Advertisement

ಐಸಿಎಸ್‌ಇಯಲ್ಲಿ 17ಮಂದಿ ಉತ್ತಮ ಸಾಧನೆ

12:52 AM May 08, 2019 | Lakshmi GovindaRaj |

ಬೆಂಗಳೂರು: 2019ನೇ ಶೈಕ್ಷಣಿಕ ವರ್ಷದ “ಇಂಡಿಯನ್‌ ಸರ್ಟಿಫಿಕೇಟ್‌ ಆಫ್ ಸೆಕಂಡರಿ ಎಜುಕೇಷನ್‌’ (ಐಸಿಎಸ್‌ಇ) 10 ನೇ ತರಗತಿ ಪರೀಕ್ಷೆಗಳಲ್ಲಿ ರಾಜ್ಯದ 17 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Advertisement

ಈ ವರ್ಷ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗಳ ಫ‌ಲಿತಾಂಶ ಮಂಗಳವಾರ ಪ್ರಕಟವಾಗಿದ್ದು, 9 ಬಾಲಕರು ಹಾಗೂ 8 ಬಾಲಕೀಯರು ಸೇರಿ ಒಟ್ಟು 17 ವಿದ್ಯಾರ್ಥಿಗಳು ಶೇ.99 ಮತ್ತು ಶೇ.98 ಅಂಕಗಳನ್ನು ಪಡೆದಿದ್ದಾರೆ.

ಈ ಬಾರಿ ಐಸಿಎಸ್‌ಇ ಪರೀಕ್ಷೆಗೆ ರಾಜ್ಯದ 321 ಶಾಲೆಗಳಿಂದ 9,215 ಹಾಗೂ 9,002 ಬಾಲಕೀಯರು ಸೇರಿ ಒಟ್ಟು 18,217 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಐಸಿಎಸ್‌ಇ ಯಲ್ಲಿ ರಾಜ್ಯದಲ್ಲಿ ಶೇ.99.77 ಫ‌ಲಿತಾಂಶ ಬಂದಿದ್ದು, ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.

ಐಸಿಎಸ್‌ಇ ಟಾಪರ್: ಸಾಧನಾ ವಿ.- ಶ್ರೀ ವಾಣಿ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು. ನಿತಿನ್‌ ಅರವಿಂದ ಬಿರೂರು-ಎಂ.ಇ.ಎಸ್‌-ಕಿಶೋರ ಕೇಂದ್ರ, ಬೆಂಗಳೂರು. ಅನಘ ಎಚ್‌.ಸಿ-ಎಂ.ಇ.ಎಸ್‌-ಕಿಶೋರ ಕೇಂದ್ರ, ಬೆಂಗಳೂರು. ಸಾನಾ ದತ್‌-ವಿಬ್‌ಗಯಾರ್‌ ಹೈಸ್ಕೂಲ್‌, ಮಾರತಹಳ್ಳಿ, ಬೆಂಗಳೂರು. ನಿತ್ಯಾ ಅಗರ್ವಾಲ್‌-ವಿಬ್‌ಗಯಾರ್‌ ಹೈಸ್ಕೂಲ್‌, ಮಾರತಹಳ್ಳಿ, ಬೆಂಗಳೂರು. ತೇಜಲ್‌ ದೈವಜ್ಞ- ವಿಬ್‌ಗಯಾರ್‌ ಹೈಸ್ಕೂಲ್‌, ಬೆಂಗಳೂರು. ಶಾನಾ ದಿಯಾ ಸುಜಿತ್‌-ಕ್ಯಾಂಬ್ರಿಡ್ಜ್ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು. ಸಿರಿ ಶಂಕರತೋಟ-ಕ್ಯಾಂಬ್ರಿಡ್ಜ್ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು. ನಿವೇಶ್‌ ಮಹೇಶ್ವರಿ-ವಿಬ್‌ಗಯಾರ್‌ ಹೈಸ್ಕೂಲ್‌, ಮಾರತಹಳ್ಳಿ, ಬೆಂಗಳೂರು. ಅಜಿಪ್ರತಿಮ್‌ ನಾಗ್‌-ದಿ ಫ್ರ್ಯಾಂಕ್‌ ಆಂತೋಣಿ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು.

ಅಮೃತಾ ಪ್ರೀತಂ-ಕಾರ್ಮೆಲ್‌ ಸ್ಕೂಲ್‌, ಬೆಂಗಳೂರು. ಮ್ರಿದುಲ್‌ ಗುಪ್ತಾ-ಬಿಷಪ್‌ ಕಾಟನ್‌ ಬಾಯ್ಸ ಸ್ಕೂಲ್‌, ಬೆಂಗಳೂರು. ಆಕಾಶ್‌ ಮಲ್ಲಿಕ್‌- ಪ್ರಸಿಡೆನ್ಸಿ ಸ್ಕೂಲ್‌, ನಂದಿನಿಲೇಔಟ್‌, ಬೆಂಗಳೂರು. ಬಿ.ಎಸ್‌.ಅನಿವೃದ್ಧ್- ಸೇಂಟ್‌ ಆ್ಯನ್ಸ್‌ ಹೈಸ್ಕೂಲ್‌, ಬೆಂಗಳೂರು. ಆಯುಷ್‌ ಬಹುವಾಲಾ-ಗ್ರೀನ್‌ಹುಡ್‌, ಬೆಂಗಳೂರು. ಮೆಲ್ವಿನ್‌ ಮೋನ್ಸಿ ಪರೇಲ್‌-ಸೆಂಟ್‌ ಥಾಮಸ್‌ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು. ವಿರೇಶ್‌ ಬಿ ಪಾಟೀಲ್‌- ದಿ. ನ್ಯೂ ಕೆಂಬ್ರಿಡ್ಜ್ ಇಂಗ್ಲಿಷ್‌ ಸ್ಕೂಲ್‌, ಬೆಂಗಳೂರು.

Advertisement
Advertisement

Udayavani is now on Telegram. Click here to join our channel and stay updated with the latest news.

Next