Advertisement

ಹಲವೆಡೆ ಮುಂದುವರಿದ ಮಳೆ ಅವಘಡ

06:05 AM Jun 04, 2018 | Team Udayavani |

ಬೆಂಗಳೂರು/ಮಂಗಳೂರು: ರಾಜಧಾನಿ ಬೆಂಗಳೂರು, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಭಾನುವಾವೂ ಮಳೆ 
ಯಾಗಿದೆ. ಈ ಮಧ್ಯೆ, ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಚಿಕ್ಕೋಡಿಯಲ್ಲಿ
ರಾಜ್ಯದಲ್ಲೇ ಗರಿಷ್ಠ, 7 ಸೆಂ.ಮೀ. ಮಳೆ ಸುರಿಯಿತು.

Advertisement

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗೊಂದಿಹಳ್ಳಿಯಲ್ಲಿ ರೇಷ್ಮೆ ಶೆಡ್‌ನ‌ಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್‌ ಅವ
ಘಡಕ್ಕೆ ರೆಡ್ಡಪ್ಪ (58) ಎಂಬುವರು ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಮಳೆ ಬಂದಾಗ ಬೀಸಿದ ಬಾರಿ ಗಾಳಿಗೆ ವಿದ್ಯುತ್‌ ಸಮಸ್ಯೆ ಉಂಟಾಗಿತ್ತು. ಅದನ್ನು ಸರಿಪಡಿಸುವ ವೇಳೆ ವಿದ್ಯುತ್‌ ಶಾಕ್‌ ಹೊಡೆಯಿತು. 

ಶಿವಮೊಗ್ಗದಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಗೆ ಹಲವೆಡೆ ಸಂಪರ್ಕ ರಸ್ತೆ ಕಡಿದುಹೋಗಿದ್ದು, ಜನರು ಪರದಾಡುವಂತಾಯಿತು. ತಾಲೂಕಿನ ಹೊರಬೈಲು ಗ್ರಾಮದ ಸಂಪರ್ಕ ರಸ್ತೆ ಬಂದ್‌ ಆಗಿದ್ದು, ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ಹರಿಯುತ್ತಿತ್ತು. ಸುತ್ತಮುತ್ತಲ ಗದ್ದೆ, ತೋಟಗಳಿಗೂ ನೀರು ನುಗ್ಗಿದ್ದು, ಹಲವೆಡೆ ಶುಂಠಿ ಗದ್ದೆಗಳಲ್ಲಿ ನೀರು ನುಗ್ಗಿದ ಪರಿಣಾಮ ಬಿತ್ತನೆ ಮಾಡಿದ್ದ ಶುಂಠಿ, ಮೆಕ್ಕೆಜೋಳ ಕೊಚ್ಚಿ ಹೋಗಿದೆ.

ಕರಾವಳಿಯ ಕೆಲವೆಡೆಯೂ ಮಳೆಯಾಗಿದ್ದು, ಕೆದೂರಿನಲ್ಲಿ ಸಿಡಿಲು ಬಡಿದು ಕೆಲ ಮನೆಗಳಿಗೆ ಹಾನಿಯಾಗಿದೆ. ಮಂಗಳವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆ ಯಂತೆ ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಲಾಶಯಗಳ ಒಳಹರಿವು ಹೆಚ್ಚಳ
ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ.

Advertisement

ಕೆಆರ್‌ಎಸ್‌ನ ನೀರಿನ ಮಟ್ಟ (124.80 ಅಡಿ ಗರಿಷ್ಠ) 75.55 ಅಡಿಗಳಿಗೆ ಏರಿದೆ. ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ(2284.00 ಅಡಿ ಗರಿಷ್ಠ) ನೀರಿನ ಮಟ್ಟ 2258.40 ಅಡಿಗೆ ಏರಿದೆ. ಜಲಾಶಯ ಭರ್ತಿಯಾಗಲು 25.60 ಅಡಿ ಬಾಕಿ ಇದೆ.

ಹಾಸನ ಜಿಲ್ಲೆಯ ಹೇಮಾವತಿಯಲ್ಲಿ (2922.00 ಅಡಿ ಗರಿಷ್ಠ) 2867.50 ಅಡಿ ನೀರು ಸಂಗ್ರಹವಿದ್ದು, ಭರ್ತಿಯಾಗಲು 54.50 ಅಡಿ ಬಾಕಿ ಇದೆ. ಕೊಡಗಿನ ಹಾರಂಗಿಯಲ್ಲಿ (2859.00 ಅಡಿ ಗರಿಷ್ಠ) 2784.23 ಅಡಿ ನೀರು ಸಂಗ್ರಹವಿದ್ದು,ಭರ್ತಿಯಾಗಲು 74.77 ಅಡಿ ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next