ಶಿರಸಿ: ಉಪನಿಷತ್ತಿನ ವಾಣಿ ಶಂಕರರ ಭಾಷ್ಯಗಳಲ್ಲಿ ಇದೆ ಎಂದು ಬೆಂಗಳೂರು ಶ್ರೀರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ನುಡಿದರು. ಭಾನುವಾರ ನಗರದ ಯೋಗ ಮಂದಿರದಲ್ಲಿ ಸೋಂದಾ ಸ್ವರ್ಣವಲ್ಲೀ ಶ್ರೀ ಸರ್ವಜ್ಞೆàಂದ್ರ
ಪ್ರತಿಷ್ಠಾನದಿಂದ ನಡೆದ ಶಂಕರ ಜಯಂತಿ ದಾರ್ಶನಿಕರ ದಿನ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
Advertisement
ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಶಂಕರರ ವಾಣಿಗಳಲ್ಲಿ ಉಪನಿಷತ್ತಿನ ಮಾರ್ದನಿ ಇದೆ. ಉಪನಿಷತ್ತುಗಳ ಮರ್ಮ ತಿಳಿದು ಭಾಷ್ಯಗಳಲ್ಲಿ ಶಂಕರರು ಹೇಳಿದ್ದಾರೆ ಎಂದ ಅವರು, ಇಡೀ ಪ್ರಪಂಚವೇಚೈತನ್ಯಮಯವಾಗಿರುವಂತದ್ದು ಎನ್ನುವ ಬ್ರಹ್ಮವಿದ್ಯೆಯನ್ನು ಶಂಕರ ಭಗವತ್ಪಾದರು ಉಪದೇಶ ಮಾಡಿದ್ದಾರೆ ಎಂದರು.
Related Articles
ಮೇಧಾವಿ ತತ್ವಜ್ಞಾನಿ, ಸಂತರೂ ಆಗಿದ್ದರು ಎಂದರು.
Advertisement
ಸ್ವರ್ಣವಲ್ಲೀ ಮಹಾ ಸಂಸ್ಥಾನದ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.ಎಸ್.ಎನ್. ಭಟ್ಟ ಉಪಾಧ್ಯ ಸ್ವಾಗತಿಸಿದರು. ಶಂಕರ ಭಟ್ಟ ಉಂಚಳ್ಳಿ ನಿರೂಪಿಸಿದರು. ನಂತರ ಮಾತೆಯರು ಪಾಂಡುರಂಗಾಷ್ಟಕ ಪಠಿಸಿದರು. ಅದ್ವೈತ ಹಾಗೂ ಶಂಕರರದ್ದು ಅವಿನಾಭಾವ ಸಂಬಂಧ. ಶಂಕರಾಚಾರ್ಯರು ಎಂದು ಅದ್ವೈತ ಭಾವವಾಗಿತ್ತು. ಅವರದ್ದು ಸಮನ್ವಯತೆ ತತ್ವ, ವ್ಯಕ್ತಿತ್ವವಾಗಿತ್ತು. ದೊಡ್ಡ ತತ್ವಶಾಸ್ತ್ರಜ್ಞರಾಗಿದ್ದರು. ಉತ್ತಮ ಭೋದಕರಾಗಿದ್ದರು. ಮಹಾನ್ ಭಕ್ತರಾಗಿದ್ದರು, ಸಾಹಿತಿಯಾಗಿದ್ದರು. ಸುಲಲೀತವಾಗಿ ಪ್ರಸನ್ನ ಗಂಭೀರವಾದ ಭಾಷೆಯಲ್ಲಿ ಅದ್ವೈತವನ್ನು ನೀಡಿದ್ದಾರೆ.
*ಶ್ರೀವೀರೇಶಾನಂದ ಸ್ವಾಮೀಜಿ,
ಶ್ರೀ ರಾಮಕೃಷ್ಣ ಮಠ, ಬೆಂಗಳೂರು ಜಗತ್ತಿನ ಮೂಲ ವಸ್ತು ಯಾವುದೋ ಅದೇ ಜೀವದ ಮೂಲವೂ ಹೌದು. ಅದುವೇ ಅದ್ವೈತ. ಇದನ್ನು ಶಂಕರರು ಸಾಕಷ್ಟು
ಕಡೆಗಳಲ್ಲಿ ಹೇಳಿದ್ದಾರೆ.
ಶ್ರೀ ಗಂಗಾಧರೇಂದ್ರ ಸರಸ್ವತೀ
ಮಹಾ ಸ್ವಾಮೀಜಿ, ಸ್ವರ್ಣವಲ್ಲೀ