Advertisement

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

01:20 AM Jun 17, 2024 | Team Udayavani |

ಟೋಕಿಯೊ: ಕೋವಿಡ್‌ ಸಾಂಕ್ರಾಮಿಕ ಭೀತಿ ಮಾಸಿದ ಬೆನ್ನಲ್ಲೇ, ಸೋಂಕು ತಗಲಿದ 48 ಗಂಟೆಯಲ್ಲೇ ಮಾನವನ ಸಾವಿಗೆ ಕಾರಣವಾಗುವ ಮಾಂಸ-ಭಕ್ಷಕ ಬ್ಯಾಕ್ಟೀರಿಯಾ ಎಂಬ ಅಪರೂಪ ಕಾಯಿಲೆಯು ಜಪಾನ್‌ನಲ್ಲಿ ವ್ಯಾಪಕವಾಗಿ ಪ್ರಸರಣಗೊಳ್ಳುತ್ತಿದೆ.

Advertisement

ಜಪಾನ್‌ನಲ್ಲಿ ಜೂನ್‌ 2ರ ಹೊತ್ತಿಗೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ (ಸ್ಟ್ರೆಪ್ಟೋಕೊಕಲ್‌ ಟಾಕ್ಸಿಕ್‌ ಶಾಕ್‌ ಸಿಂಡ್ರೋಮ್‌-ಎಸ್‌ಟಿಎಸ್‌ಎಸ್‌) ಪ್ರಕರಣಗಳು 977ಕ್ಕೆ ಏರಿಯಾಗಿವೆ. ಕಳೆದ ವರ್ಷ 941 ಪ್ರಕರಣಗಳು ಪತ್ತೆಯಾಗಿದ್ದವು ಎಂದು ಜಪಾನ್‌ನ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ ಹೇಳಿದೆ.

ಈ ಬ್ಯಾಕ್ಟೀರಿಯಾದಿಂದ ಗಂಟಲಿನಲ್ಲಿ ಊತ ಮತ್ತು ಗಂಟಲು ಕೆರೆತ ಉಂಟಾಗುತ್ತದೆ. ಕೆಲವು ಬ್ಯಾಕ್ಟೀರಿಯಾಗಳು ತೀವ್ರಗತಿಯಲ್ಲಿ ಸೋಂಕಿಗೆ ಕಾರಣವಾಗುತ್ತವೆ ಮತ್ತು ಕೈಕಾಲು ನೋವು ಮತ್ತು ಊತ, ಜ್ವರ, ಕಡಿಮೆ ರಕ್ತದೊತ್ತಡದಂಥ ಗುಣಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರ ಪರಿಣಾಮ, ರೋಗಿಯಲ್ಲಿ ನೆಕ್ರೋಸಿಸ್‌, ಉಸಿರಾಟ ತೊಂದರೆ, ಅಂಗಾಂಗ ವೈಫ‌ಲ್ಯ ಉಂಟಾಗಿ ರೋಗಿ ಸಾವಿಗೀಡಾಗಬಹುದುಎಂದು ಟೋಕಿಯೊ ಮಹಿಳಾ ವೈದ್ಯ ವಿವಿ ಪ್ರೊಫೆಸರ್‌ ಕೆನ್‌ ಕಿಕುಚಿ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next