Advertisement

Avarakhoda ಮಾರುತಿ ಮಹಿಮೆ-ಈ ಊರಲ್ಲಿ ಜನರು ಶಬ್ದವೇ ಮಾಡುವಂತಿಲ್ಲ,ನಿಶ್ಯಬ್ಧವಾಗಿರಬೇಕು!

05:28 PM Mar 09, 2024 | ನಾಗೇಂದ್ರ ತ್ರಾಸಿ |

ಕರ್ನಾಟಕದ ಬೆಳಗಾವಿ ಜಿಲ್ಲೆಯ ಅವರಖೋಡ ಗ್ರಾಮದಲ್ಲಿ ಇರುವ ಸ್ವಯಂಭೂ ಮಾರುತಿ ದೇವಾಲಯ ದೀರ್ಘ ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ. ಸುಮಾರು 500 ವರ್ಷಗಳಷ್ಟು ಹಿಂದಿನ ಈ ಪವಿತ್ರ ಯಾತ್ರಾ ಸ್ಥಳ ಕೇವಲ ಪುರಾತನವಾಗಿ ಮಾತ್ರವಲ್ಲ ವಿಶಿಷ್ಟ ಆಚರಣೆಗಳಿಂದ ಸಾವಿರಾರು ಭಕ್ತರ ಆರಾಧ್ಯ ದೇವರಾಗಿದ್ದಾನೆ.

Advertisement

ಏನಿದರ ಇತಿಹಾಸ, ವಿಶೇಷತೆ:

14ನೇ ಶತಮಾನದಲ್ಲಿ ಬಾಲಚಂದ್ರ ಶಾಸ್ತ್ರಿಗಳು ಇಲ್ಲಿರುವ ಪ್ರಾಣದೇವರ ಪ್ರತಿಷ್ಠಾಪನೆಗೆ ಮುಖ್ಯ ಕಾರಣಕರ್ತರು. ಬಾಲಚಂದ್ರ ಶಾಸ್ತ್ರಿಗಳ ಕನಸಿನಲ್ಲಿ ಪ್ರತ್ಯಕ್ಷವಾಗಿ , ಕೃಷ್ಣೆಯಲ್ಲಿ ನನ್ನ ಚಿಕ್ಕ ಮೂರ್ತಿ ಇದೆ. ಅದನ್ನು ತಂದು ಪ್ರತಿಷ್ಠಾಪಿಸು ಎಂದಾಗ, ಮರುದಿನ ಶಾಸ್ತ್ರಿಗಳು ನದಿಗೆ ಹೋಗಿ ಮುಳುಗಿದಾಗ 6 ಅಂಗುಲದ ಚಿಕ್ಕಮೂರ್ತಿ. ಚಿಕ್ಕ ಮೂರ್ತಿ ಸಿಕ್ಕಿತ್ತು. ಕಲ್ಲಿನಲ್ಲಿ ಪ್ರಾಣದೇವರು ಸ್ಯಯಂಭೂವಾಗಿ ಒಡಮೂಡತೊಡಗಿದ್ದು, ಇದು ಕೆತ್ತಿದ ಮೂರ್ತಿಯಂತ ಕ್ರಮೇಣ ಬೆಳೆಯುತ್ತ ಇದೀಗ ಆಕೃತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ದಕ್ಷಿಣಕ್ಕೆ ಮುಖ ಮಾಡಿಕೊಂಡು ಕೈಮುಗಿದುಕೊಂಡು ತಪೋಭಂಗಿಯಲ್ಲಿ ಕುಳಿತಿದ್ದಾನೆ. ಈ ಮೂರ್ತಿ ಒಂದು ಅಡಿ ಎತ್ತರವಾಗಿದ್ದು, ಪ್ರತಿದಿನ ಪೂಜೆ ನೆರವೇರುತ್ತಿದೆ. ಪೂಜೆ ಮಾಡಲು ಗರ್ಭಗುಡಿಯಲ್ಲಿ ಕೇವಲ ಬ್ರಹ್ಮಚಾರಿಗಳಿಗೆ ಮಾತ್ರ ಅವಕಾಶ.

ಇಡೀ ಗ್ರಾಮವೇ ನಿಶ್ಯಬ್ಧ, ಯಾವುದೇ ಜಾತಿ-ಧರ್ಮದವರು ಶಬ್ದ ಮಾಡುವಂತಿಲ್ಲ!

ಅವರಖೋಡದಲ್ಲಿ ಶಬ್ದಕ್ಕೆ ಸಂಪೂರ್ಣ ನಿಷೇಧ, ಇಲ್ಲಿ ಏನಿದ್ದರೂ ನಿಶ್ಯಬ್ದವೇ ಪ್ರಧಾನ ಎಂಬ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತಿದೆ. ಇದು ಹನುಮಂತನೆಡೆಗಿನ ಭಕ್ತಿ-ಭಾವದ ಸಂಕೇತವಾಗಿದೆ. ಇಡೀ ಅವರಖೋಡ ಗ್ರಾಮದಲ್ಲಿ ಸಾರ್ವಜನಿಕ ಭಾಷಣವಾಗಲಿ, ಮೆಕ್ಯಾನಿಕಲ್‌ ಕೆಲಸದ ಶಬ್ದವಾಗಲಿ ಅಥವಾ ಮದುವೆ, ಹಳದಿ ಶಾಸ್ತ್ರ ಯಾವುದೇ ಇರಲಿ ಶಬ್ದ ಮಾಡುವುದಕ್ಕೆ ನಿರ್ಬಂಧವಿದೆ. ಹಾಗಾಗಿ ಇಲ್ಲಿ ಎಲ್ಲವೂ ನಿಶ್ಯಬ್ಧ!

Advertisement

ಅಷ್ಟೇ ಯಾಕೆ ಸಾಮಾನ್ಯವಾಗಿ ಬಡಗಿಗಳು, ಕುಂಬಾರರು, ಕಮ್ಮಾರಂತಹ ಕುಶಲಕರ್ಮಿಗಳ ಕೆಲಸ ಶಬ್ದದಿಂದ ಕೂಡಿರುತ್ತದೆ. ಆದರೆ ಅಮರಖೋಡ ಗ್ರಾಮದಲ್ಲಿ ಬಡಗಿಗಳು, ಕಮ್ಮಾರರು ತಮ್ಮ ಕೆಲಸವನ್ನು ಗ್ರಾಮದ ವ್ಯಾಪ್ತಿಯಿಂದ ಹೊರಗೆ ಹೋಗಿ ನಿರ್ವಹಿಸುತ್ತಾರಂತೆ. ಈ ಸಂಪ್ರದಾಯ ದೇವಾಲಯದ ಪಾವಿತ್ರ್ಯತೆ ಮತ್ತು ಅವರಖೋಡದ ಆಧ್ಯಾತ್ಮಿಕ ವಾತಾವರಣ ಯಾವುದೇ ಅಡೆತಡೆ ಇಲ್ಲದೆ ಜಾತಿ-ಧರ್ಮದ ಬೇಧವಿಲ್ಲದೆ ಮುಂದುವರಿಯುತ್ತಿದೆ.

ಹನುಮಂತನ ದೈವಿಕ ವಾಣಿಯನ್ನು ಧಿಕ್ಕರಿಸಿದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಾಗಿದೆ. ಮೌನವನ್ನು ಧಿಕ್ಕರಿಸಿ ಶಬ್ದ ಮಾಡಿದಲ್ಲಿ ಉದ್ಯೋಗ ನಷ್ಟ ಮತ್ತು ದುರದೃಷ್ಟಕರ ನಿದರ್ಶನಗಳಿಂದ ಸಾಕ್ಷಿಯಾಗಿದೆ ಎಂದು ವರದಿ ವಿವರಿಸಿದೆ.

ಅವರಖೋಡಕ್ಕೆ ದ್ರಾಕ್ಷಿ ಬೆಳೆಯೇ ಪ್ರಮುಖ ಆದಾಯದ ಮೂಲವಾಗಿದೆ. ಇತ್ತೀಚೆಗೆ ಗ್ರಾಮಸ್ಥರು ಒಟ್ಟಾಗಿ ದೇವಾಲಯದ ಪುನರ್‌ ನಿರ್ಮಾಣ ಮಾಡಿದ್ದಾರೆ. 2011ರ ಜನಗಣತಿ ಪ್ರಕಾರ ಅವರಖೋಡದಲ್ಲಿ 660 ಮನೆಗಳಿದ್ದು, 3,437 ಸಾವಿರ ಜನಸಂಖ್ಯೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next