Advertisement

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

11:37 PM Apr 26, 2024 | Team Udayavani |

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ವೇಳೆ ಕೆಲವೆಡೆ ಹಿಂಸಾಚಾರ ನಡೆದಿದ್ದು, ಬಹುತೇಕ ಕಡೆ ಶಾಂತಿಯುತ ಮತದಾನ ನಡೆದಿದೆ. ಹಲವು ಕಡೆ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ತಡವಾಗಿ ನಡೆದ ವರದಿಯಾಗಿದೆ.

Advertisement

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡೊಳಗೆ ಇರುವ ಗ್ರಾಮ ಇಂಡಿಗನತ್ತದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲವೆಂದು ಗ್ರಾಮ ಸ್ಥರು ಮತದಾನ ಬಹಿಷ್ಕರಿಸಿದ್ದರು. ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳು, ಪೊಲೀಸರ ಮೇಲೆ ರೊಚ್ಚಿಗೆದ್ದ ಗ್ರಾಮಸ್ಥರು ಮತಯಂತ್ರ, ವಿವಿ ಪ್ಯಾಟ್‌, ಮತಗಟ್ಟೆಯ ಬಾಗಿಲು, ಕಿಟಕಿ, ಮೇಜು, ಕುರ್ಚಿ ಇತರ ಪರಿಕರಗಳನ್ನು ಧ್ವಂಸ ಮಾಡಿದ್ದಾರೆ. ಗ್ರಾಮಸ್ಥರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲು ಮುಂದಾದ ಪೊಲೀಸರ ವರ್ತನೆಗೆ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಕಲ್ಲುತೂರಾಟ ನಡೆಸಿ, ಡೀಸೆಲ್‌ ಪೆಟ್ರೋಲ್‌ ಎರಚಿ ಬೆಂಕಿ ಹಾಕಿದ್ದಾರೆ.

ಕಲ್ಲುತೂರಾಟದಲ್ಲಿ ತಹಶೀಲ್ದಾರ್‌, ಪೊಲೀಸ್‌ ಪೇದೆ, ಚುನಾವಣ ಸಿಬಂದಿ ಸಹಿತ ಹಲವರು ಗಾಯಗೊಂಡಿದ್ದಾರೆ. ಇನ್ನೊಬ್ಬ ಪೊಲೀಸ್‌ ಪೇದೆಗೆ ಮಹಿಳೆಯರು ಕಪಾಳಮೋಕ್ಷ ಮಾಡಿರುವುದಾಗಿ ತಿಳಿದು ಬಂದಿದೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಮತಗಟ್ಟೆ ಬಳಿ ನೆರೆದಿದ್ದ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರನ್ನು ನಿಗದಿತ ಸ್ಥಳದಿಂದ ಹೊರ ಕಳಿಸಲು ಮುಂದಾದ ಪೊಲೀಸರ ವಿರುದ್ಧ ಸ್ಥಳೀಯರು ಮಾತಿನ ಚಕಮಕಿಗಿಳಿದು, ಕೆಲ ಸಮಯ ಮತಗಟ್ಟೆ ಬಳಿ ಧರಣಿ ನಡೆಸಿದರು.

ಸ್ಥಳಕ್ಕಾಗಮಿ ಸಿದ ವೃತ್ತ ನಿರೀಕ್ಷಕ ವೆಂಕಟೇಗೌಡ ಸ್ಥಳೀಯರನ್ನು ಸಮಾಧಾನಗೊಳಿಸಿ ಧರಣಿ ಕೈಬಿಡಿ ಸಲು ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕೈಕೊಟ್ಟ ಮತ ಯಂತ್ರ, ಕಂಗಾಲಾದ ಮತದಾರರು ಕೆಲವು ಕಡೆ ಇವಿಎಂ ಯಂತ್ರಗಳಲ್ಲಿ ಸಣ್ಣಪುಟ ದೋಷ ಕಂಡು ಬಂದಿದ್ದು, ತತ್‌ಕ್ಷಣ ಅದನ್ನು ಸೆಕ್ಟರ್‌ ಅಧಿಕಾರಿಗಳು ಸರಿಪಡಿಸಿ ಸರಿಯಾದ ಸಮಯಕ್ಕೆ ಮತದಾನ ಆರಂಭಿಸಿದರು. ಮಂಡ್ಯ ತಾಲೂಕಿನ ಚಾಮಲಾಪುರ, ಹೊನ್ನೂರು, ಯರ ಗಂಬಳ್ಳಿ ಗ್ರಾಮಗಳಲ್ಲಿ ಮತ ಯಂತ್ರಗಳು ಕೈಕೊಟ್ಟಿ ದ್ದರಿಂದ ಮತದಾರರಲ್ಲಿ ಗೊಂದಲ ಉಂಟಾಯಿತು. ತಾಂತ್ರಿಕ ಸಿಬಂದಿ ಸರಿಪಡಿಸಿದ ಬಳಿಕ ಮತದಾನ ಮಾಡಿದರು.

Advertisement

ರಾತ್ರಿ 7.30ರವರೆಗೂ ಮತದಾನ
ಶ್ರೀರಂಗಪಟ್ಟಣ ತಾಲೂಕಿನ ವಡಿಯಾಂಡಳ್ಳಿ ಗ್ರಾಮದ ಬೂತ್‌ ನಂ.144ರಲ್ಲಿ ಮತಯಂತ್ರ ಕೆಟ್ಟು, 45 ನಿಮಿಷ ಮತದಾನ ಸ್ಥಗಿತಗೊಂಡಿತು. ಇದರಿಂದ ಮತದಾನ ರಾತ್ರಿ 7.30ರ ವರೆಗೂ ನಡೆಸಲಾಯಿತು. ನೇರಳೆಕೆರೆ ಗ್ರಾಮದಲ್ಲೂ ಮತಯಂತ್ರ ಕೆಟ್ಟು, ಸಂಜೆ 7.30ರ ವರೆಗೆ ಮತದಾನ ನಡೆಸಲಾಯಿತು.

ಹಾಸನದ ಸಂತೇಪಟ್ಟಿಯಲ್ಲಿ ಎರಡು ಬಾರಿ ಇವಿಎಂ ಕೈಕೊಟ್ಟಿದ್ದರಿಂದ ಮತದಾರರು ಬೇಸತ್ತು ಮತ ಹಾಕದೇ ಮರಳಿದರು. ತುಮಕೂರು ಜಿಲ್ಲೆ ತಿಪಟೂರಿನ ಗಾಯತ್ರಿ ನಗರದಲ್ಲಿ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮತದಾನ ತಡವಾಯಿತು. ರಾಮನಗರದ ಬಿಡದಿ ಸಮೀಪದ ಕಲ್ಲುಗೋಪಹಳ್ಳಿಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಅರ್ಧಗಂಟೆಗೂ ಹೆಚ್ಚುಕಾಲ ಮತದಾನ ಸ್ಥಗಿತಗೊಂಡಿತ್ತು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದಲೇ ಆರಂಭ ವಾಗಿದ್ದರೂ ಕೆಲವೆಡೆ ಇವಿಎಂ, ವಿವಿಪ್ಯಾಟ್‌ ತಾಂತ್ರಿಕ ದೋಷದಿಂದ ಮತದಾನ ಆರಂಭವಾಗುವಲ್ಲಿ ತುಸು ವಿಳಂಬವಾಗಿದೆ.

ಬಿಸಿಲಿನಿಂದ ತಡವಾಗಿ
ಬಂದ ಮತದಾರರು
ಬಹುತೇಕ ಕಡೆ ಬಿಸಿಲಿನಿಂದಾಗಿ ಸಂಜೆಯವರೆಗೆ ಮತದಾನ ಕೇಂದ್ರದತ್ತ ಮತದಾರರು ಮುಖ ಮಾಡಿರಲಿಲ್ಲ. ಹೀಗಾಗಿ ಸಂಜೆ 5 ಗಂಟೆಯ ಬಳಿಕ ಮತದಾನ ಮಾಡಲು ಮುಂದಾಗಿದ್ದರಿಂದ ಮತದಾನ ವಿಳಂಬವಾಗಿದೆ. ಕೆಲ ಮತಗಟ್ಟೆಯಲ್ಲಿ 6 ಗಂಟೆಯಾದರೂ ಮತದಾನ ಮುಗಿಯದೇ, 6 ಗಂಟೆ ನಂತರ ಬಂದ ಮತದಾರರನ್ನು ಸಾಲಿನಲ್ಲಿ ನಿಲ್ಲಿಸಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಬಹುತೇಕ ಕಡೆ ರಾತ್ರಿ 7.30ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next