Advertisement

Indian Railways: ಪ್ರಮುಖ ರೈಲುಗಳಲ್ಲಿ ಶೇ. 25ರ ವರೆಗೆ ರಿಯಾಯಿತಿ

09:07 PM Jul 08, 2023 | Team Udayavani |

ಹೊಸದಿಲ್ಲಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಹಿತ ಪ್ರಮುಖ ರೈಲುಗಳ ಹವಾನಿಯಂತ್ರಿತ ಬೋಗಿ, ವಿಶೇಷ ಪ್ರಯಾಣಿಕ ದರ್ಜೆಯ ಟಿಕೆಟ್‌ಗಳ ಮೂಲ ದರದಿಂದ ಶೇ. 25ರ ವರೆಗೆ ಇಳಿಕೆ ಮಾಡಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಅವುಗಳಲ್ಲಿ ವಿಸ್ಟಾಡೋಮ್‌, ಅನುಭೂತಿ ಕೋಚ್‌ಗಳೂ ಸೇರಿವೆ. ಒಂದು ತಿಂಗಳ ಅವಧಿಯಲ್ಲಿ ಒಟ್ಟು ಸೀಟುಗಳ ಪೈಕಿ ಶೇ. 50ಕ್ಕಿಂತ ಕಡಿಮೆ ಸೀಟುಗಳು ಭರ್ತಿಯಾಗುವ ರೈಲುಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ. ಇದು ತತ್‌ಕ್ಷಣದಿಂದ ಜಾರಿಗೆ ಬರಲಿದೆ.

Advertisement

ಜಿಎಸ್‌ಟಿ, ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಶುಲ್ಕ, ಸೂಪರ್‌ ಫಾಸ್ಟ್‌ ಸರ್ಚಾರ್ಜ್‌ ಮತ್ತಿತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ ಎಂದು ಮಂಡಳಿ ಹೇಳಿದೆ. ಆಯಾ ರೈಲ್ವೇ ವಲಯಗಳ ಮುಖ್ಯ ವಾಣಿಜ್ಯ ಅಧಿಕಾರಿಗಳಿಗೆ ರಿಯಾಯಿತಿ ದರದ ಶುಲ್ಕ ನಿಯಮ ಅನುಷ್ಠಾನಗೊಳಿಸುವ ಅಧಿಕಾರ ನೀಡಲಾಗಿದೆ. ಒಂದು ವೇಳೆ ಬುಕ್‌ ಮಾಡಿದ ಟಿಕೆಟ್‌ ರದ್ದುಗೊಳಿಸಿದರೆ ಅದನ್ನು ರೀ ಫ‌ಂಡ್‌ ಮಾಡುವ ಅವಕಾಶ ಇಲ್ಲ. ವಿಶೇಷ ರೈಲುಗಳಿಗೆ ಈ ದರಕಡಿತ ಅನ್ವಯವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next