Advertisement

ಸಂಶೋಧನೆಯಲ್ಲಿ ಪುಟ್ಟ ಮಣಿ ಶ್ರಮ ಅಪಾರ

03:43 PM Jun 25, 2018 | Team Udayavani |

ಬೀದರ: ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಧರಿನಾಡಿನ ಈ ಪ್ರದೇಶವು ಸೌಹಾರ್ದ ಜೀವನಕ್ಕೂ ಆದರ್ಶಪ್ರಾಯವಾಗಿದೆ.ಕರ್ನಾಟಕದ ಚರಿತ್ರೆಗೆ ವಿಶಿಷ್ಟವಾದ ಆಯಾಮಗಳನ್ನು ನೀಡಿದ ಶ್ರೇಯಸ್ಸು ಈ ಭಾಗಕ್ಕೆ ಸಲ್ಲುತ್ತದೆ ಎಂದು ಕಲಬುರಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಪ್ರೊ| ವೆಂಕಣ್ಣ ಡೊಣ್ಣೆಗೌಡರು ಹೇಳಿದರು.

Advertisement

ನಗರದ ಜೈನ ಮಂದಿರ ಸಭಾಂಗಣದಲ್ಲಿ ರವಿವಾರ ಪ್ರಭುರಾವ್‌ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ 94ನೇ ಸಾಹಿತ್ಯ ಸಂಸ್ಕೃತಿ ಚಿಂತನೆಯ ಮಾಸಿಕ ಕಾರ್ಯಕ್ರಮದಲ್ಲಿ ಡಾ| ಪುಟ್ಟಮಣಿ ದೇವಿದಾಸ ಅವರ ಬದುಕು ಬರಹ ಕುರಿತು ಅವರು ಉಪನ್ಯಾಸ ನೀಡಿದರು.

ಈ ನೆಲದ ಶಾಸನ ಅಧ್ಯಯನದ ಉದ್ದೇಶ, ಕಾರ್ಯವ್ಯಾಪ್ತಿ, ಶಾಸನಗಳ ಪ್ರಕಾರಗಳು ಮತ್ತು ಅದರ ಮಹತ್ವ ಕುರಿತಂತೆ ಅಧ್ಯಯನ ಮಾಡುವುದು ಪ್ರಯಾಸದ ಕೆಲಸವಾದರೂ ಸಂಶೋಧಕಿ ಡಾ|ಪುಟ್ಟಮಣಿ ಅವರು ಅರ್ಥಪೂರ್ಣವಾಗಿ ಪೂರೈಸಿದ್ದಾರೆ ಎಂದು ವಿವರಿಸಿದರು.

ಡಾ|ಪುಟ್ಟಮಣಿ ದೇವಿದಾಸ ಮಾತನಾಡಿ, ಸಮಾಜದ ಪ್ರತಿಬಿಂಬವಾಗಿರುವ ಸಾಹಿತ್ಯವು ಜನಸಾಮಾನ್ಯರ ಬದುಕಿಗೆ ಕನ್ನಡಿ ಹಿಡಿದರೆ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಸಾಹಿತ್ಯ ಯಾವಾಗಲೂ ಜನಮುಖೀಯಾಗಬೇಕು. ಅಂದಾಗಲೇ ಅದು ಜೀವಂತಿಕೆ ಪಯುತ್ತದೆ ಎಂದರು. 

ಇದೆ ವೇಳೆ ಎಸ್‌ಎಸ್‌ಎಲ್‌ಸಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ಲಂಬಾಣಿ ಮಾತೃಭಾಷೆ ಹೊಂದಿದ್ದ ರಾಜು ಎಂ. ಪವಾರ ಅವರನ್ನು ಸನ್ಮಾನಿಸಲಾಯಿತು. ಎಸ್‌.ಎಂ. ಜನವಾಡಕರ್‌, ಪ್ರೊ| ವೆಂಕಣ್ಣ ಡೊಣ್ಣೆಗೌಡ, ಪರಮೇಶ್ವರಪ್ಪ ರೋಗನ್‌, ನಾಗಶೆಟ್ಟಿ ಧರಮಪುರ ಮಾತನಾಡಿದರು, ಚಂದ್ರಪ್ಪ ಹೆಬ್ಟಾಳಕರ್‌, ಪಂಚಾಕ್ಷರಿ ಪುಣ್ಯಶೆಟ್ಟಿ, ಗಂಧರ್ವ ಸೇನ, ಶಿವಕುಮಾರ ಕಟ್ಟೆ, ಬಾಬುರಾವ್‌ ಬಿರಾದಾರ, ಶಾಂತಕುಮಾರ ಉದಗಿರಿ, ಚಂದ್ರಗುಪ್ತ ಚಾಂದಕವಠೆ, ಪರಮೇಶ್ವರಪ್ಪ ರೋಗನ್‌, ಶಾಮರಾವ್‌ ನೆಲವಾಡೆ, ಪಂಡಿತ ಬಸವರಾಜ, ಭೀಮದಾಸ ಪ್ಯಾಗೆ, ಚನ್ನಪ್ಪ ಸಂಗೋಳಗಿ, ಉಮಾಕಾಂತ ಹಿರೋಳಿ, ಉಮಾಕಾಂತ ಮೀಸೆ, ಸಂಜೀವಕುಮಾರ ಅತಿವಾಳೆ, ಎಂ.ಪಿ. ಮುದಾಳೆ, ವಿಷ್ಣುಕಾಂತ ಬಲ್ಲೂರ, ರಮೇಶ ಬಿರಾದಾರ, ಪ್ರಭು ಮಾಲೆ, ವಿಜಯಕುಮಾರ ಸೋನಾರೆ,
ಹಾವಗಿರಾವ್‌ ಕಳಸೆ, ಪ್ರೊ| ಅಶೋಕ ಕೋರೆ, ಅಜೀತ, ಪಾರ್ವತಿ ಸೋನಾರೆ, ಜ್ಯೋತಿ ಗಿರಿ, ಗೌತಮಿ ಹಿರೋಳಿ, ರೇಣುಕಾ ಪ್ಯಾಗೆ, ಭುವನೇಶ್ವರ ಬಿರಾದಾರ, ಡಾ| ರಘುಶಂಖ ಭಾತಂಬ್ರಾ, ಡಾ| ರಾಮಚಂದ್ರ ಗಣಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next