Advertisement

ಜೆಎನ್‌ಯು ನಲ್ಲಿ ವಿವಾದಕ್ಕೆ ಕಾರಣವಾದ “ಜಿಹಾದಿ ಹಿಂಸಾಚಾರ’ಎಂಬ ಹೊಸ ಕೋರ್ಸ್‌!

05:36 PM Aug 30, 2021 | Team Udayavani |

ನವದೆಹಲಿ : ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆಂದೇ ಇರುವ ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಹೊಸ ಕೋರ್ಸ್‌ನಲ್ಲಿರುವ ಕೆಲವು ಅಂಶಗಳು ವಿವಾದಕ್ಕೆ ಕಾರಣವಾಗಿವೆ.

Advertisement

“ಜಿಹಾದಿ ಭಯೋತ್ಪಾದನೆ’ ಎನ್ನುವುದು “ಮೂಲಭೂತವಾದಿ-ಧಾರ್ಮಿಕ ಭಯೋತ್ಪಾದನೆ’ಯಾದರೆ, ಸೋವಿಯತ್‌ ಒಕ್ಕೂಟ ಮತ್ತು ಚೀನಾದ ಕಮ್ಯೂನಿಸ್ಟ್‌ ಆಡಳಿತದ್ದು “ಪ್ರಧಾನ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ’ಯಾಗಿದೆ. “ತೀವ್ರಗಾಮಿ ಇಸ್ಲಾಮಿಕ್‌ ಸ್ಟೇಟ್ಸ್‌’ ಮೇಲೂ ಇದು ಪ್ರಭಾವ ಬೀರಿದೆ ಎಂಬ ಅಂಶಗಳನ್ನು ಈ ಕೋರ್ಸ್‌ನಲ್ಲಿ ಪ್ರಸ್ತಾಪಿಸಲಾಗಿದೆ.

“ಉಗ್ರ ನಿಗ್ರಹ, ಅಸಮ್ಮತ ಸಂಘರ್ಷಗಳು ಮತ್ತು ಪ್ರಮುಖ ಶಕ್ತಿಗಳ ನಡುವಿನ ಸಹಕಾರಕ್ಕೆ ಸಂಬಂಧಿಸಿದ ಕಾರ್ಯತಂತ್ರಗಳು’ ಎಂಬ ಆಪ್ಶನಲ್‌ ಕೋರ್ಸ್‌ ಆರಂಭಿಸಲು ಆ.17ರಂದು ನಡೆದ ವಿವಿಯ ಶೈಕ್ಷಣಿಕ ಮಂಡಳಿ ನಿರ್ಧರಿಸಿತ್ತು. ಆದರೆ, ಈ ಸಮಯದಲ್ಲಿ ಕೋರ್ಸ್‌ ಕುರಿತು ಯಾವುದೇ ಚರ್ಚೆಗೆ ಅವಕಾಶ ನೀಡಿರಲಿಲ್ಲ ಎಂದು ಜೆಎನ್‌ಯು ಉಪನ್ಯಾಸಕರ ಸಂಘ ಆರೋಪಿಸಿತ್ತು. ಎಂಜಿನಿಯರಿಂಗ್‌ ಬಿಟೆಕ್‌ ಮುಗಿಸಿ “ಅಂತಾರಾಷ್ಟ್ರೀಯ ಸಂಬಂಧಗಳ’ ವಿಷಯದಲ್ಲಿ ಎಂಎಸ್‌ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕೋರ್ಸ್‌ ಮಾಡಬಹುದಾಗಿದೆ.

ಇದನ್ನೂ ಓದಿ :ಸೆ.1 ರಿಂದ ಮಾರುತಿ ಕಾರುಗಳು ದುಬಾರಿ : ಕಂಪನಿಯಿಂದ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಲಿಖಿತ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next