ಬಟಿಂಡಾ: ಸೌಂದರ್ಯ ಸ್ಪರ್ಧೆಯ ಜಾಹೀರಾತಿನ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು,ಆಯೋಜಕರ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.
ಬಟಿಂಡಾದ ಮಹಿಳೆಯರ ಸೌಂದರ್ಯ ಸ್ಪರ್ಧೆಯ ಕುರಿತಾಗಿನ ಪೋಸ್ಟರ್ ಗಳನ್ನು ಹಲವೆಡೆ ಅಂಟಿಸಲಾಗಿತ್ತು. ವಿಜೇತೆಗೆ ಬಹುಮಾನವಾಗಿ ಕೆನಡಾ ದಲ್ಲಿ ನೆಲೆಸಿರುವ ಎನ್ಆರ್ ಐ ಯುವಕನನ್ನು ವಿವಾಹವಾಗುವ ಆಫರ್ ನೀಡಲಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತ ವಾಗಿತ್ತು.
ಇದನ್ನೂ ಓದಿ : ಜ್ಞಾನವಾಪಿ ಮಸೀದಿ ಪ್ರಕರಣ : ಕಾರ್ಬನ್ ಡೇಟಿಂಗ್ ಗೆ ಕೋರ್ಟ್ ನಕಾರ
ಅಕ್ಟೋಬರ್ 23 ರಂದು ಹೋಟೆಲ್‌ರೊಂದರಲ್ಲಿ ನಡೆಯಬೇಕಾಗಿದ್ದ ಸ್ಪರ್ಧೆಯ ಪ್ರಚಾರಕ್ಕಾಗಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಹಾಕಿದ್ದರು. ಸೌಂದರ್ಯ ಸ್ಪರ್ಧೆಯು ‘ಸಾಮಾನ್ಯ ಜಾತಿ’ ಮಹಿಳೆಯರಿಗೆ ಮಾತ್ರ ಎಂದು ಜಾಹೀರಾತಿನಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿತ್ತು. ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರು ಆಕ್ಷೇಪವನ್ನು ವ್ಯಕ್ತಪಡಿಸಲು ಪೋಸ್ಟರ್‌ಗಳಲ್ಲಿ ನೀಡಲಾದ ಫೋನ್ ಸಂಖ್ಯೆಗಳಿಗೆ ಕರೆ ಮಾಡಲು ಪ್ರಾರಂಭಿಸಿದರಾದರೂ, ಸಂಖ್ಯೆಗಳು ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಜನರು ತಮ್ಮ ಕೋಪವನ್ನು ವ್ಯಕ್ತಪಡಿಸಿ ಹಲವಾರು ನಿವಾಸಿಗಳು ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಸಂಪರ್ಕಿಸಿದ್ದರು.ಬಂಧಿತ ಆರೋಪಿಗಳನ್ನು ಸುರಿಂದರ್ ಸಿಂಗ್ ಮತ್ತು ರಾಮ್ ದಯಾಲ್ ಸಿಂಗ್ ಜೌರಾ ಎಂದು ಗುರುತಿಸಲಾಗಿದೆ.