Advertisement

‘ವಿದ್ಯಾರ್ಥಿ ಜೀವನದಲ್ಲಿ ಪರಿಸರದ ಅರಿವು ಅಗತ್ಯ’

11:14 AM Jun 09, 2018 | |

ಮಂಗಳಗಂಗೋತ್ರಿ: ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಮಂಗಳೂರು ನ್ಪೋರ್ಟ್ಸ್ ಪ್ರಮೋಟರ್ ಕ್ಲಬ್‌ನ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು.

Advertisement

ಮಂಗಳೂರು ವಿವಿಯ ಪ್ರಭಾರ ಕುಲಪತಿ ಡಾ| ಕಿಶೋರ್‌ ಕುಮಾರ್‌ ಅಧ್ಯಕ್ಷತೆ ವಹಿಸಿ, ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಮಂಗಳೂರಿನ ಉಪ ಅರಣ್ಯಾಧಿಕಾರಿ ರವಿ ಕುಮಾರ್‌, ಮಂಗಳೂರು ವಿವಿ ಕುಲಸಚಿವ ಪ್ರೊ| ನಾಗೇಂದ್ರ ಪ್ರಕಾಶ್‌, ಪರೀಕ್ಷಾಂಗ  ಕುಲಸಚಿವ ಪ್ರೊ| ಎ. ಎಂ. ಖಾನ್‌, ಪ್ರಾಧ್ಯಾಪಕರಾದ ಡಾ| ನಾಗಪ್ಪ ಗೌಡ ಉಪಸ್ಥಿತರಿದ್ದರು. ಮಂಗಳೂರು ವಿ.ವಿ. ಪ್ರಾಧ್ಯಾಪಕರಾದ ಡಾ| ಪ್ರಶಾಂತ್‌ ನಾಯ್ಕ ಅವರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋ ಜಕ ರಾಜು ಕೃಷ್ಣ ಚಲಾನ್ನಾವರ್‌ ನಿರೂಪಿಸಿದರು. ಬಳಿಕ ವಿಶ್ವಮಂಗಳ ವಿದ್ಯಾರ್ಥಿಗಳು ಸೇರಿದಂತೆ ಗಣ್ಯರು ವಿವಿ ಕ್ರೀಡಾಂಗಣದ ಬಳಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿದರು.

ಎಚ್ಚೆತ್ತುಕೊಳ್ಳಬೇಕಾಗಿದೆ
ಇಂದು ಮಾನವರು ಅರಣ್ಯ ನಾಶ ಮಾಡಿ ಕಾಂಕ್ರೀಟು ನಾಡು ನಿರ್ಮಿಸುತ್ತಿದ್ದಾರೆ. ಈಗಿನಿಂದಲೇ ನಾವು ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿ ಸಮುದಾಯದಲ್ಲಿ ಪರಿಸರ ಪ್ರಜ್ಞೆಯ ಅರಿವು ಕಟ್ಟಿಕೊಡುವ ಪ್ರಯತ್ನವನ್ನು ನಾವು ಮಾಡಬೇಕಿದೆ.
 - ಪ್ರೊ| ಕೆ.ಭೈರಪ್ಪ 
ಮಂಗಳೂರು ವಿವಿಯ ವಿಶ್ರಾಂತ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next