ಉನಾವ ಪ್ರಾಂತ್ಯದಲ್ಲಿ ನಡೆದ ಅತ್ಯಾಚಾರ ಆರೋಪಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರು ಸುರತ್ಕಲ್‌ನಲ್ಲಿ ಪ್ರತಿಭಟನೆ ಹಾಗೂ ಶೋಕಾಚರಣೆ ನಡೆಸಿದರು.
Advertisement
ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ ಮಾತನಾಡಿ, ಈ ಬರ್ಬರ ಕೃತ್ಯದಿಂದ ಭಾರತಕ್ಕೆ ಕಳಂಕ ತಂದಿದ್ದರೂ ಇಂತಹ ಘಟನೆಗಳಾದಾಗ ಪಕ್ಷ , ಜಾತಿ ಜತೆ ಸೇರಿಸಿ ಪ್ರತಿಭಟನೆ ಮಾಡುವುದು ತಪ್ಪು. ಅವುಗಳ ವಿರುದ್ಧ ರಾಜಕೀಯ, ಜಾತಿ ರಹಿತ ಪ್ರತಿಭಟನೆ ಆದಾಗ ಮಾತ್ರ ಹೋರಾಟಗಳಿಗೆ ಅರ್ಥ ಬರುತ್ತದೆ. ಆರೋಪಿಗಳು ಯಾವುದೇ ಸಮಾಜದವರಿರಲಿ ಕಠಿನ ಶಿಕ್ಷೆಯಾಗುವಂತೆ ಆಗಬೇಕು ಎಂದರು.
ಸಾಮಾಜಿಕ ಹೋರಾಟಗಾರ್ತಿ ನಂದಾ ಬಾಯಿ ಮಾತನಾಡಿ, ಮಹಿಳೆಯರು ಇಂತಹ ದೌರ್ಜನ್ಯಗಳಾದಾಗ ಒಗ್ಗಟ್ಟಾಗಿ ಪ್ರತಿಭಟಿಸಿ ಸರಕಾರಕ್ಕೆ ಒತ್ತಡ ಹಾಕಬೇಕು. ಮಹಿಳೆಯ ಸಬಲೀಕರಣಕ್ಕೆ ಮಹಿಳೆಯರು ಎಚ್ಚೆತ್ತು ಸಂಘಟನೆ ಮೂಲಕ ಶಕ್ತಿ ಪ್ರದರ್ಶಿಸ ಬೇಕು ಮಾತ್ರವಲ್ಲ ಮಹಿಳೆಯರ ಹಕ್ಕೊತ್ತಾಯಗಳನ್ನು ಸರಕಾರ ಪೂರೈಸುವಷ್ಟು ಪ್ರಬಲತೆಯನ್ನು ಪಡೆಯಬೇಕು. ಕೊಲೆ ಕೃತ್ಯ ನಡೆಸಿದ ಆರೋಪಿಗಳಿಗೆ ಶಿಕ್ಷೆಯಾಗುವ ಮೂಲಕ ಬೇರೆ ಯಾರೂ ಇಂತಹ ಕೃತ್ಯಕ್ಕೆ ಇಳಿದಂತೆ ಮಾಡಬೇಕಾಗಿದೆ ಎಂದರು. ಶೋಕಾಚರಣೆ
ಪ್ರತಿಭಟನೆ ಬಳಿಕ ಕ್ಯಾಂಡಲ್ ಉರಿಸಿ ಶೋಕಾಚರಣೆ ನಡೆಸಲಾಯಿತು. ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ,
ಮಹಮ್ಮದ್, ಸದಾಶಿವ ಶೆಟ್ಟಿ, ರಾಜೇಶ್ ಕುಳಾಯಿ, ಪ್ರತಿಭಾ ಕುಳಾಯಿ, ಆನಂದ ಅಮೀನ್, ಬಶೀರ್ ಬೈಕಂಪಾಡಿ, ಬಶೀರ್ ಅಹ್ಮದ್, ಹರೀಶ್ ಸುರತ್ಕಲ್, ವೈ. ರಾಘವೇಂದ್ರ ರಾವ್, ಹುಸೈನ್ ಕಾಟಿಪಳ್ಳ, ಗೋವರ್ಧನ ಶೆಟ್ಟಿಗಾರ್, ಮಮ್ತಾಜ್ ಆಲಿ, ಸಂತೋಷ್ ಶೆಟ್ಟಿ, ಮಲ್ಲಿಕಾರ್ಜುನ್, ಹಂಝ, ರೆಹಮಾನ್ ಖಾನ್ ಕುಂಜತ್ತಬೈಲ್ ಮೊದಲಾದವರಿದ್ದರು.