Advertisement

ಕಣ್ಣಿಗೆ ಬಿದ್ದಿದ್ದು ಮೂರು ಹೆಲ್ಮೆಟ್‌, ಕಾರ್ಮಿಕರಲ್ಲ!

12:30 AM Dec 30, 2018 | Team Udayavani |

ಕ್ಸಾನ್‌ (ಮೇಘಾಲಯ): ಇಲ್ಲಿನ ಈಸ್ಟ್‌ ಜೈಂತಿಯಾ ಹಿಲ್ಸ್‌ನಲ್ಲಿ ಸಂಭವಿಸಿರುವ ಗಣಿಗಾರಿಕೆ ದುರಂತದಲ್ಲಿ 320 ಅಡಿ ಆಳದಲ್ಲಿ ಸಿಲುಕಿರುವ 15 ಕಾರ್ಮಿಕರ ರಕ್ಷಣಾ ಕಾರ್ಯ ಹಗಲಿರುಳೆನ್ನದೆ ಸಾಗುತ್ತಿದೆ. ಈ ನಡುವೆ ವಾಯುಪಡೆಯ ವಿಮಾನಗಳಲ್ಲಿ 10 ಹೆವಿ ಡ್ನೂಟಿ ನೀರಿನ ಪಂಪ್‌ಗ್ಳನ್ನು ತರಲಾಗಿದ್ದು ಅವು ಶನಿವಾರ ದುರಂತ ನಡೆದಿರುವ ಸ್ಥಳವನ್ನು ತಲುಪಿವೆ. ಅಲ್ಲಿಂದ ನೀರನ್ನು ಎತ್ತಲು ಪ್ರಯತ್ನಿಸಲಾಗುತ್ತಿದೆ. ವಿಶಾಖಪಟ್ಟಣದಿಂದ ನೌಕಾಪಡೆಯ 15 ಅನುಭವಿ ಡೈವರ್‌ಗಳೂ ಬಂದಿದ್ದಾರೆ. 16ನೇ ದಿನದ ಕಾರ್ಯಾಚರಣೆ ವೇಳೆ ಶನಿವಾರ, ಕಾರ್ಮಿಕರು ಸಿಲುಕಿರುವ ಕಡೆಯಿಂದ ಮೂರು ಹೆಲ್ಮೆಟ್‌ಗಳು ತೇಲಿ ಬಂದಿವೆ. ಕಾರ್ಮಿಕರು ಉಳಿದಿರುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿವೆ. 

Advertisement

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನಡೆಸುತ್ತಿರುವ ಕಾರ್ಯಾಚರಣೆಗೆ ಕೊಂಚ ಹಿನ್ನೆಡೆ ಉಂಟಾಗಿತ್ತು. ಗಣಿಯ ಆಳದಲ್ಲಿ ಹರಿಯುತ್ತಿದ್ದ ನೀರು ಕಾರ್ಮಿಕರು ಸಿಲುಕಿರುವ ಪ್ರದೇಶಗಳನ್ನು ಆವರಿಸಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಾರ್ಯಾಚರಣೆಗೆ ತಡೆಯಾಗಿತ್ತು. ಕಿರ್ಲೋಸ್ಕರ್‌ ಕಂಪನಿಯು ಹೆವಿ ಡ್ನೂಟಿ ನೀರಿನ ಪಂಪುಗಳನ್ನು ಪೂರೈಸುವುದಾಗಿ ಸ್ವಯಂಪ್ರೇರಿತವಾಗಿ ಮುಂದೆ ಬಂದಿತ್ತು. 10 ಪಂಪ್‌ಗ್ಳನ್ನು ಸಂಸ್ಥೆ ಪೂರೈಸಿದ್ದು, ಕೋಲ್‌ ಇಂಡಿಯಾ ವತಿಯಿಂದ ಇಂಥದ್ದೇ 8 ಪಂಪ್‌ಗ್ಳು ಘಟನಾ ಸ್ಥಳದತ್ತ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದು, ಜಾಗ ತಲುಪಲು ಇನ್ನೂ 2-3 ದಿನ ಬೇಕಾಗಬಹುದು.

ಬದುಕಿರಲು ಸಾಧ್ಯವೇ ಇಲ್ಲ: ಈ ನಡುವೆ, ಗಣಿ ದುರಂತ ನಡೆದು 16 ದಿನಗಳೇ ಕಳೆದು ಹೋಗಿದ್ದು 320 ಅಡಿ ಆಳದಲ್ಲಿ ಸಿಲುಕಿರುವ ಕಾರ್ಮಿಕರು ಬದುಕಿ ಬರುವುದು ಅಸಾಧ್ಯ ಎಂದು ಇದೇ ದುರಂತ ದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ಕಾರ್ಮಿಕ ಸಾಹಿಬ್‌ ಅಲಿ ಹೇಳಿದ್ದಾರೆ. “ಘಟನೆ ನಡೆದಾಗ ನಾವು 22 ಮಂದಿಯಿದ್ದೆವು. ಡಿ. 13ರ ಮುಂಜಾನೆ 5ರ ಸುಮಾರಿಗೆ ತಣ್ಣನೆಯ ಗಾಳಿ ಎಲ್ಲಿಂದಲೋ ಬೀಸುತ್ತಿರುವುದು ಅನುಭವಕ್ಕೆ ಬಂತು. ಅದಾಗಿ ಕೆಲವೇ ಸೆಕೆಂಡುಗಳಲ್ಲಿ ಗಣಿಯೊಳಕ್ಕೆ ಎಲ್ಲಿಂದಲೋ ನೀರು ನುಗ್ಗಲಾರಂಭಿಸಿತು. ನಾನು ಹಾಗೂ ಇತರರು ಬೇಗನೇ ಈಜಿ ಮೇಲೆ ಬಂದೆವು. ಘಟನೆ ನಡೆದು 16 ದಿನಗಳೇ ಕಳೆದಿವೆ. ಒಳಗೆ ಸಿಲುಕಿರುವವರು 16 ದಿನ ಹೇಗೆ ಉಸಿರು ಕಟ್ಟಿಕೊಂಡು ನೀರಿನಲ್ಲಿ ಮುಳುಗಿರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next