನಾವಣೆಯಲ್ಲಿ ಶೇ.75.31ರಷ್ಟು ಮತದಾನವಾಗಿದೆ. ಮಂಗಳೂರು ದಕ್ಷಿಣದಲ್ಲಿ ಜಿಲ್ಲೆಯಲ್ಲಿಯೇ ಈ ಬಾರಿ ಅತೀ ಕಡಿಮೆ ಮತದಾನವಾದರೂ ಕಳೆದ ಮೂರು ಲೋಕಸಭಾ ಚುನಾವಣೆಗಿಂತ ಹೆಚ್ಚಿನ ಮತದಾನವಾಗಿದೆ.

2009ರಲ್ಲಿ ಶೇ.68.26ರಷ್ಟು ಮತದಾನವಾದರೆ, 2014ರಲ್ಲಿ ಶೇ.70.01 ಮತ್ತು 2019ರಲ್ಲಿ ಶೇ.70.21ರಷ್ಟು ಮತದಾನವಾಗಿದೆ. ಮಂಗಳೂರು ಕ್ಷೇತ್ರದಲ್ಲಿ ಕಳೆದ ಮೂರು ಲೋಕಸಭಾ ಮತದಾನದಲ್ಲಿ ಏರಿಳಿತ ಕಂಡುಬಂದರೂ ಈ ವರ್ಷ ಕಳೆದ ಬಾರಿಗಿಂತ ಹೆಚ್ಚು ಮತದಾನವಾಗಿದೆ. 2009ರಲ್ಲಿ ಶೇ.74.61ರಷ್ಟು ಮತದಾನವಾದರೆ, 2014ರಲ್ಲಿ ಶೇ. 74.51ರಷ್ಟು ಆಗಿತ್ತು. ಈ ಬಾರಿ 75.49ರಷ್ಟು ಮತದಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next