Advertisement

ಶಿಮ್ಲಾದಲ್ಲಿ “ಜಲಕ್ಷಾಮ:ನೀರಿಲ್ಲದೆ ತತ್ತರಿಸಿದ ನಗರ

10:32 AM May 30, 2018 | Harsha Rao |

ಶಿಮ್ಲಾ: ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲೀಗ ಜಲಕ್ಷಾಮ ಎದುರಾಗಿದೆ. ಒಂದೊಂದು ಹನಿ ನೀರೂ ಬಂಗಾರವಾದಂತಾಗಿದ್ದು, ಎಲ್ಲೆಡೆ ಹಾಹಾಕಾರ ಉಂಟಾಗಿದೆ. ಪ್ರವಾಸೋದ್ಯಮದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದ್ದು, ಹೋಟೆಲ್‌ಗಳ ಮಾಲಕರು ಪ್ರವಾಸಿಗರ ಮುಂಗಡ ಬುಕಿಂಗ್‌ಗಳನ್ನು ರದ್ದುಗೊಳಿಸಲಾರಂಭಿಸಿದ್ದಾರೆ. 

Advertisement

ಕೆಲ ಪ್ರಾಂತ್ಯಗಳಲ್ಲಿ ತ್ಯಾಜ್ಯ ನೀರು ಮಿಶ್ರಿತ ನೀರು ಬರುತ್ತಿರುವುದರ ವಿರುದ್ಧ ಸಿಡಿದೆದ್ದಿರುವ ಜನ, ಅಧಿಕಾರಿಗಳ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಕಿಡಿಕಾರಿದ್ದಾರೆ. ಇನ್ನು, ಮೇ 30ರೊಳಗೆ ಸಮಸ್ಯೆ ಬಗೆ ಹರಿಯದಿದ್ದಲ್ಲಿ ನಗರ ಸಭೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ. 

ಸಿಎಂ ಸಭೆ: ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌, ಸೂಕ್ತ ಜಲ ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಮ್ಲಾ ನಗರವನ್ನು 3 ವಿಭಾಗಗಳನ್ನಾಗಿ ವಿಂಗಡಿಸಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next