ತೆರೆದ ಬೆನ್ನಿಗೇ ಕರಡಿ ಕುಣಿತ ಶುರುವಾಗಿದೆ! ಷೇರು ಹೂಡಿಕೆಗಳ ಮೇಲೆ ತೆರಿಗೆ ವಿಧಿಸಿ ದ್ದರಿಂದ ಹೂಡಿಕೆದಾರರು ಷೇರು
ಗಳನ್ನು ಹಠಾತ್ತನೆ ಮಾರಲು ಮುಂದಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆ ಕುಸಿತ ಕಂಡಿದೆ. ಇದರಿಂದಾಗಿಶುಕ್ರವಾರ ಒಂದೇ ದಿನ ಸೆನ್ಸೆಕ್ಸ್ 840 ಅಂಕ ಇಳಿಕೆಯಾಗಿದೆ.
Advertisement
ಇದೇ ವೇಳೆ, ನಿಫ್ಟಿ 250 ಅಂಕ ಕುಸಿದು ದಿನದ ವಹಿವಾಟು ಅಂತ್ಯದ ವೇಳೆ 10,800ರ ಮಟ್ಟಕ್ಕಿಂತಲೂ ಕೆಳಕ್ಕಿಳಿಯಿತು.ಬಂಡವಾಳದ ಮೇಲಿನ ಲಾಭಕ್ಕೆ ದೀರ್ಘಕಾಲೀನ ಹೂಡಿಕೆಗೆ ಶೇ. 10ರಷ್ಟು ತೆರಿಗೆ ವಿಧಿಸಿರುವುದು ಹಾಗೂ ಷೇರು ಮಾರುಕಟ್ಟೆ ಆಧಾರಿತ ಮ್ಯೂಚುವಲ್ ಫಂಡ್‌ಗಳ ಮೇಲಿನ ಲಾಭದ ಮೇಲೆ ಶೇ. 10ರಷ್ಟು ತೆರಿಗೆ ವಿಧಿಸಿರುವುದು ಹೂಡಿಕೆದಾರರು ಹಣ ಹಿಂಪಡೆಯಲು ಕಾರಣವಾಯಿತು. ಈ ವಾರದಲ್ಲೇ ಸೆನ್ಸೆಕ್ಸ್ 983.69 ಅಂಕ, ಅಂದರೆ ಶೇ. 2.72 ಕುಸಿತ ಕಂಡಿದೆ. ಶುಕ್ರವಾರ
ಬಹುತೇಕ ಎಲ್ಲ ವಲಯದ ಷೇರುಗಳೂ ಕುಸಿತ ಕಂಡಿದ್ದು, ಈ ಪೈಕಿ ಕಳೆದ ಒಂದು ವರ್ಷದಲ್ಲಿ ಮೂಲಸೌಕರ್ಯ ವಲಯದ
ಷೇರುಗಳು ಹೆಚ್ಚು (ಶೇ.4.03) ಇಳಿದಿದೆ. ವಿದ್ಯುತ್ (ಶೇ.3.94), ಕ್ಯಾಪಿಟಲ್ ಗೂ ಡ್ಸ್ (ಶೇ.3.59), ಆಟೋ (ಶೇ. 3.47)
ವಲಯದ ಷೇರುಗಳು ಇಳಿಕೆ ಕಂಡಿವೆ.
ಹೆಚ್ಚು ಇಳಿದ ಷೇರುಗಳು ಸೆನ್ಸೆಕ್ಸ್
35,066.75
839.91
2.34%
Related Articles
10,760.60
256.30
2.33%
Advertisement