Advertisement
ಈಗಾಗಲೇ ಭಾರತೀಯ ಸೇನೆಯು ಈ ಡ್ರೋನ್ ಅನ್ನು ಗಡಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಸಂಬಂಧ ಕಂಪನಿಯು ಮಾತುಕತೆ ನಡೆಸಿದ್ದು, ಪೂರಕ ಸ್ಪಂದನೆಯೂ ದೊರಕಿದೆ. ಇನ್ನೂ ಮುಂದುವರಿದು ಕೊರಿಯರ್ ಸೇವೆ ಪರಿಚಯಿಸಲಿಕ್ಕೂ ಕಂಪನಿ ಉದ್ದೇಶಿಸಿದೆ. ಇಸ್ರೇಲ್‌ನಲ್ಲಿ ಈ ಸೇವೆಯನ್ನು ಪರಿಚಯಿಸಲಾಗಿದೆ. ನಮ್ಮಲ್ಲಿಯೂ ಸಾಧಕ- ಬಾಧಕಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ. ಯಾವುದಾದರೂ ಕೊರಿಯರ್ ಕಂಪನಿಗಳು ಮುಂದೆಬಂದರೆ, ಸೇವೆಗೆ ಸಿದಟಛಿವಾಗಿದೆ ಎಂದು ಎಲ್‌ಕಂಪೋನಿಕ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈ.ಲಿ.,ನ ಉಪಾಧ್ಯಕ್ಷೆ ನಿಧಿ ಶಾರದಾ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆನ್‌ಲೈನ್ ಮಾರುಕಟ್ಟೆ ಮುನ್ನೆಲೆಗೆ ಬಂದಿದ್ದು, ನಿತ್ಯ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಡ್ರೋನ್ ಮೂಲಕ ಲಾಜಿಸ್ಟಿಕ್ ಸೇವೆ ಕಲ್ಪಿಸುವುದರಿಂದ ಜನರಿಗೆ ತ್ವರಿತ ಗತಿಯಲ್ಲಿ ಪಾರ್ಸೆಲ್‌ಗಳನ್ನು ತಲುಪಿಸಬಹುದು. ಸೇವೆಯಲ್ಲಿ ನಿಖರತೆ ಬರಲಿದೆ. ಸಮಯ ಉಳಿತಾಯದ ಜತೆಗೆ ಮಾನವರಹಿತ ವಾಹನ ಆಗಿರುವುದರಿಂದ ಮತ್ತೂಬ್ಬರ ಅವಲಂಬನೆ ತಪ್ಪಲಿದೆ. ನಿರಂತರವಾಗಿ ಸುಮಾರು 12 ತಾಸುಗಳ ಹಾರಾಟ ನಡೆಸಬಲ್ಲದು. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮತಿ ಸೇರಿದಂತೆ ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ಆರು ತಿಂಗಳಲ್ಲಿ ಕೊರಿಯರ್ ಸೇವೆ ಆರಂಭಿಸಲಾಗುವುದು. ಹಾಗೊಂದು ವೇಳೆ ಇದು ಸಾಧ್ಯವಾದರೆ, ದೇಶದಲ್ಲೇ ಇಂತಹದ್ದೊಂದು ಪ್ರಯೋಗ ಮೊದಲು ಬಾರಿಗೆ ನಡೆಯಲಿದೆ. ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕಂಪನಿಯೊಂದಿಗೆ ಚರ್ಚೆಗಳು ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಉಳಿದ ಡ್ರೋನ್‌ಗಳಿಗೆ ಹೋಲಿಸಿದರೆ, ಇದು ತುಸು ಭಿನ್ನವಾಗಿದೆ. 150 ಕೆಜಿ ಪೇಲೋಡ್ ಹೊಂದಿರುವ ಈ ಡ್ರೋನ್, ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಆಹಾರ, ಔಷಧಿಗಳು ಮತ್ತಿತರ ಸಾಮಗ್ರಿಗಳನ್ನು ಇದರ ಮೂಲಕ ಸಾಗಿಸಬಹುದಾಗಿದೆ ಎಂದರು.