Advertisement

ತಮಿಳುನಾಡು, ಗುಜರಾತ್‌ ಸಮುದ್ರದಲ್ಲಿ ಗಾಳಿ ವಿದ್ಯುತ್‌ ಕೇಂದ್ರ: ಸಚಿವ ವೈಷ್ಣವ್‌

11:07 AM Jun 20, 2024 | |

ನವದೆಹಲಿ: ತಮಿಳುನಾಡು, ಗುಜರಾತ್‌ ಸಮುದ್ರದ ಆಚೆ ಗಾಳಿಯ ಮೂಲಕ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಇದನ್ನೂ ಓದಿ:‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

ಅದರ ಅನ್ವಯ ತಮಿಳುನಾಡಿನಲ್ಲಿ 1 ಘಟಕ ಸ್ಥಾಪನೆಯಾಗಲಿದೆ. ಗುಜರಾತ್‌ನಲ್ಲಿ 1 ಘಟಕದ ಆರಂಭವಾಗಲಿದೆ. 2 ಘಟಕಗಳು ತಲಾ 500 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಿವೆ. ಅದಕ್ಕಾಗಿ ಒಟ್ಟು 6853 ಕೋಟಿ ರೂ. ಮೊತ್ತ ನೀಡಲು ಕೂಡ ತೀರ್ಮಾನಿಸಲಾಗಿದೆ ಎಂದು ಕೇಂದ್ರ ವಾರ್ತಾ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

3 ಕೋಟಿ ಮನೆಗಳ ನಿರ್ಮಾಣಕ್ಕೆ ಸಮ್ಮತಿ:
ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಹೆಚ್ಚುವರಿಯಾಗಿ ಗ್ರಾಮೀಣ, ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ 3 ಕೋಟಿ ಮನೆಗಳ ನಿರ್ಮಾಣಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ.

ವಾರಾಣಸಿ ಏರ್ಪೋರ್ಟ್‌ಗೆ 2870 ಕೋಟಿ:
ಕೇಂದ್ರ: ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿಯ ವಿಮಾನ ನಿಲ್ದಾಣದ ವಿಸ್ತೃತ ಕಾಮಗಾರಿಗಾಗಿ 2869 ಕೋಟಿ ರೂ.ನೀಡಲು ಕೇಂದ್ರ ಸಂಪುಟ ತೀರ್ಮಾನಿಸಿದೆ. ಅದರಲ್ಲಿ ಹೊಸ ಟರ್ಮಿನಲ್‌, ರನ್‌ ವೇ ವಿಸ್ತರಣೆ ಯೋಜನೆ ಸೇರಿದೆ. ಕಾಮಗಾರಿ ಮುಕ್ತಾಯದ ಬಳಿಕ ವಿಮಾನ ನಿಲ್ದಾಣದಲ್ಲಿ ಪ್ರತಿ ವರ್ಷ 99 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ವಿಮಾನ ನಿಲ್ದಾಣಕ್ಕೆ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next